ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಭಿಮಾನಿಗಳು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅಂದಹಾಗೇ ದರ್ಶನ್​ ಏನೋ ಸಿನಿಮಾ ಮಾಡೋದ್ರಲ್ಲಿ ಬ್ಯುಸಿ, ಆದರೆ ಅವರ ಅಭಿಮಾನಿಗಳು  ಯಾವ ಕೆಲಸದಲ್ಲಿ ಬ್ಯಸಿಯಾಗಿದ್ದಾರೆ ಗೊತ್ತಾ…? ಸ್ಯಾಂಡಲ್​ವುಡ್​ನಲ್ಲಿ ಕೆಲ ಸ್ಟಾರ್​ಗಳು ಸಾಮಾಜಿಕ ಕೆಲಸ ಕಾರ್ಯಗಲಲ್ಲಿ   ಬ್ಯುಸಿ ಆಗಿದ್ದಾರೆ. ಚಾಲೆಂಜಿಂಗ್​ ಸ್ಟಾರ್​ಗೆ ಪ್ರಾಣಿಗಳೆಂದ್ರೆ ಎಲ್ಲಿಲ್ಲದ ಪ್ರೀತಿ ಆ ಕಾಳಜಿಗೆ ಅವರು ತಮ್ಮ ಫಾರ್ಮ್​ ಹೌಸ್​ನಲ್ಲಿ ಒಂದಷ್ಟು ಪ್ರಾಣಿಗಳನ್ನು ಸಾಕಿ ಸಲಹುತ್ತಿದ್ದಾರೆ. ಗಿಡ ಮರಗಳನ್ನು ನೆಟ್ಟು ಹಚ್ಚ ಹಸಿರನ್ನು  ಉಳಿಸುತ್ತಿದ್ದಾರೆ.  ಇದೀಗ ಹೆಮ್ಮೆ ಪಡುವಂತಹ  ಕೆಲಸವನ್ನು ದರ್ಶನ್​ ಮಾಡಿದ್ದಾರೆ.  ಚಾಲೆಂಜಿಂಗ್​ ಸ್ಟಾರ್​  ಮಾಡಿದ ಕ್ಲಾಸ್​ಗೆ ಅಭಿಮಾನಿಗಳು ಫುಲ್​ ಸ್ಟಡಿ ಆಗಿಬಿಟ್ಟಿದ್ದಾರೆ.  ಅರಣ್ಯ ಇಲಾಖೆ   ವಿಶ್ವ ಪರಿಸರ  ದಿನಾಚರಣೆ ಅಂಗವಾಗಿ  ಗಿಡ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ದರ್ಶನ್​ ಭಾಗೀಯಾಗಿದ್ದರು. ಆ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಭಿಯಾನಕ್ಕೆ ದರ್ಶನ್​ ಕೂಡ ಸಾಥ್​ ಕೊಟ್ಕೊಟಿದ್ಟ್ಟಿದನ್ದ್ದನು ನೋಡಿ ಅಭಿಮಾನಿಗಳು ಇದೀಗ ಪರಿಸರ ಉಳಿವಿಗೆ ಕೈ ಜೋಡಿಸುತ್ತಿದ್ದಾರೆ.

ದರ್ಶನ್​ ಅವರ ಮೇಲೆ ಒಂದು ಮಾತಿದೆ. ಅವರು ಸಿನಿಮಾ ಕೆಲಸ ಬಿಟ್ಟು ಬೇರೆ ಯಾವ ಕೆಲಸದ ಕಡೆಯೂ ಗಮನ ಹರಿಸುವುದಿಲ್ಲ.ಆದರೂ ಕೆಲವೊಂದು ಬಾರಿ ಸಿನಿಮಾಗಳಾಚೆ  ಹೊರ ಬರುತ್ತಾರೆ  ದರ್ಶನ್.  ಸದ್ಯ   ಪರಿಸರ ಜಾಗೃತಿ ಅಭಿಯಾನಕ್ಕೆ  ಕೈ ಜೋಡಿಸಿದ್ದಾರೆ.. ಅದಕ್ಕೆ ಕಾರಣ ಅವರಲ್ಲಿದ್ದ ಪರಿಸರ ಪ್ರೇಮ, ಅರಣ್ಯ ಇಲಾಖೆ ಪ್ರಪೋಸಲ್​ ಒಂದನ್ನು ಕೊಟ್ಟಾಗ ಮರು ಮಾತಿಲ್ಲದೇ ಒಪ್ಪಿಕೊಂಡ್ರಂತೆ ದರ್ಶನ್​. ಅರಣ್ಯ ಇಲಾಖೆ ಜೊತೆ ಕೈ ಜೋಡಿಸಿ ಸಾಥ್​ ಕೊಟ್ಟಿದ್ದಾರೆ. ಅಲ್ಲದೇ ಜೂನ್​ 5 ರಂದು ಪರಿಸರ ದಿನಾಚರಣೆ ಅಂಗವಾಗಿ ಮರ-ಗಿಡಗಳನ್ನು  ನೆಟ್ಟಿದ್ದಾರೆ.

ದರ್ಶನ್​ ಅವರನ್ನೇ ಈ ಕೆಲಸಕ್ಕೆ ರಾಯಭಾರಿಯನ್ನಾಗಿ  ಮಾಡಿಕೊಳ್ಳಲು  ಕಾರಣವಿದ್ಯಂತೆ. ಒಂದು ಅವರಿಗಿದ್ದ ಪರಿಸರ  ಪ್ರೇಮ, ಪ್ರಾಣಿ-ಪಕ್ಷಿಗಳ ಕಾಳಜಿ, ಇನ್ನೊಂದು ದರ್ಶನ್​ಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗ ಉಂಟು. ದರ್ಶನ್​ ಅವರ ಕೆಲಸ ನೋಡಿಯಾದ್ರೂ ಅಭಿಮಾನಿಗಳು ಆ ದಾರಿಯಲ್ಲಿ ಸಾಗುತ್ತಾರೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಇಂತಹದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಆ ನಂಬಿಕೆಯಿಂದಲೇ ಈ ಅಭಿಯಾನಕ್ಕೆ  ಒಪ್ಪಿ ದರ್ಶನ್ ಕೂಡ ಭಾಗೀಯಾಗಿದ್ದರು.

ಜೂನ್​ 8 ಕ್ಕೆ  ದರ್ಶನ್​ ಅವರ ಡಿ ಬಾಸ್​​ ಗ್ರೂಪ್​ಗೆ  7 ವರ್ಷ ತುಂಬಿದೆ. ಚಾಲೆಂಜಿಗ್​ ಸ್ಟಾರ್​ ದರ್ಶನ್​  ಅವರ  ಅಫೀಶಿಯಲ್​ ಅಭಿಮಾನಿಗಳ ಗ್ರೂಪ್​ನ ಒಂದು ಉದ್ದೇಶ , ಪ್ರತಿಯೊಬ್ಬ ಅಭಿಮಾನಿಯು ಒಂದೊಂದು  ಗಿಡ ನೆಡಬೇಕೆಂಬುದು.  ಇದೀಗ ಸದ್ಯ   ಆರಂಭದಲ್ಲಿಯೇ ಅದರ ಕೆಲಸ ಸ್ವಲ್ಪ ಮಟ್ಟಿಗೆ  ವರ್ಕ್​ ಆಗಿದಂತಿದೆ.

Please follow and like us:
0
http://bp9news.com/wp-content/uploads/2018/06/darshan_0.jpghttp://bp9news.com/wp-content/uploads/2018/06/darshan_0-150x150.jpgBP9 Bureauಸಿನಿಮಾಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಭಿಮಾನಿಗಳು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅಂದಹಾಗೇ ದರ್ಶನ್​ ಏನೋ ಸಿನಿಮಾ ಮಾಡೋದ್ರಲ್ಲಿ ಬ್ಯುಸಿ, ಆದರೆ ಅವರ ಅಭಿಮಾನಿಗಳು  ಯಾವ ಕೆಲಸದಲ್ಲಿ ಬ್ಯಸಿಯಾಗಿದ್ದಾರೆ ಗೊತ್ತಾ...? ಸ್ಯಾಂಡಲ್​ವುಡ್​ನಲ್ಲಿ ಕೆಲ ಸ್ಟಾರ್​ಗಳು ಸಾಮಾಜಿಕ ಕೆಲಸ ಕಾರ್ಯಗಲಲ್ಲಿ   ಬ್ಯುಸಿ ಆಗಿದ್ದಾರೆ. ಚಾಲೆಂಜಿಂಗ್​ ಸ್ಟಾರ್​ಗೆ ಪ್ರಾಣಿಗಳೆಂದ್ರೆ ಎಲ್ಲಿಲ್ಲದ ಪ್ರೀತಿ ಆ ಕಾಳಜಿಗೆ ಅವರು ತಮ್ಮ ಫಾರ್ಮ್​ ಹೌಸ್​ನಲ್ಲಿ ಒಂದಷ್ಟು ಪ್ರಾಣಿಗಳನ್ನು ಸಾಕಿ ಸಲಹುತ್ತಿದ್ದಾರೆ. ಗಿಡ ಮರಗಳನ್ನು ನೆಟ್ಟು ಹಚ್ಚ ಹಸಿರನ್ನು  ಉಳಿಸುತ್ತಿದ್ದಾರೆ. ...Kannada News Portal