ಬೆಂಗಳೂರು : ನನ್ನವರೇ ನನಗೆ ಮುಳ್ಳಾದರೆನಗೆ ಎಂಬ ಕನ್ನಡ ಬಹು ಸೊಗಸಾದ ದುಃಖತಪ್ತ ಹಾಡೊಂದು ಇದೆ. ನೀವು ಆ ಸಾಂಗ್ ಅನ್ನು ಒಂದಲ್ಲಾ ಒಂದು ಬಾರಿ ಕೇಳೇ ಇರುತ್ತೀರಿ. ಇದೇ ಸ್ಥಿತಿ ಇದೀಗ ವಿಜಯಪುರ ನಗರ ಕ್ಷೇತ್ರದ ಕಟ್ಟಾ ಬಿಜೆಪಿ ಕಾರ್ಯಕರ್ತರು ಹಾಡುತ್ತಿದ್ದಾರೇನೋ ಎಂಬ ಗುಮಾನಿಯೊಂದು ಇದೀಗ ಹುಟ್ಟಿಕೊಂಡಿದೆ.

ಬಸನಗೌಡ ಪಾಟೀಲ ಯತ್ನಾಳರು ಬಿಜೆಪಿ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರ ನಡುವೆ ಗುದ್ದಾಡಿ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ವ್ಯಕ್ತಿ. ಹಿಂದೂ ಯುವಕರ ಕಣ್ಮಣಿ. ಈ ಕ್ಷೇತ್ರ ನೇರಾ ನೇರ ಸೈದ್ಧಾಂತಿಕ ವಿಚಾರಧಾರೆಗಳ ನಡುವೆ ನಡೆದ ಹೈವೋಲ್ಟೇಜ್ ಚುನಾವಣೆ. ಅಷ್ಟೇ ಅಲ್ಲಾ ಸ್ವಪಕ್ಷದ ಟಿಕೆಟ್ ಆಕಾಂಕ್ಷಿಗಳ ಬೇಗುದಿಯನ್ನು ಸಹಿಸಿಕೊಂಡು ಚುನಾವಣೆ ಎದುರಿಸಬೇಕಾದ ವಾತಾವರಣ ನಿರ್ಮಾಣವಾದ ಕ್ಷೇತ್ರ.

ಇದೀಗ ಒಂದು ಬ್ರೇಕಿಂಗ್ ಸುದ್ದಿ ಹೊರ ಬಿದ್ದಿದ್ದು, ಸ್ವಪಕ್ಷೀಯರೇ ಯತ್ನಾಳರ ಕಾಲು ಎಳೆಯುವ ಕೆಲಸ ಮಾಡಿದರೇ ಎಂಬ  ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ಕಾರಣ ಫೇಸ್ ಬುಕ್ ಪೊಸ್ಟ್ ಒಂದು ವೈರಲ್ ಆಗಿದೆ.

ಹಬೀಬ್ ಜಾಮಿಯಾ ಎಂಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುರ್ಸಿಫ್ ಅವರ ಆಪ್ತ. ಈ ವ್ಯಕ್ತಿ ಮೇ 12 ರ  ರಾತ್ರಿ 10.53ಕ್ಕೆ ತಮ್ಮ ಅಧಿಕೃತ ಫೇಸ್ ಬುಕ್​​ನಲ್ಲಿ ಒಂದು ಪೋಸ್ಟ್ ಅನ್ನು ಬರೆಯುತ್ತಾರೆ. ಈರಣ್ಣ ಪಟ್ಟಣ ಶೆಟ್ಟಿ ಸಾಹೇಬರಿಗೆ ಮತ್ತು ದಲಿತ ಸಹೋದರರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅಭಿನಂದಿಸಿದ್ದಾರೆ.

ಈ  ಈರಣ್ಣ ಪಟ್ಟಣ ಶೆಟ್ಟಿ ಯಾರೆಂದರೇ ಮಾಜಿ ಶಾಸಕ ಹಾಗೂ ವಿಜಯಪುರನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಪ್ಪು ಪಟ್ಟಣ ಶೆಟ್ಟಿ ಅವರ ಸಹೋದರ.

ಇನ್ನು ಮೇಲಿನಂತೆ ಧನ್ಯವಾದ ಅರ್ಪಿಸಿರುವ ಕಾಂಗ್ರೆಸ್​ ಕಾರ್ಯಕರ್ತ ಹಬೀಬ್ ಜಾಮಿಯಾ ಯಾರೆಂದರೆ, ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ, ಹಮೀದ್ ಮುರ್ಸಿಫ್ ಅವರ ಆಪ್ತ. ಇನ್ನು ಈ ಆಸಾಮಿ ಯಾವ ಕಾರಣಕ್ಕೆ ಈ ರೀತಿ ಬಹಿರಂಗವಾಗಿ ತಮ್ಮ ಫೇಸ್​​​​ಬುಕ್​​​ನಲ್ಲಿ ಬಿಜೆಪಿ ಕಾರ್ಯಕರ್ತರಾದ ಹಾಗೂ ಬಿಜೆಪಿ ಪ್ರಭಾವಿ ಮುಖಂಡರಾದ ಅಪ್ಪು ಪಟ್ಟಣ ಶೆಟ್ಟಿ ಸಹೋದರರೂ ಆದ ಈರಣ್ಣ ಪಟ್ಟಣ ಶೆಟ್ಟಿಯವರಿಗೆ ಸಾಹೇಬ ಎಂದು ಸಂಭೋದಿಸಿ ಕೃತಜ್ಞತೆ ಅರ್ಪಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಮತ್ತೊಂದೆಡೆ ಅಪ್ಪು ಪಟ್ಟಣ ಶೆಟ್ಟಿ ಟಿಕೆಟ್ ದೊರೆಯದ ಕಾರಣ, ಕಾಣದ ಕೈನಂತೆ ಹಿಂಬಾಗಿಲಿನಿಂದ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿ ಬಸನಗೌಡ ಪಾಟೀಲರನ್ನು ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದರೇ ಎಂಬ ಅನುಮಾನಗಳನ್ನು ಕ್ಷೇತ್ರದ ಜನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಈ ಪ್ರಕರಣ ನಾಳಿನ ಫಲಿತಾಂಶದ ಮೇಲೆ ನಿಂತಿದ್ದು, ಸದ್ಯ ಹಬೀಬ್ ಜಾಮಿಯಾ ಫೇಸ್​​​ಬುಕ್​​ ಅಕೌಂಟ್​​​ನಲ್ಲಿ ಬರೆದು ಕೊಂಡಿರುವ ಈ ಹೇಳಿಕೆ ಮಾತ್ರ ಸಾಕಷ್ಟು ವಿವಾದವನ್ನು ಉಂಟುಮಾಡಿರುವುದಂತೂ ಸತ್ಯ… ಅಲ್ಲದೇ ಮತದಾನ ಮುಗಿದ ದಿನ 10. 53 PM ನಲ್ಲಿ ಈ ಹೇಳಿಕೆ ನೀಡಿರುವುದು ಇಲ್ಲಿ ಒಂದಷ್ಟು ಎಡವಟ್ಟುಗಳು ನಡೆದಿದೆ ಎಂಬ ಅಂಶವನ್ನು ಪುಷ್ಠೀಕರಿಸುತ್ತಿದೆ.

Please follow and like us:
0
http://bp9news.com/wp-content/uploads/2018/05/BJFIRHI-W060_GB04BGBASANGOUDA_PATI.jpghttp://bp9news.com/wp-content/uploads/2018/05/BJFIRHI-W060_GB04BGBASANGOUDA_PATI-150x150.jpgPolitical Bureauಪ್ರಮುಖರಾಜಕೀಯವಿಜಯಪುರMeer Sadhak worked for Basanagowda Yatnal!ಬೆಂಗಳೂರು : ನನ್ನವರೇ ನನಗೆ ಮುಳ್ಳಾದರೆನಗೆ ಎಂಬ ಕನ್ನಡ ಬಹು ಸೊಗಸಾದ ದುಃಖತಪ್ತ ಹಾಡೊಂದು ಇದೆ. ನೀವು ಆ ಸಾಂಗ್ ಅನ್ನು ಒಂದಲ್ಲಾ ಒಂದು ಬಾರಿ ಕೇಳೇ ಇರುತ್ತೀರಿ. ಇದೇ ಸ್ಥಿತಿ ಇದೀಗ ವಿಜಯಪುರ ನಗರ ಕ್ಷೇತ್ರದ ಕಟ್ಟಾ ಬಿಜೆಪಿ ಕಾರ್ಯಕರ್ತರು ಹಾಡುತ್ತಿದ್ದಾರೇನೋ ಎಂಬ ಗುಮಾನಿಯೊಂದು ಇದೀಗ ಹುಟ್ಟಿಕೊಂಡಿದೆ. ಬಸನಗೌಡ ಪಾಟೀಲ ಯತ್ನಾಳರು ಬಿಜೆಪಿ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರ ನಡುವೆ ಗುದ್ದಾಡಿ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ವ್ಯಕ್ತಿ. ಹಿಂದೂ...Kannada News Portal