ಮಂಡ್ಯ : 2018ನೇ ಸಾಲಿನಲ್ಲಿ ಅವಧಿ ಮುಕ್ತಾಯಗೊಳ್ಳುವ ಜಿಲ್ಲೆಯ ಮಂಡ್ಯ ನಗರಸಭೆ ಹಾಗೂ ಮದ್ದೂರು ಪುರಸಭೆಗೆ ಮತ್ತು ಸರ್ಕಾರವು ಉನ್ನತೀಕರಿಸುವ ಪಾಂಡವಪುರ ಪುರಸಭೆ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಆಯೋಗದ ಸುತ್ತೋಲೆ ನಿರ್ದೇಶನಗಳನ್ವಯ ಕರಡು ಮತದಾರರ ಪಟ್ಟಿಯನ್ನು ಜೂನ್.27ಕ್ಕೆ ಪ್ರಕಟವಾಗಲಿದೆ.

ಎಲ್ಲಾ ಐದು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ನೀಡಿದ್ದು, ಸದರಿ ಮತದಾರರ ಪಟ್ಟಿಯು ಆಯಾ ತಾಲ್ಲೂಕು ತಹಶೀಲ್ದಾರರ ಕಛೇರಿ ಹಾಗೂ ಸಂಬಂಧಿಸಿದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಲಭ್ಯವಿರುತ್ತದೆ. ಮತದಾರರು ವಾಸವಿರುವ ವಾರ್ಡಿನ ವ್ಯಾಪ್ತಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದ್ದು,  ಜೂನ್ 27 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ವಾರ್ಡ್‍ವಾರು ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ನಡೆಯುವುದರಿಂದ, ಯಾವುದೇ ಮತದಾರರ ಹೆಸರು ಕೈಬಿಟ್ಟು ಹೋಗಿದ್ದಲ್ಲಿ, ತಿದ್ದುಪಡಿಯಾಗಬೇಕಾಗಿದ್ದಲ್ಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ  ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/voterlist.jpghttp://bp9news.com/wp-content/uploads/2018/06/voterlist-150x150.jpgBP9 Bureauಮಂಡ್ಯಮಂಡ್ಯ : 2018ನೇ ಸಾಲಿನಲ್ಲಿ ಅವಧಿ ಮುಕ್ತಾಯಗೊಳ್ಳುವ ಜಿಲ್ಲೆಯ ಮಂಡ್ಯ ನಗರಸಭೆ ಹಾಗೂ ಮದ್ದೂರು ಪುರಸಭೆಗೆ ಮತ್ತು ಸರ್ಕಾರವು ಉನ್ನತೀಕರಿಸುವ ಪಾಂಡವಪುರ ಪುರಸಭೆ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಆಯೋಗದ ಸುತ್ತೋಲೆ ನಿರ್ದೇಶನಗಳನ್ವಯ ಕರಡು ಮತದಾರರ ಪಟ್ಟಿಯನ್ನು ಜೂನ್.27ಕ್ಕೆ ಪ್ರಕಟವಾಗಲಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal