ಬೆಂಗಳೂರು : ಎಚ್ ಡಿ ರೇವಣ್ಣ ಅಂದ್ರೆ ವಾಸ್ತು ನಂಬಿಕೆ ವಾಸ್ತು ನಂಬುವವರು ಅಂದ್ರೆ ಅದು ರೇವಣ್ಣ… ಹೀಗಾಗಿಯೇ ಲೋಕೋಪಯೋಗಿ ಸಚಿವ ರೇವಣ್ಣ ಪ್ರತಿದಿನ ಹೊಳೆನರಸೀಪುರ TO ವಿಧಾನಸೌಧ ಮಧ್ಯೆ ಓಡಾಡುತ್ತಿದ್ದಾರೆ.

ಅವರಲ್ಲಿ ವಾಸ್ತುವಿನ ಗೀಳು ಎಷ್ಟರಮಟ್ಟಿಗೆ ಇದೆಯೆಂದರೆ ವಾಸ್ತು ಆಧರಿಸಿಯೇ ಎಲ್ಲಾ ಕೆಲಸ ಮಾಡುವುದು. ಮಹಾನ್ ದೈವ ಭಕ್ತ… ಪಂಚಾಂಗ ನೊಡದೇ ಅವರು ಯಾವ ಕೆಲಸವನ್ನೂ ಮಾಡುವುದೇ ಇಲ್ಲ ಎಂಬ ನಿರ್ಧಾರಕ್ಕೆ ಅವರ ಅಕ್ಕಪಕ್ಕದಲ್ಲಿ ಇರುವವರು ಎಂದೋ ನಿರ್ಧರಿಸಿ ಬಿಟ್ಟಿದ್ದಾರೆ.

ವಾಸ್ತುವಿಗೆ ಸಂಬಂಧಿಸಿದಂತೆ ರೇವಣ್ಣ ಅವರ ನಂಬಿಕೆಯೋ ಮೂಢನಂಬಿಕೆಯೋ ಆಗಾಗ ಅನಾವರಣಗೊಳ್ಳುತ್ತಲೇ ಇದೆ. ಮತದಾನದ ವೇಳೆ ಮತಯಂತ್ರವನ್ನೇ ತಿರುಗಿಸಿ ಇಟ್ಟು ಮತ ಚಲಾಯಿಸಿ ಸುದ್ದಿಯಾಗಿದ್ದರು. ಜನತಾದಳದ ಕೇಂದ್ರ ಕಚೇರಿ ಜೆ.ಪಿ. ಭವನ ನಿರ್ಮಾಣದ ವೇಳೆ ಕೂಡ ಮೆಟ್ಟಿಲುಗಳು ವಾಸ್ತು ಪ್ರಕಾರ ಇಲ್ಲವೆಂದು ಅದನ್ನು ನೆಲಸಮಗೊಳಿಸಿದ್ದರು.

ಈಗಲೂ ಅಷ್ಟೇ, ಗಾಂಧಿ ಭವನದ ಬಳಿ ಕುಮಾರಕೃಪಾ ಪಾರ್ಕ್ ಈಸ್ಟ್ ಗೇಟ್ನಲ್ಲಿ ಒಂದು ಎಕರೆ ಪ್ರದೇಶದಲ್ಲಿರುವ ವಿಸ್ತಾರವಾದ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಮನಸ್ಸು ಮಾಡದೆ ಪ್ರತಿದಿನ ಹೊಳೆನರಸೀಪುರ ಮತ್ತು ವಿಧಾನಸೌಧ ಮಧ್ಯೆ ಓಡಾಡುತ್ತಿದ್ದಾರೆ.

ಪ್ರತಿದಿನ ರೇವಣ್ಣ ಅವರು ಬೆಳಗ್ಗ ಐದಕ್ಕೆ ಎದ್ದು, ನಿತ್ಯಕರ್ಮ, ಪೂಜೆ ಮುಗಿಸಿದರೆ ಏಳರಿಂದ ಎಂಟರವರೆಗೆ ಸಾರ್ವಜನಿಕರ ಭೇಟಿಗೆ ಸಮಯ ನಿಗದಿಗೊಳಿಸಿದ್ದಾರೆ. ಅದಾದ ಬಳಿಕ ಸಮೀಪದ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಬೆಳ್ಳೂರು ಕ್ರಾಸ್‌ನ ಮಯೂರ ಹೋಟೆಲ್‌ನಲ್ಲಿ ತಿಂಡಿ ತಿನ್ನುತ್ತಾರೆ. ಹನ್ನೊಂದು ಗಂಟೆಗೆ ವಿಧಾನಸೌಧಕ್ಕೆ ಬಂದು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಅಧಿವೇಶನದ ಬಳಿಕ ಪದ್ಮನಾಭ ನಗರದಲ್ಲಿರುವ ತಂದೆ, ತಾಯಿ, ಸೋದರಿಯರನ್ನು ಭೇಟಿಯಾಗಿ 8.30ಹೊಳೆ ನರಸೀಪುರಕ್ಕೆ ಹೊರಟು ಹನ್ನೊಂದಕ್ಕೆ ಮನೆ ತಲುಪುತ್ತಾರೆ.

ಧರಂಸಿಂಗ್‌ ಮತ್ತು ಕುಮಾರಸ್ವಾಮಿ ಸರಕಾರಗಳಲ್ಲಿ ಈ ಹಿಂದೆ ಮಂತ್ರಿಯಾಗಿದ್ದಾಗ ವಾಸವಿದ್ದ ಶಿವಾನಂದ ಸರ್ಕಲ್‌ ಬಳಿ ಇರುವ ಬಂಗಲೆ ಪಡೆಯುವುದಕ್ಕೆ ರೇವಣ್ಣ ಬಹಳಷ್ಟು ಆಸಕ್ತರಾಗಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಆ ಬಂಗಲೆ ಅದೃಷ್ಟವೆಂದೇ ಪರಿಗಣಿಸಿದ್ದಾರೆ ಆದ ಕಾರಣ ಅವರು ಈಗಲೇ ಬಿಟ್ಟು ಕೊಡುವುದು ಕಂಡು ಬಾರದ ಹಿನ್ನಲೆಯಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಪ್ರತಿದಿನ ಹೊಳೆನರಸೀಪುರ TO ವಿಧಾನಸೌಧ ಮಧ್ಯೆ ಓಡಾಡುತ್ತಿದ್ದಾರೆ.

ಇದರ ಜೊತೆಗೆ ಮತ್ತೊಂದು ಓಪನ್ ಸೀಕ್ರೆಟ್ ಏನಪ್ಪಾ ಅಂದ್ರೆ ರೇವಣ್ಣ ಅವರ ಸಲಹೆಯಂತೆಯೇ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು, ಬಜೆಟ್‌ ಮಂಡಿಸಲು ಕೂಡ ದಿನ ನಿಗದಿಯಾಗಿದ್ದು.

ಬೆಂಗಳೂರಿನಲ್ಲಿರುವಾಗ ಪ್ರತಿದಿನ ಹತ್ತು ಗಂಟೆಯೊಳಗೆ ಹಲವು ದೇಗುಲಗಳಿಗೆ ಅವರು ಭೇಟಿ ನೀಡುತ್ತಾರೆ. ತಂದೆ ದೇವೇಗೌಡರಿಗೆ ಅನಾರೋಗ್ಯವಿದ್ದಾಗ ವೈದ್ಯರ ಸಲಹೆ ಮೀರಿ ದೇವಸ್ಥಾನಗಳಿಂದ ಪ್ರಸಾದ ತಂದು ನೀಡುತ್ತಿದ್ದರು. ಕುಮಾರಸ್ವಾಮಿ ಸಿಎಂ ಆದ ಬಳಿಕ ಕುಟುಂಬ ಸಮೇತ ತಮಿಳುನಾಡು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

ರೇವಣ್ಣ ಭಾಗವಹಿಸುವ ಯಾವುದೇ ಕಾರ್ಯಕ್ರಮವಾದರೂ ಜ್ಯೋತಿಷಿ ಸಲಹೆ ಪ್ರಕಾರವೇ ನಿಗದಿಗೊಳ್ಳುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅಧಿಕೃತ ನಿವಾಸ ಸಿಗುವವರೆಗೆ ಹೊಳೆನರಸೀಪುರ -ವಿಧಾನಸೌಧ ಮಧ್ಯೆ ದಿನ ನಿತ್ಯ ಪ್ರಯಾಣಿಸುವುದಾಗಿ ಖುದ್ದು ರೇವಣ್ಣ ಅವರೇ ಹೇಳಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/07/hd_1530775685.jpghttp://bp9news.com/wp-content/uploads/2018/07/hd_1530775685-150x150.jpgBP9 Bureauಪ್ರಮುಖರಾಜಕೀಯMinister Revanna Halenarasipur TO Vidyasudha Daily Tripಬೆಂಗಳೂರು : ಎಚ್ ಡಿ ರೇವಣ್ಣ ಅಂದ್ರೆ ವಾಸ್ತು ನಂಬಿಕೆ ವಾಸ್ತು ನಂಬುವವರು ಅಂದ್ರೆ ಅದು ರೇವಣ್ಣ... ಹೀಗಾಗಿಯೇ ಲೋಕೋಪಯೋಗಿ ಸಚಿವ ರೇವಣ್ಣ ಪ್ರತಿದಿನ ಹೊಳೆನರಸೀಪುರ TO ವಿಧಾನಸೌಧ ಮಧ್ಯೆ ಓಡಾಡುತ್ತಿದ್ದಾರೆ. ಅವರಲ್ಲಿ ವಾಸ್ತುವಿನ ಗೀಳು ಎಷ್ಟರಮಟ್ಟಿಗೆ ಇದೆಯೆಂದರೆ ವಾಸ್ತು ಆಧರಿಸಿಯೇ ಎಲ್ಲಾ ಕೆಲಸ ಮಾಡುವುದು. ಮಹಾನ್ ದೈವ ಭಕ್ತ... ಪಂಚಾಂಗ ನೊಡದೇ ಅವರು ಯಾವ ಕೆಲಸವನ್ನೂ ಮಾಡುವುದೇ ಇಲ್ಲ ಎಂಬ ನಿರ್ಧಾರಕ್ಕೆ ಅವರ ಅಕ್ಕಪಕ್ಕದಲ್ಲಿ ಇರುವವರು ಎಂದೋ ನಿರ್ಧರಿಸಿ...Kannada News Portal