ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಹರಿಹರಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕ ಪ್ರಗತಿಪರ ರೈತ ಜವರೇಗೌಡ(55) ತಮ್ಮ ಜಮೀನಿನ ಬಳಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿ. ಹರಿಹರಪುರ ಗ್ರಾಮದ ಯಾಲಕ್ಕಿಗೌಡರ ಮಗನಾದ ಜವರೇಗೌಡ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 50ಸಾವಿರ ರೂ ಸಾಲ ಸೇರಿದಂತೆ 2ಲಕ್ಷರೂಗಳಿಗೂ ಹೆಚ್ಚಿನ ಕೈಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ತಮ್ಮ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ಬಾಳೆ ಮತ್ತು ತೆಂಗನ್ನು ಬೆಳೆದಿದ್ದ ಸ್ವಾಭಿಮಾನಿ ರೈತ ಜವರೇಗೌಡ ತಮ್ಮ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಜಮೀನಿನ ಕಡೆ ಹೋದ ತಮ್ಮ ಪತಿ ಮದ್ಯಾಹ್ನವಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮೃತ ಜವರೇಗೌಡರ ಪತ್ನಿ ನಂಜಾಮಣಿ ತೋಟದ ಬಳಿ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ದ್ದ ಮೃತ ದೇಹ ಪತ್ತೆಯಾಗಿದೆ…ಸುದ್ದಿ ತಿಳಿಯುತ್ತಿದ್ದಂತೆ ಮೃತ ಜವರೇಗೌಡರ ಸಂಬಂಧಿಗಳು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು  ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಘಟನೆಯ ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಆನಂದಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತರ ಸಂಬಂಧಿಗಳ ಆಕ್ರಂಧನವು ಮುಗಿಲು ಮುಟ್ಟಿದೆ.
Please follow and like us:
0
http://bp9news.com/wp-content/uploads/2018/11/farmer-suicide-1-1024x768.jpghttp://bp9news.com/wp-content/uploads/2018/11/farmer-suicide-1-e1541656818799-150x150.jpgBP9 Bureauಪ್ರಮುಖಮಂಡ್ಯಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಹರಿಹರಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕ ಪ್ರಗತಿಪರ ರೈತ ಜವರೇಗೌಡ(55) ತಮ್ಮ ಜಮೀನಿನ ಬಳಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿ. ಹರಿಹರಪುರ ಗ್ರಾಮದ ಯಾಲಕ್ಕಿಗೌಡರ ಮಗನಾದ ಜವರೇಗೌಡ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 50ಸಾವಿರ ರೂ ಸಾಲ ಸೇರಿದಂತೆ 2ಲಕ್ಷರೂಗಳಿಗೂ ಹೆಚ್ಚಿನ ಕೈಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ತಮ್ಮ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ಬಾಳೆ ಮತ್ತು ತೆಂಗನ್ನು...Kannada News Portal