ಸ್ಯಾಂಡಲ್​ ವುಡ್​ ಮತ್ತು ಟಾಲಿವುಡ್​ನಲ್ಲಿ ಕಳೆದ ಒಂದೆರಡು ದಿನಗಳಿಂದ ಭಾರೀ ಸುದ್ದಿಯಾಗ್ತಿರುವ ವಿಚಾರ ಅಂದ್ರೆ ಅದು  ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಲವ್​ ಸ್ಟೋರಿ. ಯಾವಾಗ ಇವರಿಬ್ಬರ ಬ್ರೇಕ್ಅಪ್​  ಸುದ್ದಿ ಕಾಡ್ಗಿಚ್ಚಿನಂತೇ ಹಬ್ಬಿತ್ತೋ, ರಕ್ಷಿತ್​ ಪ್ರತಿಕ್ರಿ ನೀಡಿದ್ರು. ಸಾಮಾಜಿಕ ಜಾಲತಾಣಗಳನ್ನ ತೊರೆದು ದೂರ ಹೋಗಿದ್ದ ರಕ್ಷಿತ್​, ರಶ್ಮಿಕಾ ಬಗ್ಗೆ ಮಾತನಾಡಲು ಮತ್ತೆ ಬಂದಿದ್ದಾರೆ.

 

ರಕ್ಷಿತ್​ ಶೆಟ್ಟಿ ನಿನ್ನೆ ಫೇಸ್​ಬುಕ್​ನಲ್ಲಿ, ರಶ್ಮಿಕಾ ಪರವಾಗಿ ಮಾತನಾಡಿ, ಆಕೆಯನ್ನು ಶಾಂತಿವಾಗಿರಲು ಬಿಡಿ.  ಅವರಿಗೂ ಅವರದ್ದೇ ಆದ  ವೈಯಕ್ತಿಕ ಜೀವನ ಇದೆ. ರಶ್ಮಿಕಾ ಏನು ಅಂತಾ ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು ಎಂದು ಬರೆದು ಪೋಸ್ಟ್​ ಮಾಡಿದ್ದರು. ಇದೀಗ ಕಿಚ್ಚ ಸುದೀಪ್​ ಕೂಡ ರಕ್ಷಿತ್​ ಪರವಾಗಿ ಮಾತನಾಡಿದ್ದಾರೆ.

ರಕ್ಷಿತ್​ ಪರವಾಗಿ ಟ್ವಿಟ್ಟರ್​ನಲ್ಲಿ ಬರಹ ಪೋಸ್ಟ್ ಮಾಡಿದ್ದಾರೆ. ‘ಎಲ್ಲರಿಗೂ ತಮ್ಮದೇ ವೈಯಕ್ತಿಕ ಜೀವನ ಇರುತ್ತೆ. ಸೆಲೆಬ್ರಿಟಿಗಳಾದ ಮಾತ್ರಕ್ಕೆ ಎಲ್ಲಾ ಭಾವನೆಗಳನ್ನೂ ಸಾರ್ವಜನಿಕವಾಗಿ ಹೇಳಬೇಕೆಂದಿಲ್ಲ. ಎಲ್ಲರಿಗೂ ಅವರದ್ದೇ ಆದ ಪ್ರೈವೇಟ್ ಸ್ಪೇಸ್ ಇರಬೇಕು’ ಅಂತಾ ಸುದೀಪ್​ ಬರೆದಿದ್ದಾರೆ. ಅಲ್ಲದೇ ರಕ್ಷಿತ್​ ಶೆಟ್ಟಿ ಘನತೆ ಮತ್ತು ಪ್ರೌಢಿಮೆ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ನಿರ್ಮಾಪಕ ಕಾರ್ತಿಕ್​ ಗೌಡ ಕೂಡ ರಕ್ಷಿತ್​ ಶೆಟ್ಟಿ ಪರವಾಗಿ ಮಾತನಾಡಿದ್ದಾರೆ.

Please follow and like us:
0
http://bp9news.com/wp-content/uploads/2018/09/maxresdefault-4-1-e1536737876492-1024x935.jpghttp://bp9news.com/wp-content/uploads/2018/09/maxresdefault-4-1-e1536737876492-150x150.jpgBP9 Bureauಸಿನಿಮಾಸ್ಯಾಂಡಲ್​ ವುಡ್​ ಮತ್ತು ಟಾಲಿವುಡ್​ನಲ್ಲಿ ಕಳೆದ ಒಂದೆರಡು ದಿನಗಳಿಂದ ಭಾರೀ ಸುದ್ದಿಯಾಗ್ತಿರುವ ವಿಚಾರ ಅಂದ್ರೆ ಅದು  ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಲವ್​ ಸ್ಟೋರಿ. ಯಾವಾಗ ಇವರಿಬ್ಬರ ಬ್ರೇಕ್ಅಪ್​  ಸುದ್ದಿ ಕಾಡ್ಗಿಚ್ಚಿನಂತೇ ಹಬ್ಬಿತ್ತೋ, ರಕ್ಷಿತ್​ ಪ್ರತಿಕ್ರಿ ನೀಡಿದ್ರು. ಸಾಮಾಜಿಕ ಜಾಲತಾಣಗಳನ್ನ ತೊರೆದು ದೂರ ಹೋಗಿದ್ದ ರಕ್ಷಿತ್​, ರಶ್ಮಿಕಾ ಬಗ್ಗೆ ಮಾತನಾಡಲು ಮತ್ತೆ ಬಂದಿದ್ದಾರೆ.   That’s dignity n maturity Rakshith 👏🏼. Stay blessed my friend. ..................... Public personalities dsnt...Kannada News Portal