ಬೆಂಗಳೂರು :  ಬಿಗ್​ಬಾಸ್​ ಖ್ಯಾತಿಯ, ಕ್ರಿಕೆಟಿಗ ಎನ್​.ಸಿ ಅಯ್ಯಪ್ಪ ನಟಿ ಮಾಳೇಟಿರ ಅನು ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ  ಇಬ್ಬರು ಪ್ರೀತಿ  ಮಾಡುತ್ತಿದ್ದು ಈ ಜೋಡಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿ ಕೊಡವ ಸಮಾಜದ ಸಂಪ್ರದಾಯದಂತೆ ಇಬ್ಬರ ನಿಶ್ಚಿತಾರ್ಥ  ತುಂಬಾ ವಿಜೃಂಭಣೆಯಿಂದ ನಡೆಯಿತು.  ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬಗಳ  ಸದಸ್ಯರು, ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಅಯ್ಯಪ್ಪ ಮತ್ತು  ಅನು ಒಬ್ಬರನೊಬ್ಬರು  ಉಂಗುರ ಬದಲಾಯಿಸಿಕೊಂಡರು.

ಅಂದ ಹಾಗೇ ಅಯ್ಯಪ್ಪ ಕೈ ಹಿಡಿಯುತ್ತಿರುವ ನಟಿ ಯಾ ರು ಗೊತ್ತಾ…?

ತಮಿಳಿನ  ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಅನು, ಅಂಜಲಿ ಪಾಪ ಸೇರಿದಂತೆ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್​ ಸೂಪರ್​, ಪಾನಿಪುರಿ  ಸಿನಿಮಾಗಳಲ್ಲಿ ನಟಿಸಿದ್ದ ಅನು ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗ್ತಿರುವ ಟಿಆರ್​ಪಿ ಸೀರಿಯಲ್​ ಮುದ್ದುಲಕ್ಷ್ಮಿ ಯಲ್ಲೂ ಕೂಡ ಅಭಿನಯಿಸುತ್ತಿದ್ದಾರೆ.   ಅಯ್ಯಪ್ಪ ಬಾಳ ಸಂಗಾತಿಯಾಗಿ ಕಿರುತೆರೆಯ ಈ ಚೆಲುವೆ ಸಪ್ತಪದಿ ತುಳಿಯಲು ರೆಡಿಯಾಗುತ್ತಿದ್ದಾರೆ.

ಇನ್ನೂ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ  ಸಿಕ್ಕಾಪಟ್ಟೆ ಟಾಕ್ ಆಗುತ್ತಿದ್ದ ಅಯ್ಯಪ್ಪ, ಒಂದಷ್ಟು ದಿನ ಪೂಜಾಗಾಂಧಿ ಯೊಂದಿಗಿನ ಸಂಬಂಧಕ್ಕೆ ಗಾಸಿಪ್​ ಆಗಿದ್ರು. ಕ್ರಿಕೆಟ್​ ಅಭಿಮಾನಿಗಳನ್ನು ಹೊಂದಿದ್ದ ಅಯ್ಯಪ್ಪನಿಗೆ ಬಿಗ್​ಬಾಸ್​ ಸೇರಿದ ಮೇಲೆ ಮಹಿಳಾ ಅಭಿಮಾನಿಗಳು ಮತ್ತಷ್ಟು ಹೆಚ್ಚಾಗಿದ್ದಾರೆ.   ಒಟ್ಟಾರೆ  ಬ್ಯಾಚುಲರ್​ ಲವ್ವರ್​ ಬಾಯ್​ ಅಯ್ಯಪ್ಪ ಅಂತೂ ಇಂತೂ ಮದುವೆಯಾಗುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/aiyyappa-2.jpghttp://bp9news.com/wp-content/uploads/2018/05/aiyyappa-2-150x150.jpgBP9 Bureauಪ್ರಮುಖಸಿನಿಮಾಬೆಂಗಳೂರು :  ಬಿಗ್​ಬಾಸ್​ ಖ್ಯಾತಿಯ, ಕ್ರಿಕೆಟಿಗ ಎನ್​.ಸಿ ಅಯ್ಯಪ್ಪ ನಟಿ ಮಾಳೇಟಿರ ಅನು ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ  ಇಬ್ಬರು ಪ್ರೀತಿ  ಮಾಡುತ್ತಿದ್ದು ಈ ಜೋಡಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿ ಕೊಡವ ಸಮಾಜದ ಸಂಪ್ರದಾಯದಂತೆ ಇಬ್ಬರ ನಿಶ್ಚಿತಾರ್ಥ  ತುಂಬಾ ವಿಜೃಂಭಣೆಯಿಂದ ನಡೆಯಿತು.  ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬಗಳ  ಸದಸ್ಯರು, ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಅಯ್ಯಪ್ಪ ಮತ್ತು  ಅನು ಒಬ್ಬರನೊಬ್ಬರು...Kannada News Portal