ಬಾದಾಮಿ: ವೀರಶೈವ-ಲಿಂಗಾಯತ ಸಮಾಜದ ಸಂಘಟನೆಗಾಗಿ ಗುರು-ವಿರಕ್ತ ಹಾಗೂ ಭಕ್ತರ ಬೃಹತ್​​ ಸಮಾವೇಶವನ್ನು ಸೆ.4 ಕ್ಕೆ ಬದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.

ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಬಹುದೊಡ್ಡ ಚರ್ಚೆ ನಡೆಯುತ್ತಿದ್ದು, ಆದರೆ ಅದನ್ನ ತಣ್ಣಗಾಗಿಸಿ ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲಾ ಎರಡೂ ಒಂದೇ ಎಂದು ಸಾರಲು ಪಂಚಪೀಠಗಳ ಜಗದ್ಗುರುಗಳು,ಗುರು-ವಿರಕ್ತ ಪರಂಪರೆಯ ಸಾವಿರಾರು ಮಠಾಧೀಶರು,ಭಕ್ತವೃಂದ ಭೇದ ಮರೆತು ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇನ್ನೂ ಕೃಷಿ ಅಥವಾ ಸಣ್ಣಪುಟ್ಟ ಉದ್ಯೋಗಳನ್ನ ಮಾಡಿಕೊಂಡವರು ವೀರಶೈವ-ಲಿಂಗಾಯತ ಸಮಾಜದಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿದ್ದು,ಆದ್ದರಿಂದ ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡವನ್ನು 2A ಮೀಸಲಾತಿಗೆ ಸೇರಿಸಬೇಕು ಅಥವಾ 12ರಿಂದ 15 ಪ್ರತಿಶತ ಮೀಸಲಾತಿಗೆ ಕೇಂದ್ರಸರ್ಕಾರವನ್ನು ಇದೆ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಜೊತೆಗೆ ಅರ್ಥಿಕವಾಗಿಯೂ ಸಬಲೀಕರಣಕ್ಕೆ ನೇರವು ನೀಡಲು ಕೇಂದ್ರಕ್ಕೆ  ಒತ್ತಾಯಿಸಲಾಗುವುದು ಎಂದು ಸ್ವಾಮೀಜಿಗಳು ತೀಳಿಸಿದರು.

ಇತ್ತೀಚೆಗೆ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹೇಳುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಠಿಯಾಗಿತ್ತು,ಆದರೆ ಈ ಸಮಾವೇಶದಲ್ಲಿ ಗೊಂದಲವನ್ನ ನೀವಾರಿಸಿ ಲಿಂಗಾಯತ ಮತ್ತು ವೀರಶೈವ ಏರಡು ಒಂದೇ ಎಂದು ಸಂದೇಶ ರವಾನಿಸಲಾಗುವುದು ಎಂದು ಹೇಳಿದರು.

ಒಟ್ಟಿನಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ಆರಂಭವಾದ ಸಂದರ್ಭದಲ್ಲಿ ಅದನ್ನ ಶಮನ ಗೊಳಿಸಿ ಏಕತೆಯ ಬಿಂಬಿಸಲು ಈ ಸಮಾವೇಶ ಕಾರಣವಾಗಲಿದೆ ಎಂದು ಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದ್ದಾರೆ.

 

Please follow and like us:
0
http://bp9news.com/wp-content/uploads/2017/09/swamiji-1.jpghttp://bp9news.com/wp-content/uploads/2017/09/swamiji-1-150x150.jpgBP9 Bureauಬಾಗಲಕೋಟೆಶ್ರೀಶೈಲ ಪೀಠಬಾದಾಮಿ: ವೀರಶೈವ-ಲಿಂಗಾಯತ ಸಮಾಜದ ಸಂಘಟನೆಗಾಗಿ ಗುರು-ವಿರಕ್ತ ಹಾಗೂ ಭಕ್ತರ ಬೃಹತ್​​ ಸಮಾವೇಶವನ್ನು ಸೆ.4 ಕ್ಕೆ ಬದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಬಹುದೊಡ್ಡ ಚರ್ಚೆ ನಡೆಯುತ್ತಿದ್ದು, ಆದರೆ ಅದನ್ನ ತಣ್ಣಗಾಗಿಸಿ ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲಾ ಎರಡೂ ಒಂದೇ ಎಂದು ಸಾರಲು ಪಂಚಪೀಠಗಳ ಜಗದ್ಗುರುಗಳು,ಗುರು-ವಿರಕ್ತ ಪರಂಪರೆಯ ಸಾವಿರಾರು ಮಠಾಧೀಶರು,ಭಕ್ತವೃಂದ ಭೇದ ಮರೆತು ದಶಕಗಳ...Kannada News Portal