ಬೆಂಗಳೂರು : ಹಿರಿಯರ ಮೇಲೆ ದೌರ್ಜನ್ಯ ನಡೆಯುವ ನಗರಗಳ ಸಮೀಕ್ಷೆಯಲ್ಲಿ ಕರ್ನಾಟಕದ ಮಂಗಳೂರು ಅತಿ ಹೆಚ್ಚು ದೌರ್ಜನ್ಯದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೇಶದ ಇತರೆ ನಗರಗಳಾದ ಅಹಮದಾಬಾದ್, ಭೋಪಾಲ್ ಹಾಗೂ ಅಮೃತ್ಸಾರ ಕ್ರಮವಾಗಿ ದ್ವಿತೀಯ, ತೃತೀಯ, ಚತುರ್ಥ ಸ್ಥಾನ ಗಳಿಸಿದೆ. ರಾಜಧಾನಿ ದೆಹಲಿ 5ನೇ ಸ್ಥಾನದಲ್ಲಿದೆ.

ಹೆಲ್ಪ್ ಏಜ್ ಇಂಡಿಯಾ ಬಿಡುಗಡೆ ಮಾಡಿರುವ ಈ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಹಿರಿಯರನ್ನು ನಡೆಸಿಕೊಳ್ಳುವ ಕುರಿತಂತೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಕಲೆ ಹಾಕಲಾಗಿದೆ. ಮಗ ಅಥವಾ ಸೊಸೆಯಿಂದ ಹಿರಿಯರು ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದ್ದು , ಮಂಗಳೂರಿನಲ್ಲಿ ಈ ಪ್ರಮಾಣ ಶೇ.47ರಷ್ಟಿರುವುದರಿಂದ ಮೊದಲ ಸ್ಥಾನದಲ್ಲಿದೆ.

ಇನ್ನು ಅಹಮದಾಬಾದ್ ಶೇ.46, ಭೋಪಾಲ್ ಶೇ.39, ಅಮೃತ್ಸಯರ್ ಶೇ.35 ಹಾಗೂ ದೇಶದ ರಾಜಧಾನಿ ನವದೆಹಲಿ ಶೇ.33ರಷ್ಟು ಹಿರಿಯರನ್ನು ಅಪಮಾನಿಸುವ, ನಿಂದಿಸುವ ಹಾಗೂ ದೌರ್ಜನ್ಯ ನಡೆಯುವ ಕುರಿತಂತೆ ನಡೆದ ಸರ್ವೆಯಲ್ಲಿ ಈ ನಗರ ಮೊದಲ ಐದು ಸ್ಥಾನದಲ್ಲಿವೆ. ಆಶ್ರಯ ತಾಣವಾಗಬೇಕಾದ ಮನೆಯಿಂದಲೇ ಹಿರಿಯರ ಮೇಲಿನ ದೌರ್ಜನ್ಯ ಆರಂಭವಾಗುವುದು ದುರಂತ. ದೌರ್ಜನ್ಯಕ್ಕೆ ಇರಬಹುದಾದ ಕಾರಣ, ಸ್ವರೂಪ ಮತ್ತಿತರ ವಿಷಯಗಳನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸರ್ವೇಗೆ ಒಳಪಟ್ಟ ಒಟ್ಟಾರೆ ಹಿರಿಯರಲ್ಲಿ ಶೇ.75ರಷ್ಟು ಮಂದಿ ಮನೆಯಲ್ಲೇ ಅದರಲ್ಲೂ ಮಗ ಮತ್ತು ಸೊಸೆಯಿಂದ ದೌರ್ಜನ್ಯ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ ಶೇ.82ರಷ್ಟು ಮಂದಿ ಹಿರಿಯರು ತಮ್ಮ ಮೇಲೆ ನಡೆಯುವ ಇಂತಹ ದೌರ್ಜನ್ಯಗಳನ್ನು ಕೌಟುಂಬಿಕ ವಿಷಯ ಎಂಬ ರಹಸ್ಯವಾಗಿಡುತ್ತಾರೆ ಅಥವಾ ಅಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂಬ ಅರಿವಿಲ್ಲದೆ ಪರಿತಪಿಸುತ್ತಾರೆ ಎಂದು ಹೆಲ್ಪ್ ಏಜ್ ಇಂಡಿಯಾ ಸಿಇಒ ಮ್ಯಾಥ್ಯೂ ಚೆರಿಯನ್ ಹೇಳುತ್ತಾರೆ.

ಸಂಸ್ಥೆಯ ಮತ್ತೊಬ್ಬ ಪ್ರಮುಖರಾದ ರೋಹಿತ್ ಪ್ರಸಾದ್ ಹೇಳುವಂತೆ ಜನರೇಷನ್ ಗ್ಯಾಪ್ ಇದಕ್ಕೆ ಕಾರಣವಾಗಿದೆ. ಜೊತೆಗೆ ತಾಂತ್ರಿಕ ಅಂತರವೂ ಸಹ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಹಿರಿಯರನ್ನು ಸಶಕ್ತರನ್ನಾಗಿಸುವ ಮೂಲಕ ಇದನ್ನು ನಿಭಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳು ಟೋಲ್ ಫ್ರೀ ಹೆಲ್ಪ್ ಲೈನ್ ಕಾರ್ಯಾಚರಣೆ ಮಾಡುತ್ತಿದೆ ಎನ್ನುತ್ತಾರೆ.

Please follow and like us:
0
http://bp9news.com/wp-content/uploads/2018/06/jss-old-age-home-mysore.jpghttp://bp9news.com/wp-content/uploads/2018/06/jss-old-age-home-mysore-150x150.jpgPolitical Bureauಪ್ರಮುಖಮಂಗಳೂರುರಾಜಕೀಯಬೆಂಗಳೂರು : ಹಿರಿಯರ ಮೇಲೆ ದೌರ್ಜನ್ಯ ನಡೆಯುವ ನಗರಗಳ ಸಮೀಕ್ಷೆಯಲ್ಲಿ ಕರ್ನಾಟಕದ ಮಂಗಳೂರು ಅತಿ ಹೆಚ್ಚು ದೌರ್ಜನ್ಯದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೇಶದ ಇತರೆ ನಗರಗಳಾದ ಅಹಮದಾಬಾದ್, ಭೋಪಾಲ್ ಹಾಗೂ ಅಮೃತ್ಸಾರ ಕ್ರಮವಾಗಿ ದ್ವಿತೀಯ, ತೃತೀಯ, ಚತುರ್ಥ ಸ್ಥಾನ ಗಳಿಸಿದೆ. ರಾಜಧಾನಿ ದೆಹಲಿ 5ನೇ ಸ್ಥಾನದಲ್ಲಿದೆ. ಹೆಲ್ಪ್ ಏಜ್ ಇಂಡಿಯಾ ಬಿಡುಗಡೆ ಮಾಡಿರುವ ಈ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಹಿರಿಯರನ್ನು ನಡೆಸಿಕೊಳ್ಳುವ ಕುರಿತಂತೆ ನಡೆಸಿದ ಸಮೀಕ್ಷೆಯಲ್ಲಿ ಈ...Kannada News Portal