ಸಿನಿಟಾಕ್ :  ಪ್ರಧಾನಿ ಮೋದಿ ಮತ್ತು ಬಿಜೆಪಿ  ಬಗ್ಗೆ  ಟ್ವಿಟ್ಟರ್​ನಲ್ಲಿ ವಾರ್​ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದ ಪ್ರಕಾಶ್​ ರೈ, ಇದೀಗ ರೆಸಾರ್ಟ್​ನಲ್ಲಿ ಬಿಡಾರ ಹೂಡಿರುವ ಕಾಂಗ್ರೆಸ್​ ಶಾಸಕರ ಕಾಲೆಳೆದು ಹಾಸ್ಯ  ಚಟಾಕಿ ಹಾರಿಸಿದ್ದಾರೆ.  ”ರೆಸಾರ್ಟ್ ಮ್ಯಾನೇಜರ್ ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯಾಕಂದ್ರೆ, 116 ಶಾಸಕರು ಅವರ ಜೊತೆಯಲ್ಲಿದ್ದಾರೆ. ಆಟ ಈಗ ಶುರು” ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯ ರಾಜಕೀಯವೇ ಆತಂಕದಲ್ಲಿ ಮುಳುಗುತ್ತಿದ್ದರೆ ಇತ್ತ ಟ್ವಿಟ್ಟರ್​ನಲ್ಲಿ ಪ್ರಕಾಶ್​ ರೈ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಕರ್ನಾಟಕ ರಾಜಕೀಯ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್, ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಮಾಸ್ಟರ್ ಪ್ಲ್ಯಾನ್​ ಮಾಡುತ್ತಿವೆ. ಈ ರೀತಿ ಚಿಂದಿ ಚಿತ್ರಾನ್ನ ಆಗಿರುವ ರಾಜ್ಯ ರಾಜಕಾರಣದ ಬಗ್ಗೆ  ಪ್ರಕಾಶ್​ ರೈ ಕಿಡಿಕಾರಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ಆಗುವ ಎಲ್ಲಾ  ಲಕ್ಷಣಗಳು ಕಂಡು ಬರುತ್ತಿವೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಮತ್ತು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಬಗ್ಗೆ ಕಾಲೆಳೆದಿರುವ ಪ್ರಕಾಶ್ ರೈ  ಅವರ ಮಾತಿಗೆ ನಗಬೇಕೋ ಅಳಬೇಕೋ ಎನ್ನುತ್ತಿವೆ ಕೆಲಮೂಲಗಳು.

ರಾಜಕೀಯ ಪಕ್ಷಗಳಿಗೆ ಇದು ಗಂಭೀರವಾಗಿದ್ರೂ, ನೋಡುಗರಿಗೆ ಇದು ಮನರಂಜನೆಯಯಾಗಿದೆ. ವಾಟ್ಸಾಪ್, ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಇಂತಹ ಟ್ರೋಲ್ ಗಳು, ಕಾಮಿಡಿ ಸಂದೇಶಗಳು ರಾಜಕೀಯ ವ್ಯಕ್ತಿಗಳ ಕಾಲೆಳೆಯುತ್ತಿವೆ.

Please follow and like us:
0
http://bp9news.com/wp-content/uploads/2018/05/prakash_raj-2.jpghttp://bp9news.com/wp-content/uploads/2018/05/prakash_raj-2-150x150.jpgBP9 Bureauಪ್ರಮುಖಸಿನಿಮಾಸಿನಿಟಾಕ್ :  ಪ್ರಧಾನಿ ಮೋದಿ ಮತ್ತು ಬಿಜೆಪಿ  ಬಗ್ಗೆ  ಟ್ವಿಟ್ಟರ್​ನಲ್ಲಿ ವಾರ್​ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದ ಪ್ರಕಾಶ್​ ರೈ, ಇದೀಗ ರೆಸಾರ್ಟ್​ನಲ್ಲಿ ಬಿಡಾರ ಹೂಡಿರುವ ಕಾಂಗ್ರೆಸ್​ ಶಾಸಕರ ಕಾಲೆಳೆದು ಹಾಸ್ಯ  ಚಟಾಕಿ ಹಾರಿಸಿದ್ದಾರೆ.  ''ರೆಸಾರ್ಟ್ ಮ್ಯಾನೇಜರ್ ಸರ್ಕಾರ ರಚಿಸಲು ಅನುಮತಿ ಕೋರಿ ರಾಜ್ಯಪಾಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯಾಕಂದ್ರೆ, 116 ಶಾಸಕರು ಅವರ ಜೊತೆಯಲ್ಲಿದ್ದಾರೆ. ಆಟ ಈಗ ಶುರು'' ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯ ರಾಜಕೀಯವೇ ಆತಂಕದಲ್ಲಿ...Kannada News Portal