ಬೆಂಗಳೂರು : ಬಾಗಲಕೋಟೆಯ ಜಮಖಂಡಿಯಲ್ಲಿ ಬಿಜೆಪಿ ಪರ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತಿನ ಭರಾಟೆಯಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನವರು ಇತಿಹಾಸ ತಿಳಿದಿಲ್ಲ. ತಿರುಚುತ್ತಲೇ ಬಂದಿದ್ದಾರೆ. ಅವರು ಅವರ ಹಿರಿಯರ ಇತಿಹಾಸ ತಿಳಿದಿಲ್ಲದಿದ್ದರೆ ಬೇಡ ಬಿಡಿ. ಗಾಂಧಿಜೀಯವರ ಬಗ್ಗೆ ಅರಿವಿಲ್ಲದಿದ್ದರೇ ಬೇಡ ಬಿಡಿ.  ಈ ಭಾಗದ ಮುಧೋಳ ನಾಯಿಗಳ ಬಗ್ಗೆಯಾದರೂ ತಿಳಿದು ಕೊಳ್ಳಿ. ಇವತ್ತು ದೇಶದ ಸೇನೆಯಲ್ಲಿ ಮುಧೋಳ ಶ್ವಾನ ದಳವನ್ನೇ ಪ್ರಾರಂಭಿದ್ದೇವೆ. ಮುಧೋಳ ನಾಯಿಯಲ್ಲಿಯೂ ದೇಶಭಕ್ತಿಯನ್ನು ಗುರುತಿಸಿದ್ದೇವೆ. ಆ ಕಾರಣವಾಗಿಯೇ ನಾವು ಮುಧೋಳ ಶ್ವಾನ ದಳದ ತುಕಡಿಯನ್ನು ಸ್ಥಾಪನೆ ಮಾಡಲಾಗಿದೆ. ಈ ಮುಧೋಳ ಶ್ವಾನಗಳ ಬಳಿಯಾದರೂ ತಾವು ಈ ದೇಶ ಭಕ್ತಿಯ ಬಗ್ಗೆ ತಿಳಿದು ಕೊಳ್ಳ ಬೇಕಾದ ಅಗತ್ಯ ಇದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.


ಇನ್ನು ಪ್ರಥಮ ಸ್ವತಂತ್ರ ಸಂಗ್ರಾಮದ ಹಲಗಲಿಯ ಬೇಡರ ಕ್ರಾಂತಿ ಎಂದೂ ಮರೆಯಲಾಗದು ಎಂದ ಅವರು, ಇವರದು ದೇಶ ಭಕ್ತಿ ಮಾತು ಬಂದಾಗ, ಭಾರತ್ ಮಾತಾಕಿ ಜೈ ಎಂಬ ಮಾತು ಬಂದಾಗ, ದೇಶಭಕ್ತಿಯಲ್ಲೂ ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡಲು ಮುಂದಾಗಿದೆ. ಯಾರಾದರೂ ಕಲ್ಪನೆ ಮಾಡಿಕೊಳ್ಳಲು ಮಾಡಿಕೊಳ್ಳಲು ಸಾಧ್ಯವೇ, ದೇಶವನ್ನು ಭಾಗ ಮಾಡುವವರ ಮಧ್ಯ ನಿಂತು ನಮ್ಮ ವಿರುದ್ಧ ಮಾತನಾಡುತ್ತಾರೆ. ಸರ್ಜಿಕಲ್ ಸ್ಟ್ರೈಕ್  ವಿಚಾರದಲ್ಲಿಯೂ ಇವರ ಬಳಿ ಕೊಂಕು ಇದೆ. ಇದು ಕಾಂಗ್ರೆಸ್ನ ದೇಶ ಭಕ್ತಿಯೇ ಎಂದು ಮೋದಿ ಪ್ರಶ್ನಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/ಮೋದಿ-ಜಮಖಂಡಿ.jpghttp://bp9news.com/wp-content/uploads/2018/05/ಮೋದಿ-ಜಮಖಂಡಿ-150x150.jpgPolitical Bureauಪ್ರಮುಖಬಾಗಲಕೋಟೆರಾಜಕೀಯLearn from devotion to the 'mud dog' Modi's narrative statementಬೆಂಗಳೂರು : ಬಾಗಲಕೋಟೆಯ ಜಮಖಂಡಿಯಲ್ಲಿ ಬಿಜೆಪಿ ಪರ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತಿನ ಭರಾಟೆಯಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನವರು ಇತಿಹಾಸ ತಿಳಿದಿಲ್ಲ. ತಿರುಚುತ್ತಲೇ ಬಂದಿದ್ದಾರೆ. ಅವರು ಅವರ ಹಿರಿಯರ ಇತಿಹಾಸ ತಿಳಿದಿಲ್ಲದಿದ್ದರೆ ಬೇಡ ಬಿಡಿ. ಗಾಂಧಿಜೀಯವರ ಬಗ್ಗೆ ಅರಿವಿಲ್ಲದಿದ್ದರೇ ಬೇಡ ಬಿಡಿ.  ಈ ಭಾಗದ ಮುಧೋಳ ನಾಯಿಗಳ ಬಗ್ಗೆಯಾದರೂ ತಿಳಿದು ಕೊಳ್ಳಿ. ಇವತ್ತು ದೇಶದ ಸೇನೆಯಲ್ಲಿ ಮುಧೋಳ ಶ್ವಾನ ದಳವನ್ನೇ ಪ್ರಾರಂಭಿದ್ದೇವೆ. ಮುಧೋಳ ನಾಯಿಯಲ್ಲಿಯೂ...Kannada News Portal