ಬೆಂಗಳೂರ : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಮೂಲಗಳು ತಿಳಿಸಿವೆ.

ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಸದ್ಯ ಅವರ ದೇಹ ಸ್ಥಿತಿ ಉತ್ತಮವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 65 ವರ್ಷದ ಅರುಣ್ ಜೇಟ್ಲಿ ಕಳೆದ ತಿಂಗಳಿಂದ ಡಯಲಿಸಿಸ್​​ ಚಿಕಿತ್ಸೆ ನೀಡಲಾಗುತ್ತಿತ್ತು.

ಜೇಟ್ಲಿ 2014ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿಗೆ ಕೂಡ ಒಳಗಾಗಿದ್ದರು. ಏಪ್ರಿಲ್ 6 ರಂದು ಅವರ ಅನಾರೋಗ್ಯದ ಬಗ್ಗೆ ಟ್ವೀಟ್ನಲ್ಲಿ ಹೇಳಿಕೊಂಡಿದ್ದರು. ಅಪೋಲೋ ಆಸ್ಪತ್ರೆಯ ಹಿರಿಯ ಡಾ. ಸಂದೀಪ್ ಗಲೇರಿಯಾ ಮತ್ತೆ ದೆಹಲಿಯ AIIMS ಆಸ್ಪತ್ರೆಯ ನಿರ್ದೇಶಕ ರಂದೀಪ್ ಸೇರಿದಂತೆ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಸೋಮವಾರ ನೆರವೇರಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/report_7103_2018-04-09.jpghttp://bp9news.com/wp-content/uploads/2018/05/report_7103_2018-04-09-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯMinister Arun Jaitley Kidney Transplant Surgery Treatment !!!ಬೆಂಗಳೂರ : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಮೂಲಗಳು ತಿಳಿಸಿವೆ. ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಸದ್ಯ ಅವರ ದೇಹ ಸ್ಥಿತಿ ಉತ್ತಮವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 65 ವರ್ಷದ ಅರುಣ್ ಜೇಟ್ಲಿ ಕಳೆದ ತಿಂಗಳಿಂದ ಡಯಲಿಸಿಸ್​​ ಚಿಕಿತ್ಸೆ ನೀಡಲಾಗುತ್ತಿತ್ತು. ಜೇಟ್ಲಿ 2014ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿಗೆ ಕೂಡ ಒಳಗಾಗಿದ್ದರು. ಏಪ್ರಿಲ್...Kannada News Portal