“ನಗುವವರು ಬೇಕಾಗಿದ್ದಾರೆ…. ಸಂಪರ್ಕಿಸಿ” ಇದೆಂತಹ ಕರ್ಮ ಸ್ವಾಮೀ…??

ಹೌದು..ಜಗತ್ತು ಹೇಗೆ ಬದಲಾಗಿದೆ ನೋಡಿ. ನಗುವುದಕ್ಕೋ, ಅಳುವುದಕ್ಕೋ, ನಗುವ ಹಂಚಿ ಜನರೊಡನೆ ಬೆರೆಯುವುದಕ್ಕೋ ಜಾಹಿರಾತು ನೀಡುವ ಪ್ರಪಂಚ ಇದಾಗ… ಹೊರಟಿದೆ. ಎಷ್ಟು ದುಡಿದರೂ ನೆಮ್ಮದಿಯನ್ನು ಖರೀದಿಸಲಾರ ಎಂಬ ನೈಜತೆ ಕಣ್ಣೆದುರಿಗಿದ್ದರೂ, ಇದ್ದ ಒಂದು ಜನ್ಮವನ್ನು ಹಣಕ್ಕಾಗಿ ಕಳೆಯುತ್ತಿದ್ದೇವೆ.

ಜೀವನಕ್ಕೆ ಹಣ ಬೇಕು ನಿಜ. ಆದರೆ ಜೀವನವೇ ಹಣವಲ್ಲ. ಹಣದ ವ್ಯಾಮೋಹದಲ್ಲಿ ದೈನಿಕ ಕೆಲಸ ಕಾರ್ಯಗಳು ಆಧುನೀಕರಣಗೊಳ್ಳುತ್ತಿದೆ. ಹಿಂದೆ ಬೇಜಾರಾದರೆ ನೆರೆಹೊರೆಯವರಲ್ಲಿ ಹರಟುವುದೋ, ವೈಚಾರಿಕ ಚರ್ಚೆ ನಡೆಸುವುದೋ, ಊರ ಬಯಲಲ್ಲಿ ಯಕ್ಷಗಾನ ತಾಳಮದ್ದಲೆಯಂತ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಬೆರೆಯುವುದೋ ಮಾಡುತ್ತಿದ್ದ ಜನ ಇಂದು ಕಂಪ್ಯೂಟರೀಕರಣಗೊಂಡು ಜನರ ಸಂಪರ್ಕವೇ ಇಲ್ಲದೇ ಬದುಕುತ್ತಿದ್ದೇವೆ.

ಮಕ್ಕಳು ಅಪ್ಪನ ಮುಖ ಕಾಣದೇ ಅದೆಷ್ಟೋ ದಿನಗಳಾಗುವುದುಂಟು.ದಿನವಿಡೀ ಕಂಡವರ ಕೈಕೆಳಗೆ ದುಡಿದು ಸೋತು ಸುಣ್ಣವಾಗಿ, ಹಣದ ಗಳಿಕೆಯೇ ಜೀವನ ಶ್ರೇಷ್ಟ ಎಂದು ಭಾವಿಸಿ, ಹೆಂಡತಿ ಮಕ್ಕಳು ನೆಂಟರು ಇಷ್ಟರು, ಸ್ನೇಹಿತರು ಇಷ್ಟೇ ಏಕೆ….? ಕೊನೆಗೆ ತಮ್ಮನ್ನು ತಾವು ಮಾತನಾಡಿಸಿಕೊಳ್ಳಲು ಸಮಯವಿಲ್ಲದ ಸೋ ಕಾಲ್ಡ್ ಪ್ರಗತಿಪರರೆನಿಸಿಕೊಂಡಿದ್ದೇವೆ.

ನಮ್ಮವರೊಂದಿಗೆ ಕುಳಿತು ಉಂಡು ಅದೆಷ್ಟು ಕಾಲವಾಗುವುದೋ ಏನೋ… ಅಪ್ಪನಿಗೆ ಉದ್ಯೋಗದ ಕಿರಿಕಿರಿ… ಅಮ್ಮನಿಗೆ ಮನ ಕದಡುವ/ಕಾಡುವ ಧಾರಾವಾಹಿಗಳ ಹಾವಳಿ. ಮಕ್ಕಳಿಗಾದರೋ ಸಿನೇಮಾ, ಫೇಸ್​​ಬುಕ್, ವಾಟ್ಸ್’ಆಪ್ ಗಳ ಕಿರುಕುಳ. ಒಟ್ಟಿನಲ್ಲಿ ಎಲ್ಲರಿಗೂ ಅವರವರದೇ ಸಮಸ್ಯೆ. ಕೂತು ಊಟಮಾಡುವುದು ಬಿಡಿ ಮುಖ ಕಂಡು ಹಾಯ್ ಬಾಯ್ ಹೇಳಲೂ ಸಮಯವಿಲ್ಲ.

ಭಾವನೆಗಳೆಲ್ಲ ಬತ್ತಿ ನಿಂತು, ಭಾವನಾತ್ಮಕ ಸಂಬಂಧಗಳು ನಶಿಸುತ್ತಿದೆ. ಸಮಸ್ಯೆಗಳೇ ದೊಡ್ಡ ಸಮಸ್ಯೆಯಾಗಿದೆ. ಪ್ರೀತಿ, ವಾತ್ಸಲ್ಯ, ಸ್ನೇಹ, ನಂಬಿಕೆ ಎಲ್ಲವೂ ಸಂತೆಯಲಿಟ್ಟ ಬಾಡಿದ ತರಕಾರಿಯಂತಾಗಿದೆ. ನಲಿವುದನ್ನೇ ಮರೆತಿದ್ದೇವೆ. ನಗು, ನೀರೇ ಇಲ್ಲದ ಬಾವಿಯಂತಾಗಿದೆ. ಅದಕ್ಕೆ ಇಲ್ಲದ ನಗುವಿಗಾಗಿ ನಗುವವರು ಬೇಕಾಗಿದ್ದಾರೆ…. ಸಂಪರ್ಕಿಸಿ…..!!!

ಪದ ಪೋಷಣೆ : ಕೃಷ್ಣ ಗುಮ್ಮಾನಿ

ಕೃಷ್ಣ ಗುಮ್ಮಾನಿ
ಕೃಷ್ಣ ಗುಮ್ಮಾನಿ

 

Please follow and like us:
0
http://bp9news.com/wp-content/uploads/2018/11/photo-1489278353717-f64c6ee8a4d2.jpghttp://bp9news.com/wp-content/uploads/2018/11/photo-1489278353717-f64c6ee8a4d2-150x150.jpgBP9 Bureauಅಂಕಣಪ್ರಮುಖ'ನಗುವವರು ಬೇಕಾಗಿದ್ದಾರೆ.... ಸಂಪರ್ಕಿಸಿ' ಇದೆಂತಹ ಕರ್ಮ ಸ್ವಾಮೀ...?? ಹೌದು..ಜಗತ್ತು ಹೇಗೆ ಬದಲಾಗಿದೆ ನೋಡಿ. ನಗುವುದಕ್ಕೋ, ಅಳುವುದಕ್ಕೋ, ನಗುವ ಹಂಚಿ ಜನರೊಡನೆ ಬೆರೆಯುವುದಕ್ಕೋ ಜಾಹಿರಾತು ನೀಡುವ ಪ್ರಪಂಚ ಇದಾಗ... ಹೊರಟಿದೆ. ಎಷ್ಟು ದುಡಿದರೂ ನೆಮ್ಮದಿಯನ್ನು ಖರೀದಿಸಲಾರ ಎಂಬ ನೈಜತೆ ಕಣ್ಣೆದುರಿಗಿದ್ದರೂ, ಇದ್ದ ಒಂದು ಜನ್ಮವನ್ನು ಹಣಕ್ಕಾಗಿ ಕಳೆಯುತ್ತಿದ್ದೇವೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal