ಮಂಡ್ಯ  :  ಕೆ.ಆರ್. ಪೇಟೆ ತಾಲೂಕಿನ ಮಡವಿನಕೋಡಿ ಗ್ರಾಮದಲ್ಲಿ ನಕಲಿ ವಕೀಲ ಪತ್ತೆಯಾಗಿದ್ದಾನೆ. ಗ್ರಾಪಂ ನಿವೃತ್ತ ಕಾರ್ಯದರ್ಶಿ ಚಂದ್ರ ಶೇಖರ ಅವರ ಪುತ್ರ ಎಂ.ಸಿ ಪ್ರವೀಣ್ ಕುಮಾರ್  ಎಂಬಾತಾನೆ ನಕಲಿ ವಕೀಲ. ಮೈಸೂರು ವಿಶ್ವ ವಿದ್ಯಾಯಲದಿಂದ ನಕಲಿ ಪದವಿ ಪಡೆದು ತಾಲೂಕಿನ ನ್ಯಾಯಾಲಯದಲ್ಲಿ ವಕೀಲಗಿರಿ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.

ಪ್ರವೀಣ್ ಕುಮಾರ್  98 ರಲ್ಲಿ ಕಾನೂನು ಪದವಿಗೆ ಸೇರಿದ್ದಾನೆ  ಹಾಗೂ 2005ರಲ್ಲಿ ಎಲ್ಎಲ್ ಬಿ ಪದವಿಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಈ ಎಲ್ಲಾ ದಾಖಲೆಗಳು ನಕಲಿದಾಖಲೆಗಳು, ಈ ಎಲ್ಲವನ್ನು ನಕಲಿ ವಕೀಲ ಪ್ರವೀಣನೆ ಸೃಷ್ಠಿಸಿದ್ದು ಎಂದು  ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ರಾಜೇಶ್ ಆರೋಪಿಸಿದ್ದಾರೆ. ಇನ್ನು  ಈ ಪ್ರವೀಣ್ ಕುಮಾರ್ ಅವರ ನಕಲಿ ದಾಖಲಾತಿಗಳನ್ನು ಮತ್ತು ನಕಲಿ ಪದವಿ ಬಗ್ಗೆ ಅವರ ಸಹದ್ಯೋಗಿ ವಕೀಲರುಗಳೇ ಬಯಲಿಗೆಳೆದಿದ್ದಾರೆ. ಈ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ IPC 420  ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದದೆ.
Please follow and like us:
0
http://bp9news.com/wp-content/uploads/2018/09/WhatsApp-Image-2018-09-15-at-4.14.28-PM-1024x1024.jpeghttp://bp9news.com/wp-content/uploads/2018/09/WhatsApp-Image-2018-09-15-at-4.14.28-PM-150x150.jpegBP9 Bureauಪ್ರಮುಖಮಂಡ್ಯಮಂಡ್ಯ  :  ಕೆ.ಆರ್. ಪೇಟೆ ತಾಲೂಕಿನ ಮಡವಿನಕೋಡಿ ಗ್ರಾಮದಲ್ಲಿ ನಕಲಿ ವಕೀಲ ಪತ್ತೆಯಾಗಿದ್ದಾನೆ. ಗ್ರಾಪಂ ನಿವೃತ್ತ ಕಾರ್ಯದರ್ಶಿ ಚಂದ್ರ ಶೇಖರ ಅವರ ಪುತ್ರ ಎಂ.ಸಿ ಪ್ರವೀಣ್ ಕುಮಾರ್  ಎಂಬಾತಾನೆ ನಕಲಿ ವಕೀಲ. ಮೈಸೂರು ವಿಶ್ವ ವಿದ್ಯಾಯಲದಿಂದ ನಕಲಿ ಪದವಿ ಪಡೆದು ತಾಲೂಕಿನ ನ್ಯಾಯಾಲಯದಲ್ಲಿ ವಕೀಲಗಿರಿ ಮಾಡುತ್ತಿದ್ದಾನೆಂದು ತಿಳಿದುಬಂದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal