ಬೆಂಗಳೂರು: ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆದ ಮಂಗಲ ಗೋಯಾತ್ರೆ ನಾಡಿನಾದ್ಯಂತ ದೊಡ್ಡ ಅಲೆ ಎಬ್ಬಿಸಿದೆ, ಇದೀಗ  ಗೋಸಂರಕ್ಷಣೆಯ ಹಕ್ಕೊತ್ತಾಯವನ್ನು ಪಡೆಯಲು ನಾಡಿನ ಪ್ರತಿ ವ್ಯಕ್ತಿಯನ್ನು ತಲುಪಬೇಕಾಗಿದೆ.ಮನುಷ್ಯರ ಜೀವನ ಗೋವನ್ನು ಆಧರಿಸಿರುವುದನ್ನು ಮನವರಿಕೆ ಮಾಡಿ, ಪ್ರತಿಯೊಬ್ಬರ ಮನಸ್ಸಿನ ಭಾವವನ್ನು ಅಕ್ಷರ ರೂಪಕ್ಕೆ ಪರಿವರ್ತಿಸಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಜುಲೈ 9 ರಿಂದ ಆರಂಭವಾಗಲಿರುವ ಚಾತುರ್ಮಾಸ್ಯವ್ರತದ ನಿಮಿತ್ತ ಗಿರಿನಗರದ ಶ್ರೀರಾಮಾಶ್ರಮಕ್ಕೆ ಆಗಮಿಸಿದ ಶ್ರೀಗಳು, ‘ಅಭಯಚಾತುರ್ಮಾಸ್ಯ’  ಗೋಕೇಂದ್ರಿತ ಕಾರ್ಯಕ್ರಮವಾಗಿದೆ. ಗೋವಿಗೆ ಅಭಯ ನೀಡುವ ವಿವಿಧ ಕಾರ್ಯಕ್ರಮಗಳಿಂದ ಕೂಡಿದ  ಆಂದೋಲನ ಇದಾಗಿದೆ.’ಅಭಯಚಾತುರ್ಮಾಸ್ಯ’ ಹಾಗೂ ಅದಕ್ಕೆ ಹೊಂದಿಕೊಂಡಿರುವ ‘ಹಾಲುಹಬ್ಬ’ ಇವೆಲ್ಲವೂ ಬೆಂಗಳೂರಿಗರ ಹಬ್ಬವಾಗಿದ್ದು, ಬೆಂಗಳೂರಿನ ಪ್ರತಿಮನೆ – ಪ್ರತಿವ್ಯಕ್ತಿಯನ್ನು ತಲುಪಿ, ಇಡೀ ದೇಶ ಬೆಂಗಳೂರಿನೆಡೆಗೆ ತಿರುಗಿನೋಡುವಂತೆ ಗೋವಿನ ಪರವಾದ ಅಲೆ ಏಳುವಂತೆ ಮಾಡಬೇಕು ಎಂದು ಗೋಪರಿವಾರ ಹಾಗೂ ಕಾರ್ಯಕರ್ತರಿಗೆ ಆಶೀರ್ವದಿಸಿದರ.

ಸಾಂಪ್ರದಾಯಿಕ ಸ್ವಾಗತದ ಜೊತೆಗೆ, ಮಕ್ಕಳು ತಾವು ಸಹಿಮಾಡಿದ ಅಭಯಾಕ್ಷರದ ಹಕ್ಕೊತ್ತಾಯದ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸುವ ಮೂಲಕ ಶ್ರೀಗಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು.ನಾಡಿನ ಭವಿಷ್ಯವಾದ ಮಕ್ಕಳು, ಗೋವಂಶದ ಭವಿಷ್ಯದ ಕುರಿತಾದ ಹಕ್ಕೊತ್ತಾಯ ಮಂಡಿಸಿ, ಅಭಯಾಕ್ಷರಕ್ಕೆ ಮುನ್ನುಡಿ ಹಾಕಿದ್ದು ವಿಶೇಷವಾಗಿತ್ತು.

 

 

 

Please follow and like us:
0
http://bp9news.com/wp-content/uploads/2017/07/DSC03348-1024x684.jpghttp://bp9news.com/wp-content/uploads/2017/07/DSC03348-150x150.jpgBP9 Bureauಆಧ್ಯಾತ್ಮಬೆಂಗಳೂರು: ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನಡೆದ ಮಂಗಲ ಗೋಯಾತ್ರೆ ನಾಡಿನಾದ್ಯಂತ ದೊಡ್ಡ ಅಲೆ ಎಬ್ಬಿಸಿದೆ, ಇದೀಗ  ಗೋಸಂರಕ್ಷಣೆಯ ಹಕ್ಕೊತ್ತಾಯವನ್ನು ಪಡೆಯಲು ನಾಡಿನ ಪ್ರತಿ ವ್ಯಕ್ತಿಯನ್ನು ತಲುಪಬೇಕಾಗಿದೆ.ಮನುಷ್ಯರ ಜೀವನ ಗೋವನ್ನು ಆಧರಿಸಿರುವುದನ್ನು ಮನವರಿಕೆ ಮಾಡಿ, ಪ್ರತಿಯೊಬ್ಬರ ಮನಸ್ಸಿನ ಭಾವವನ್ನು ಅಕ್ಷರ ರೂಪಕ್ಕೆ ಪರಿವರ್ತಿಸಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಜುಲೈ 9 ರಿಂದ ಆರಂಭವಾಗಲಿರುವ ಚಾತುರ್ಮಾಸ್ಯವ್ರತದ ನಿಮಿತ್ತ ಗಿರಿನಗರದ ಶ್ರೀರಾಮಾಶ್ರಮಕ್ಕೆ ಆಗಮಿಸಿದ ಶ್ರೀಗಳು, ‘ಅಭಯಚಾತುರ್ಮಾಸ್ಯ’  ಗೋಕೇಂದ್ರಿತ ಕಾರ್ಯಕ್ರಮವಾಗಿದೆ. ಗೋವಿಗೆ ಅಭಯ ನೀಡುವ ವಿವಿಧ ಕಾರ್ಯಕ್ರಮಗಳಿಂದ...Kannada News Portal