ಮಂತ್ರಾಲಯ : ಕಲಿಯುಗದಲ್ಲಿ ಗುರುಗಳ ಆರಾಧನೆ, ಸೇವೆ, ಧ್ಯಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ  ಶ್ರೀ ಹರಿಭಕ್ತರಾಗಿ, ಅವತಾರ ಪುರುಷರಾಗಿ ಈಗಲೂ ತಮ್ಮ ಮಹಿಮೆಗಳಿಂದ ಅಪಾರ ಭಕ್ತ ಸಾಗರವನ್ನು ಹೊಂದಿರುವ, ಶ್ರೀ ಭಕ್ತ ಪ್ರಹ್ಲಾಲದರ ಅವತಾರದ ಪುರುಷರಾದ, ತಮ್ಮ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಕ್ಷಣಾ ಮಾತ್ರದಲ್ಲೇ ದೂರಮಾಡುವ , ಮಹಾ ಮಹಿಮರು. ಅವರ ಹೆಸರನ್ನು ಒಮ್ಮೆ ನೆನೆದರೆ ಭಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕಲಿಯುಗದ ಕಾಮಧೇನು ಎಂದೇ ನಾಮಾಂಕಿತರಾಗಿರುವವರು ಶ್ರೀ ಗುರುರಾಘವೇಂದ್ರ ಸ್ವಾಮಿಗಳು, ಮಂತ್ರಾಲಯದ ಪ್ರಭುಗಳು .

ಶ್ರೀಕ್ಷೇತ್ರ, ಪುಣ್ಯಕ್ಷೇತ್ರ ಮತ್ತು ಮಹಿಮೆಗಳ ಕ್ಷೇತ್ರವಾಗಿರುವ ಸದ್ಗುರು ರಾಘವೇಂದ್ರ ನೆಲೆಸಿರುವ ಕ್ಷೇತ್ರ,  ಮಂತ್ರಾಲಯದಲ್ಲಿ ಶ್ರೀ ಗುರುರಾಯರ 347ನೇ ಆರಧಾನೆಯನ್ನು ಮಂತ್ರಾಲಯವೂ ಸೇರಿದಂತೆ ಎಲ್ಲೆಡೆ ಇರುವ ರಾಯರ ಮಠ – ಮಂದಿರಗಳಲ್ಲಿ ಅದ್ಧೂರಿ, ಸಂಭ್ರಮ – ಸಡಗರದಿಂದ ಆಚರಿಸಲಾಗುತ್ತಿದೆ.

ಈ ತಿಂಗಳ 25ನೇ ತಾರಿಖಿನಿಂದ  ಪ್ರಾರಂಭವಾದ ಈ ಆರಾಧನೆ ಇಂದು ಮೂರನೇ ದಿನವಾದ (27/08/2018) ಹಿನ್ನಲೆಯಲ್ಲಿ ಎಲೆಲ್ಲೂ ರಾಯರ ನಾಮ ಮತ್ತು ರಾಯರ ಜಪ – ತಪಗಳು ಕಂಡು ಕೇಳಿ ಬರುತ್ತಿದೆ.

ಇತ್ತ ಇಂದು ಪೂರ್ವಾರಾಧನೆ ಆದ ಕಾರಣ ನಾಡಿನಾದ್ಯಂತ ಇರುವ ಶ್ರೀಗುರುಗಳ ಮಠದಲ್ಲಿ ಭಕ್ತಸಾಗರವೇ ಹರಿದು ಬಂದಿದೆ. ಇನ್ನು ಮೂಲ ಗುರು ಸ್ಥಾನವಾದ ಮಂತ್ರಾಲಯಕ್ಕೆ  ದೇಶ ಮತ್ತು ವಿದೇಶಗಳಿಂದ ರಾಘವೇಂದ್ರ ಸ್ವಾಮಿಗಳ ಸೇವೆ, ಪೂಜೆಯನ್ನು ಸಲ್ಲಿಸಲ್ಲು ಮತ್ತು ಗುರುಗಳ ಆಶೀರ್ವಾದವನ್ನು ಪಡೆಯಲು ಭಕ್ತರು ಆಗಮಿಸಿದ್ದಾರೆ.

ಶ್ರೀಕ್ಷೇತ್ರ ಮಂತ್ರಾಲಯ ಪೀಠದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥರು ಪೂಜಾ ಮಂದಿರದಲ್ಲಿ ರಾಮದೇವರ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಮದೇವರ ವೈಶಿಷ್ಟತೆಯ ಕುರಿತು ಪ್ರವನಚನ ನೀಡಿದರು.

ಬೆಳ್ಳಂಬೆಳ್ಳಿಗ್ಗಿನಿಂದಲೇ ಗುರು ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ , ಸುಗಂಧ ಪುಷ್ಟಗಳ ಸಮೇತ ಪತ್ರೆಗಳ ಸಮೇತ ವಿಶೇಷ ಅಲಂಕಾರ ಮಾಡಿ, ನಂತರ  ಗುರುಗಳಿಗೆ ನೈವೇಧ್ಯಗಳನ್ನು ಸಲ್ಲಿಸಿ. ಪೂಜಾ ಕಾರ್ಯಕ್ರಗಳನ್ನು ನೆರೆವೇರಸಿದಿ ಶ್ರೀ ಸುಬುದೇಂದ್ರ ಶ್ರೀಗಳು  ಗುರುಸಾರ್ವಭೌಮರಿಗೆ ವಿಧ ವಿಧ ಭಂಗಿಗಳ ಮಂಗಳಾರತಿಯನ್ನು ನೆರವೇರಿಸಿದರು.

ಇನ್ನು ಶ್ರೀ ಕ್ಷೇತ್ರದಲ್ಲಿ ಭಕ್ತರು ತುಂಗಾ ನದಿಯಲ್ಲಿ  ಸಾನ್ನಾಧಿಗಳನ್ನು ಮಾಡಿ, ಶ್ರೀ ರಾಯರ ದರ್ಶನ ಪಡೆಯಲು ಕಾತುರದಿಂದ ಕಾತುರಗಿದ್ದುದು ಸರ್ವೇ ಸಾಮಾನ್ಯವಾಗಿ ಕಂಡು ಬಂದಿತ್ತು. ಅಲ್ದೇ ಇಂದು ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಶ್ರೀರಾಘವೇಂದ್ರ ವಿಜಯ, ಶ್ರೀಜಗನ್ನಾಥ ದಾಸರ ದೃಷ್ಟಿಯಲ್ಲಿ ಶ್ರೀಗುರುರಾಜರ ಕುರಿತು ಪ್ರವಚನವನ್ನು ಏರ್ಪಡಿಸಲಾಗಿದೆ.

ಆದೋನಿಯ ವಿದ್ವಾನ್  ಸುಸ್ವರಂ ನಾಗರಾಜಾಚಾರ್ಯ ಹಾಗೂ ಮಂತ್ರಾಲಯದ ವಿದ್ವಾನ್ ಭೀಮಸೇನಾಚಾರ್ಯ ಈರ್ವರು ಸೇರಿ ಈ ಪ್ರವಚನವನ್ನು ನಡೆಸಿಕೊಡುತ್ತಿದ್ದಾರೆ ಎನ್ನಲಾಗಿದೆ.  ಸಂಜೆ 6 ಗಂಟೆಯಿಂದ  ಉತ್ಸವ ಮೂರ್ತಿಯ ಸಿಂಹವಾಹನ ಸೇವೆ  ಪಲ್ಲಕ್ಕಿ ಉತ್ಸವು ನಡೆಯಲಿದೆ.

ಇನ್ನು ಆರಾಧನ ಸಮಯದಲ್ಲಿ  ಇಡೀ ಮಂತ್ರಲಾಯದ ಪ್ರತಿ ಬೀದಿಯಲ್ಲೂ ತಳಿರು ತೋರಣ, ದೀಪಾಲಂಕಾರ ಮತ್ತು ವಿದ್ಯುತ್ ದೀಪಗಳ ಅಲಂಕಾರದಿಂದ ಶೃಂಗರಿಸಲಾಗಿದೆ. ಎಲ್ಲಲ್ಲೂ ಹಬ್ಬದ ವಾತಾವರಣ , ಭಕ್ತಿ ಪರ್ವಷತೆ ಮನೆಮಾಡಿದೆ.

ಇತ್ತ ಉಡುಪಿಯಲ್ಲೂ ಮನೆಮಾಡಿದ ಸಂಭ್ರಮ:

ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಕೃಷ್ಣನಿಗೆ ಕೊಡಗೊಳಿನ ವಿಶೇಷಾಲಂಕರವನ್ನು ಮಾಡಲಾಗಿತ್ತು ಹಾಗೂ ಶ್ರೀಗಳಿಂದ ವಿಶೇಷ ಪೂಜೆಯನ್ನು ನರೆವೇರಿತು.

 

Please follow and like us:
0
http://bp9news.com/wp-content/uploads/2018/08/Karnatakada-Miditha-53.jpeghttp://bp9news.com/wp-content/uploads/2018/08/Karnatakada-Miditha-53-150x150.jpegBP9 Bureauಆಧ್ಯಾತ್ಮಪ್ರಮುಖಮಂತ್ರಾಲಯ : ಕಲಿಯುಗದಲ್ಲಿ ಗುರುಗಳ ಆರಾಧನೆ, ಸೇವೆ, ಧ್ಯಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ  ಶ್ರೀ ಹರಿಭಕ್ತರಾಗಿ, ಅವತಾರ ಪುರುಷರಾಗಿ ಈಗಲೂ ತಮ್ಮ ಮಹಿಮೆಗಳಿಂದ ಅಪಾರ ಭಕ್ತ ಸಾಗರವನ್ನು ಹೊಂದಿರುವ, ಶ್ರೀ ಭಕ್ತ ಪ್ರಹ್ಲಾಲದರ ಅವತಾರದ ಪುರುಷರಾದ, ತಮ್ಮ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಕ್ಷಣಾ ಮಾತ್ರದಲ್ಲೇ ದೂರಮಾಡುವ , ಮಹಾ ಮಹಿಮರು. ಅವರ ಹೆಸರನ್ನು ಒಮ್ಮೆ ನೆನೆದರೆ ಭಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕಲಿಯುಗದ ಕಾಮಧೇನು ಎಂದೇ ನಾಮಾಂಕಿತರಾಗಿರುವವರು...Kannada News Portal