ಬೆಂಗಳೂರು : ಬಿಜೆಪಿ ಶಾಸಕ ಪಿ.ರಾಜೀವ್ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ ಅಧ್ಯಕ್ಷರಾದ ಮುತ್ತಪ್ಪಡಾಂಗೆಯವರನ್ನು ಭೇಟಿಯಾಗಲು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಇಟನಾಳ ಗ್ರಾಮಕ್ಕೆ ಭೇಟಿ ನೀಡಿದರು.

ಗ್ರಾಮಕ್ಕೆ ಆಗಮಿಸಿದ ತಮ್ಮ ನೆಚ್ಚಿನ ಶಾಸಕರನ್ನು ಇಡೀ ಗ್ರಾಮದ ಜನ ಅದ್ಧೂರಿಯಾಗಿ ಸ್ವಾಗತ ಕೋಡಿದರು. ದಿಢೀರ್​ ಶಾಸಕರ ಗ್ರಾಮ ಭೇಟಿಯಿಂದಾಗಿ ಗ್ರಾಮದಲ್ಲಿ ಸಡಗರ ಮನೆ ಮಾಡಿತ್ತು. ಆದರೆ ಶಾಸಕ ಪಿ.ರಾಜೀವ್ ಅವರ ಆಪ್ತ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ ಅಧ್ಯಕ್ಷ ಮುತ್ತಪ್ಪಡಾಂಗೆ ಆ ಸಮಯದಲ್ಲಿ ಗ್ರಾಮದಲ್ಲಿ ಇರಲಿಲ್ಲ. ತನನ್ನು ಭೇಟಿಯಾಗಲೆಂದೇ ಶಾಸಕರು ಗ್ರಾಮಕ್ಕೆ ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿದ ಮುತ್ತಪ್ಪಡಾಂಗೆ ತಕ್ಷಣ ಗ್ರಾಮಕ್ಕಾಗಮಿಸಿ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲಿಯೇ ಗ್ರಾಮದ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕುಡಚಿಯಿಂದ ಪಿ. ರಾಜೀವ್ ಅವರು 67,782 ಸಾವಿರ ಮತಗಳನ್ನು ಪಡೆದು ಎರಡೇ ಬಾರಿ ಶಾಸಕರಗಿ ಹಾರಸಿ ಬಂದಿದ್ದಾರೆ.

ವರದಿಗಾರ :- ಯಲ್ಲಪ್ಪ ಮಬನೂರ

Please follow and like us:
0
http://bp9news.com/wp-content/uploads/2018/06/WhatsApp-Image-2018-06-02-at-4.48.22-PM-1.jpeghttp://bp9news.com/wp-content/uploads/2018/06/WhatsApp-Image-2018-06-02-at-4.48.22-PM-1-150x150.jpegBP9 Bureauಪ್ರಮುಖಬಾಗಲಕೋಟೆರಾಜಕೀಯMLA P. Rajeev meets Muttapadam !!!ಬೆಂಗಳೂರು : ಬಿಜೆಪಿ ಶಾಸಕ ಪಿ.ರಾಜೀವ್ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ ಅಧ್ಯಕ್ಷರಾದ ಮುತ್ತಪ್ಪಡಾಂಗೆಯವರನ್ನು ಭೇಟಿಯಾಗಲು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಇಟನಾಳ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಕ್ಕೆ ಆಗಮಿಸಿದ ತಮ್ಮ ನೆಚ್ಚಿನ ಶಾಸಕರನ್ನು ಇಡೀ ಗ್ರಾಮದ ಜನ ಅದ್ಧೂರಿಯಾಗಿ ಸ್ವಾಗತ ಕೋಡಿದರು. ದಿಢೀರ್​ ಶಾಸಕರ ಗ್ರಾಮ ಭೇಟಿಯಿಂದಾಗಿ ಗ್ರಾಮದಲ್ಲಿ ಸಡಗರ ಮನೆ ಮಾಡಿತ್ತು. ಆದರೆ ಶಾಸಕ ಪಿ.ರಾಜೀವ್ ಅವರ ಆಪ್ತ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ...Kannada News Portal