ಮುಂಬೈನಲ್ಲಿ ನಡೆದ  ಮಿಸ್​ ಇಂಡಿಯಾ 2018 ರ ಸ್ಪರ್ಧೆಯಲ್ಲಿ ಅನುಕೀರ್ತಿ ವಾಸ್​ ಮಿಸ್​ ಇಂಡಿಯಾ  ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  55 ನೇ ಆವೃತ್ತಿಯ ಎಫ್​ಬಿಬಿ ಫೆಮಿನಾ ಮಿಸ್​ ಇಂಡಿಯಾದಲ್ಲಿ ತಮಿಳುನಾಡಿನವರೇ ಆಗಿರುವ  19 ವರ್ಷದ ವಯಸ್ಸಿನ  ಅನು ಕೀರ್ತಿ  ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸ್ಪರ್ಧೆಯಲ್ಲಿ ವಿಜೇತರಾಗಿ ಮಿಸ್​ ಇಂಡಿಯಾ ಕಿರೀಟ ತೊಟ್ಟಿದ್ದಾರೆ.

ಭಾರತದ 30  ರಾಜ್ಯಗಳಿಂದ ಭಾಗವಹಿಸಿದ್ದ  ಸ್ಪರ್ಧಿಗಳಿಗೆ  ಅರ್ಹತಾ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಆಯ್ಕೆಗೊಂಡ ಹಲವರಲ್ಲಿ ಮೂವರನ್ನು ಫೈನಲ್​ಗೆ ಆಯ್ಕೆ ಮಾಡಲಾಗಿತ್ತು.  ಆ ಸುತ್ತಿನಲ್ಲಿ ಕೀರ್ತೀಯ ಪಾಲಿಗೆ ಮಿಸ್​ ಇಂಡಿಯಾ ಗರಿ ಒಲಿದಿದೆ. ದ್ವೀತಿಯ ಸ್ಥಾನ ಹರಿಯಾಣದ ಮೀನಾಕ್ಷಿ ಚೌಧರಿ, ಹಾಗೂ ತೃತೀಯ ಸ್ಥಾನ  ಆಂಧ್ರದ ಶ್ರೇಯಾ ರಾವ್ ​ಅವರಿಗೆ  ಒಲಿದಿದೆ. ಈ ಸ್ಪರ್ಧೆಯಲ್ಲಿ  ನಿರ್ಮಾಪಕ ಕರಣ್​ ಜೋಹರ್​ ಮತ್ತು ನಟ ಆಯುಷ್ಮಾನ್​ ಖುರಾನ್​  ನಡೆಸಿಕೊಟ್ಟರು.  ಇದೇ ಸಂದರ್ಭದಲ್ಲಿ ವಿಜೇತರಾದ ಅನುಕೀರ್ತಿ ಕರಣ್ ಮಾತನಾಡಿ​ ಮುಂದೆ  ನಡೆಯವ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವುದಾಗಿ  ಹೇಳಿದ್ದಾರೆ.

ಸ್ಪರ್ಧೆಯಲ್ಲಿ ಗೆದ್ದ  ಅನುಕೀರ್ತಿ ಅವರಿಗೆ 2018 ಫೆಮಿನಾ ಮಿಸ್​ ಇಂಡಿಯಾ ಕಿರೀಟವನ್ನು ವಿಶ್ವ ಸುಂದರಿ   ವಿಜೇತೆ  ಮಾನುಷಿ ಚಿಲ್ಲಾರ್​ ತೊಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ  ದ್ವೀತೀಯ  ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳು 2108 ರ ಮಿಸ್​ ಗ್ರ್ಯಾಂಡ್​ ಇಂಟರ್​ ನ್ಯಾಷನಲ್​ 2018 ಹಾಗೂ ಮಿಸ್​ ಯುನೈಟೆಡ್​ ಕಾಂಟಿನೆಂಟ್​ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬಾಲಿವುಡ್ ಸುಂದರಿಯರಾದ ಕರೀನಾ ಕಪೂರ್, ಮಾಧುರಿ ದೀಕ್ಷಿತ್, ಜಾಕ್ವೇಲಿನ್ ಫರ್ನಾಂಡೀಸ್, ಅವರು ಗಾಲಾದಲ್ಲಿ ಪ್ರದರ್ಶನ ನೀಡಿದ್ದಾರೆ. ಕರಣ್ ಜೋಹರ್, ಆಯುಷ್ಮಾನ್ ಖುರಾನ್​, ರಾಕುಲ್ ಪ್ರೆಟ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/ತಅಮಿಳುನಾಡು.jpghttp://bp9news.com/wp-content/uploads/2018/06/ತಅಮಿಳುನಾಡು-150x150.jpgBP9 Bureauಪ್ರಮುಖಸಿನಿಮಾಮುಂಬೈನಲ್ಲಿ ನಡೆದ  ಮಿಸ್​ ಇಂಡಿಯಾ 2018 ರ ಸ್ಪರ್ಧೆಯಲ್ಲಿ ಅನುಕೀರ್ತಿ ವಾಸ್​ ಮಿಸ್​ ಇಂಡಿಯಾ  ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  55 ನೇ ಆವೃತ್ತಿಯ ಎಫ್​ಬಿಬಿ ಫೆಮಿನಾ ಮಿಸ್​ ಇಂಡಿಯಾದಲ್ಲಿ ತಮಿಳುನಾಡಿನವರೇ ಆಗಿರುವ  19 ವರ್ಷದ ವಯಸ್ಸಿನ  ಅನು ಕೀರ್ತಿ  ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸ್ಪರ್ಧೆಯಲ್ಲಿ ವಿಜೇತರಾಗಿ ಮಿಸ್​ ಇಂಡಿಯಾ ಕಿರೀಟ ತೊಟ್ಟಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal