ಸುಪ್ರೀಂ ಕೋರ್ಟ್​ನಲ್ಲಿ   ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ರಚನೆಗೆ ಬಿಜೆಪಿ ಆಹ್ವಾನ ನೀಡಿದ ರಾಜ್ಯಪಾಲರ ನಡೆಯನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಕ್ಷಣ ಕ್ಷಣದ ವರದಿ.

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ರಾಜಕೀಯ ವಿಷಯಕ್ಕಾಗಿ ಸುಪ್ರೀಂ ಕೋರ್ಟ್​ ರಾತ್ರಿಯಿಂದ ಬೆಳಗಿನಜಾವದ  ತನಕ ವಿಚಾರಣೆ ನಡೆಸಿ, ಆದೇಶ ನೀಡಿದ್ದು ದಾಖಲೆಯಾಗಿದೆ.

ಗಂಟೆ 11:45ಕ್ಕೆ ಕಾಂಗ್ರೆಸ್​ ಜೆಡಿಎಸ್​ ಜಂಟಿಯಾಗಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ. ಸುಪ್ರೀಂ ಕೋರ್ಟ್​ನ ರಿಜಿಸ್ಟ್ರಾರ್ ​ನಿಂದ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರಿಗೆ  ವಿಷಯದ ಮನವರಿಕೆ.

ಗಂಟೆ 12:25 ಕ್ಕೆ  ಮುಖ್ಯ ನ್ಯಾಯಮೂರ್ತಿಯವರ ಮನೆ ತಲುಪಿದ ರಿಜಿಸ್ಟ್ರಾರ್​​ ಮತ್ತು ಸಿಬ್ಬಂದಿ.

ಗಂಟೆ 1:15 ಕ್ಕೆ ಮೂವರು ನ್ಯಾಯಧೀಶರಾದ ನ್ಯಾಯಮೂರ್ತಿ ಸಿಕ್ರಿ, ನ್ಯಾಯಮೂರ್ತಿ ಅಶೋಕ್​ ಭೂಷಣ್​, ನ್ಯಾಯಮೂರ್ತಿ   ಬೊಬ್ಡೆ ನೇತೃತ್ವದಲ್ಲಿ ತ್ರಿಸದಸ್ಯ ಪೀಠ ರಚನೆ.

ಗಂಟೆ 1:35 ಕ್ಕೆ ಅರ್ಜಿಗಳ ಪರಿಶೀಲನೆ.

ಗಂಟೆ 1:40 ಗಂಟೆಗೆ ಎರಡು ಪಕ್ಷಗಳ ವಕೀಲರು  ಸುಪ್ರೀಂ ಕೋರ್ಟ್​ಗೆ ಆಗಮನ.

ಗಂಟೆ 2:00 ಗಂಟೆಗೆ ಸುಪ್ರೀಂ ಕೋರ್ಟ್​ನಲ್ಲಿ ಕಾಂಗ್ರೆಸ್ ವಕೀಲ ಅಶೋಕ್​ ಮನು ಸಿಂಘ್ವಿ ರಿಂದ ​ ವಿಷಯ ಮಂಡನೆ ಆರಂಭ.

ಗಂಟೆ 2:15 ಕ್ಕೆ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಸುಪ್ರೀಂ  ಕೋರ್ಟ್​ಗೆ ಆಗಮನ.

ಸುಮಾರು 3: 00 ಗಂಟೆ ಸತತ ಒಂದು ಗಂಟೆ ಕಾಲ ಮೂವರು ನ್ಯಾಯಧೀಶರ ಪ್ರಶ್ನೆಗಳಿಗೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಪರ ವಕೀಲರಿಂದ ಸಮಂಜಸ ಉತ್ತರ.

5 : 26 ಕ್ಕೆ    ಸುಪ್ರಿಂ ಕೋರ್ಟ್​ನ ತ್ರಿಸದಸ್ಯ ಪೀಠದ  ನ್ಯಾಯಧೀಶರಿಂದ ಆದೇಶ.  ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು  ಸುಪ್ರೀಂ ನಿಂದ ನಕಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟೀಸ್​ ಜಾರಿ. ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿರುವ ಶಾಸಕರ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚನೆ.  ರಾಜ್ಯಪಾಲರ ನಡೆಯ ವಿರುದ್ಧ ಆದೇಶ ನೀಡಲು ಸುಪ್ರೀಂ ಕೋರ್ಟ್​ ನಕಾರ.

ಶುಕ್ರವಾರ 10 : 30ಕ್ಕೆ ವಿಚಾರಣೆ ಮುಂದೂಡಿಕೆ.

 

 

 

 

 

 

 

Please follow and like us:
0
http://bp9news.com/wp-content/uploads/2018/05/kavya-11111-1024x768.jpghttp://bp9news.com/wp-content/uploads/2018/05/kavya-11111-150x150.jpgBP9 Bureauಪ್ರಮುಖರಾಜಕೀಯಸುಪ್ರೀಂ ಕೋರ್ಟ್​ನಲ್ಲಿ   ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ರಚನೆಗೆ ಬಿಜೆಪಿ ಆಹ್ವಾನ ನೀಡಿದ ರಾಜ್ಯಪಾಲರ ನಡೆಯನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಕ್ಷಣ ಕ್ಷಣದ ವರದಿ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ರಾಜಕೀಯ ವಿಷಯಕ್ಕಾಗಿ ಸುಪ್ರೀಂ ಕೋರ್ಟ್​ ರಾತ್ರಿಯಿಂದ ಬೆಳಗಿನಜಾವದ  ತನಕ ವಿಚಾರಣೆ ನಡೆಸಿ, ಆದೇಶ ನೀಡಿದ್ದು ದಾಖಲೆಯಾಗಿದೆ. ಗಂಟೆ 11:45ಕ್ಕೆ ಕಾಂಗ್ರೆಸ್​ ಜೆಡಿಎಸ್​ ಜಂಟಿಯಾಗಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ. ಸುಪ್ರೀಂ ಕೋರ್ಟ್​ನ ರಿಜಿಸ್ಟ್ರಾರ್ ​ನಿಂದ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ...Kannada News Portal