ಸಿನಿಟಾಕ್​ :  ಇದು ಯಾವುದೋ ಫಿಲ್ಮ್​ ಡೈಲಾಗ್​ ಅಲ್ಲ, ಬದಲಾಗಿ ಬಿಗ್​ಬಾಸ್​ ಮನೆಯ ಸ್ಪರ್ಧಿಯೊಬ್ರು, ಗಾಯಕ ನವೀನ್​ ಸಜ್ಜು ಗೆ ಹೇಳಿದ ಜಬರ್​ದಸ್ತ್​ ಡೈಲಾಗ್​.

ಅಂದಹಾಗೇ ಬಿಗ್​ಬಾಸ್​ -6 ರಿಯಾಲಿಟಿ ಶೋ ಆರಂಭವಾಗಿ ಎರಡು ವಾರ ಕಳೆದು ಹೋಗಿದೆ.  ಬಿಗ್​ಬಾಸ್​ ಮನೆಯಲ್ಲಿ ಲವ್​, ಕೋಪ-ತಾಪ-ಜೋರು ಜಗಳ, ಉಪ್ಪು ಮೆಣಸಿನ ಕಾಯಿಗೆ ವಾರ್​, ಒಂದು ರೊಟ್ಟಿ, ದೋಸೆ, ಇಡ್ಲಿಗೆ  ಕಿತ್ತಾಟ ಆರಂಭವಾಗಿದೆ. ಇದರ ನಡುವೆ ಅಲ್ಲಲ್ಲಿ  ಕಪಲ್ಸ್​ ನಡುವೆ ಲವ್​ ಕೂಡ ಶುರುವಾಗಿದೆ. ಬಿಗ್​ಬಾಸ್​ನಲ್ಲಿ ಟಾಸ್ಕೊಂದರಲ್ಲಿ ಸೋನು ಪಾಟೀಲ್​ , ಸ್ಪರ್ಧಿ ಗಾಯಕ  ನವೀನ್​ ಸಜ್ಜು ಅವರಿಗೆ ನೀನಂದ್ರೆ ಇಷ್ಟ ಐಲವ್​ಯೂ ಅಂತಾ ಹೇಳಿದ್ರು.

ಅದಾದ ಮೇಲೆ ನಾನೊಬ್ಬಳು ನವೀನ್​ ಗೆ ಒಳ್ಳೆ ಸ್ನೇಹಿತೆ. ನವೀನ್​ ಕೂಡ ನನಗೆ  ಒಬ್ಬ ಗೆಳೆಯ ಅಂತಾ ಹೇಳಿ ಕ್ಲಾರಿಫಿಕೇಷನ್​ ಕೊಟ್ಟು ಸುಮ್ಮನಾಗಿದ್ದರು. ಆದರೆ ಅದ್ಯಾಕೋ ಸಿಕ್ಕಾಪಟ್ಟೆ  ಮನೆ ಮಂದಿಯೆಲ್ಲ ನವೀನ್​ ಮತ್ತು ಸೋನು ಅವರನ್ನು ಕಾಲೆಳಿಯುತ್ತ್ತಿದ್ದಾರೆ. ಇದರಿಂದ ಸೋನು, ನವೀನ್​ಗೆ ಹೇಳಿದ್ದೇನು ಗೊತ್ತಾ…?

ಸಾಕಷ್ಟು ಬಾರಿ ನವೀನ್​ ಸಾಫ್ಟ್​ ಆಗಿಯೇ, ಸೋನು ಅವರಿಗೆ ನೀನು ಹೋದಕಡೆಯೆಲ್ಲಾ ನನ್ನ ಬಗ್ಗೆ ಮಾತಡಬೇಡ. ಮನೆಯವರೆಲ್ಲಾ ನೀನು ನನ್ನ ಲವ್ ಮಾಡ್ತಿದ್ದಿಯಾ ಅನ್ಕೊಂಡಿದ್ರೆ, ಅದೆಲ್ಲಾ  ಬೇಡ ಅಂತಾ ಹೇಳಿದ್ರು. ಆದರೆ ಸೋನು ಕೂಡ ಕೌಂಟರ್​ ಕೂಡ ಕೊಟ್ಟಿದ್ರು, ನಾನು ಪ್ರೀತಿ ಮಾಡಲ್ಲ, ಮಾಡೋದು ಇಲ್ಲ, ನನಗೆ ಲವ್​ ಅಂದ್ರೆ ಆಗಲ್ಲ. ನಾನು ನಿನ್ನ ಲವ್​ ಮಾಡ್ತಿಲ್ಲ ಎಂದಿದ್ದರು. ಆದರೆ ಗಾಸಿಪ್​ ಇವರಿಬ್ಬರ  ಬೆನ್ನತ್ತಿದೆ. ಬಿಗ್​ಬಾಸ್​ ಹೌಸ್​ನಲ್ಲಿ  ಸೋನು, ನೋಡಿದ್ರೆ ನವೀನ್​ ಆಂತಾರೆ, ನವೀನ್​ ನೋಡಿದ್ರೆ ಸೋನು ಅಂತಾರೆ.

ನವೀನ್​ ಕೂಡ ಸೋನು ಗೆ ವಾರ್ನ್​ ಮಾಡಿದ್ದಾರೆ.‘ ಆದರೆ ಈ ವಾರ್ನ್​ ಕೇಳಿದ ಮೇಲೆ  ಸೋನು ಸುಮ್ಮನೇ ಆಗ್ತಾರೆ, ಏನೋ ಮಾಡ್ತಿಯಾ, ನಾನು ನಿನ್ನ ಹೆಸರ ಎಲ್ಲೂ ಹೇಳಲ್ಲಾ ಆದ್ರೂ ನನ್ನನ್ನ ಕಾಡಿಸ್ತಿಯಾ.  ನಾನು ನಿನ್ನೇ ಲವ್​ ಮಾಡ್ತೀನಿ, ಮಾಡಿದ್ರೆ ನಾನು ನಿನ್ನ ಲವ್​ ಮಾಡ್ತೀನಿ, ನವೀನ ಲವ್​  ಮಾಡಿದ್ರೆ ನಾನು ನಿನ್ನೇ ಮಾಡ್ತೀನಿ ಕಣೋ, ಅದೇನ್​ ಮಾಡ್ಕೋತ್ತಿಯೋ ಮಾಡ್ಕೋ ಹೋಗು ಅಂತಾ ಡೈಲಾಗ್​ ಹೊಡೆದಿದ್ದಾರೆ.

Please follow and like us:
0
http://bp9news.com/wp-content/uploads/2018/11/66426944-1.jpghttp://bp9news.com/wp-content/uploads/2018/11/66426944-1-150x150.jpgBP9 Bureauಸಿನಿಮಾಸಿನಿಟಾಕ್​ :  ಇದು ಯಾವುದೋ ಫಿಲ್ಮ್​ ಡೈಲಾಗ್​ ಅಲ್ಲ, ಬದಲಾಗಿ ಬಿಗ್​ಬಾಸ್​ ಮನೆಯ ಸ್ಪರ್ಧಿಯೊಬ್ರು, ಗಾಯಕ ನವೀನ್​ ಸಜ್ಜು ಗೆ ಹೇಳಿದ ಜಬರ್​ದಸ್ತ್​ ಡೈಲಾಗ್​. ಅಂದಹಾಗೇ ಬಿಗ್​ಬಾಸ್​ -6 ರಿಯಾಲಿಟಿ ಶೋ ಆರಂಭವಾಗಿ ಎರಡು ವಾರ ಕಳೆದು ಹೋಗಿದೆ.  ಬಿಗ್​ಬಾಸ್​ ಮನೆಯಲ್ಲಿ ಲವ್​, ಕೋಪ-ತಾಪ-ಜೋರು ಜಗಳ, ಉಪ್ಪು ಮೆಣಸಿನ ಕಾಯಿಗೆ ವಾರ್​, ಒಂದು ರೊಟ್ಟಿ, ದೋಸೆ, ಇಡ್ಲಿಗೆ  ಕಿತ್ತಾಟ ಆರಂಭವಾಗಿದೆ. ಇದರ ನಡುವೆ ಅಲ್ಲಲ್ಲಿ  ಕಪಲ್ಸ್​ ನಡುವೆ ಲವ್​ ಕೂಡ...Kannada News Portal