ಬಸವ ಪುರಾಣಕ್ಕೆ ಚಾಲನೆ
ಬಸವ ಪುರಾಣಕ್ಕೆ ಚಾಲನೆ

ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ನಿಮಿತ್ತ ಈ ಕಾರ್ಯದ ಪೂರ್ವದಲ್ಲಿ 3 ತಿಂಗಳ ಪರಿಯಂತರ ಬಸವ ಪುರಾಣವನ್ನು ನೇರವೆರಿಸುವುದರೊಂದಿಗೆ ಅನುಭವ ಮಂಟಪಲೋಕಾರ್ಪಣೆಗೊಳಿಸಬೇಕೆಂಬುವದು ಶ್ರೀ ಶ್ರೀ ಶ್ರೀ ಷ.ಶಿ ಸಿದ್ಧರಾಮ ಮಹಾಸ್ವಾಮಿಗಳ ಸಂಕಲ್ಪವಾಗಿತ್ತು.

ಆ ಹಿನ್ನೆಲೆಯಲ್ಲಿ ಬಸವ ಪುರಾಣ ಹಮ್ಮಿಕೊಂಡಿದ್ದು ಬಸವ ಪುರಾಣದ ಹೊತ್ತಿಗೆಯನ್ನು ಗ್ರಾಮ ದೇವತೆಗಳ ಪಲ್ಲಕಿ ಉತ್ಸವ ಮತ್ತು ಆರತಿ-ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆಯ ಮುಖಾಂತರ ಶ್ರೀ ಮುರುಘರಾಜೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಬಸವ ಪುರಾಣದ ವೇದಿಕೆಗೆ ಬರಮಾಡಿಕೊಂಡು ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣವನ್ನು ಮಾಡಿದರು.

ನಂತರ ಶರಣ ಶ್ರೀ ಈಶ್ವರ ಮಂಟೂರ ಬಸವ ಪುರಾಣದ ಮೊದಲನೆಯ ಅಧ್ಯಾಯದ ಕೆಲ ನುಡಿಗಳನ್ನು ವಿಸ್ತರಿಸುವ ಮುಖಾಂತರ ಬಸವ ಪುರಾಣವನ್ನು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಹುಕ್ಕೇರಿ ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ ಇತಿಹಾಸವನ್ನು ಓದಿರುವ ನಾವು 12ನೇ ಶತಮಾನದಲ್ಲಿ ಸರ್ವ ಧರ್ಮದವರು ಕೂಡಿ ದುಡಿಯುವ ಒಂದೂಗೂಡಿ ಪ್ರಸಾದ ಸೇವಿಸುವ ಕಾಯಕವೇ ಕೈಲಾಸ ಎಂದು ವಿವಿಧ ವೃತ್ತಿ ಮಾಡುವ ಜನರು ಅಂದಿನ ಶತಮಾನದಲ್ಲಿ ಬದುಕಿ ಬಾಳಿದರೆಂದೂ ಕೇಳಿದ್ದೇವೆ. ಆದರೆ ಇಂದು ಭಾರತ ದೇಶದಲ್ಲಿ ಮತ್ತೆ 12ನೇ ಶತಮಾನದ ಮಹಾವೈಭವ ಮರುಕಳಿಸಿರುವ ಪುಣ್ಯದ ಭೂಮಿ ಯಾವುದಾದರೂ ಇದ್ದರೆ ಅದುವೇ ಸುಕ್ಷೇತ್ರ ಮುಗಳಖೋಡ” ಎಂದರು.

ಬಸವ ಪುರಾಣಕ್ಕೆ ಚಾಲನೆ1
ಬಸವ ಪುರಾಣಕ್ಕೆ ಚಾಲನೆ1

ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, “ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಸಂಕಲ್ಪವನ್ನು ಪೂರೈಸುವದರಗೊಸ್ಕರ ಶ್ರೀಗಳ ಸೇವೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಶ್ರಮಿಸುತ್ತಿರುವ ಶ್ರೀಮಠದ ಸದ್ಭಕ್ತರ ಸೇವೆ ಹೇಳತೀರದು. ಇಂದು ಸಮಾಜದಲ್ಲಿ ಜಿಡ್ಡು ಹಿಡಿದಿರುವ ಜಾತಿ-ವಿಜಾತಿ, ಧರ್ಮ-ಅಧರ್ಮ, ಅಸಮಾನತೆಯು ತಾಂಡವವಾಡಿ ಅನ್ಯ ಮಾರ್ಗವನ್ನು ಹಿಡಿದಿರುವ ಈ ಶತಮಾನಕ್ಕೆ ಬಸವ ಪುರಾಣದ ಬೋಧನೆಯೊಂದಿಗೆ ಸರ್ವ ಜನರ ಸನ್ಮಾರ್ಗವನ್ನು ಹಿಡಿದು ಶಾಂತಿಯಿಂದ ಬದುಕುವಂತದಾಗಲಿ”ಎಂದರು.

ಈ ಸಂದರ್ಭದಲ್ಲಿ ಪ್ರಭು ಚೆನ್ನಬಸವ ಮಹಾಸ್ವಾಮಿಗಳು ಮೊಟಗಿ ಮಠ ಅಥಣಿ, ಶ್ರೀ ಶಿವಬಸವ ಮಹಾಸ್ವಾಮಿಗಳು ಗಚ್ಚಿನಮಠ ಅಥಣಿ, ಶರಣ ಶ್ರೀ ಈಶ್ವರ ಮಂಟೂರ ಮಧುರಖಂಡಿ, ಸ್ಥಳೀಯ ಶಾಸಕರಾದ ಪಿ.ರಾಜೀವ್ , ಪ್ರಭು ದೇವರು ರಬಕವಿ, ಶ್ರೀ ಪ.ಪೂ ಅಣ್ಣಯ್ಯಾ ದೇವರು ಚಿನಮಗೇರಿ, ಶ್ರೀ ಮಹಾಂತೇಶ ಗೋಳಸಂಗಿ ಪುರಸಭೆ ಅಧ್ಯಕ್ಷರು ಮುಗಳಖೋಡ, ಶ್ರೀ ಎಸ್ ಸತ್ಯನಾರಾಯಣರಾವ ಪುರಸಭೆ ಮುಖ್ಯಾಧಿಕಾರಿಗಳು ಮುಗಳಖೋಡ ಹಾಗೂ ಗಣ್ಯರು ಉಪಸ್ಥಿತರಿದ್ದರು.

Please follow and like us:
0
BP9 News Bureauಆಧ್ಯಾತ್ಮಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ನಿಮಿತ್ತ ಈ ಕಾರ್ಯದ ಪೂರ್ವದಲ್ಲಿ 3 ತಿಂಗಳ ಪರಿಯಂತರ ಬಸವ ಪುರಾಣವನ್ನು ನೇರವೆರಿಸುವುದರೊಂದಿಗೆ ಅನುಭವ ಮಂಟಪಲೋಕಾರ್ಪಣೆಗೊಳಿಸಬೇಕೆಂಬುವದು ಶ್ರೀ ಶ್ರೀ ಶ್ರೀ ಷ.ಶಿ ಸಿದ್ಧರಾಮ ಮಹಾಸ್ವಾಮಿಗಳ ಸಂಕಲ್ಪವಾಗಿತ್ತು. ಆ ಹಿನ್ನೆಲೆಯಲ್ಲಿ ಬಸವ ಪುರಾಣ ಹಮ್ಮಿಕೊಂಡಿದ್ದು ಬಸವ ಪುರಾಣದ ಹೊತ್ತಿಗೆಯನ್ನು ಗ್ರಾಮ ದೇವತೆಗಳ ಪಲ್ಲಕಿ ಉತ್ಸವ ಮತ್ತು ಆರತಿ-ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆಯ ಮುಖಾಂತರ ಶ್ರೀ ಮುರುಘರಾಜೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಹರ...Kannada News Portal