ಮಂಡ್ಯ: ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವನಾಡಿ ಕನ್ನಂಬಾಡಿ ಕಟ್ಟೆ 10 ವರ್ಷಗಳ ಬಳಿಕ ಪೂರ್ತಿ ತುಂಬುವತ್ತ ಸಾಗಿದೆ. ಜಲಾಶಯಕ್ಕೆ ಬುಧವಾರ ಸಂಜೆ 35,435 ಕ್ಯುಸೆಕ್ಸ್​ ಒಳಹರಿವಿದ್ದ ನೀರಿನ ಪ್ರಮಾಣ ಗುರುವಾರ ಬೆಳಗ್ಗೆ 37,783 ಕ್ಯುಸೆಕ್ಸ್​​ಗೆ ಏರಿಕೆಯಾಗಿದೆ.

124.80 ಅಡಿ ಗರಿಷ್ಠ ಮಟ್ಟದ ಕಟ್ಟೆಯಲ್ಲೀಗ 117.70 ಅಡಿ ನೀರು ಸಂಗ್ರಹವಾಗಿದೆ. ಅಣೆ‌ಕಟ್ಟೆಯಿಂದ 3,983 ಕ್ಯುಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದಕ್ಕೂ ಮೊದಲು 2009ರ ಜುಲೈ 24ಕ್ಕೆ ಕನ್ನಂಬಾಡಿ ಕಟ್ಟೆ ಭರ್ತಿಯಾಗಿತ್ತು. ಈ ಬಾರಿಯೂ ಜುಲೈನಲ್ಲಿ ತುಂಬುವ ಸಾಧ್ಯತೆಗಳು ದಟ್ಟವಾಗಿವೆ.

ಮತ್ತೊಂದು ವಿಶೇಷವೆಂದರೆ 3 ವರ್ಷಗಳ ನಂತರ ಕಟ್ಟೆಯಲ್ಲಿ ಅಧಿಕ ನೀರು ಸಂಗ್ರಹವಾದ ದಾಖಲೆ ಕೂಡ ಆಗಿದೆ. ಕಳೆದ ವರ್ಷ ಇದೇ ವೇಳೆಗೆ 114.32 ಅಡಿಯಷ್ಟೇ ತುಂಬಿತ್ತು. ಮಾತ್ರವಲ್ಲ, ಆ ವರ್ಷ ಅಧಿಕವಾಗಿ ಸಂಗ್ರಹವಾಗಿದ್ದ ನೀರಿನ ಪ್ರಮಾಣವೂ ಹೌದು.

ಯಾವ್ಯಾವ ವರ್ಷ ಭರ್ತಿಯಾಗಿತ್ತು..?…

2000 ಇಸವಿಯಿಂದೀಚೆಗೆ ಗರಿಷ್ಠ ಮಟ್ಟ ತಲುಪಿದ್ದು ಅಧಿಕವಾಗಿ ಆಗಸ್ಟ್ ತಿಂಗಳಲ್ಲಿ. 2014ರ ಆಗಸ್ಟ್ 7, 2013ರ 1, 2011ರ 13, 2008ರ 15, 2005ರ 11, 2004ರ 21ರಂದು ಆಗಸ್ಟ್ ತಿಂಗಳಲ್ಲಿ ಕಟ್ಟೆ ಭರ್ತಿಯಾಗಿತ್ತು. 2010ರ 28, 2000ರ 7ರಂದು ಅಕ್ಟೋಬರ್ ತಿಂಗಳಲ್ಲಿ ಭರ್ತಿಯಾಗಿದ್ದರೆ, 2009ರಲ್ಲಿ ಜುಲೈ 24, 2007ರ 15, 2006ರ 27ರಂದು ಜುಲೈ ತಿಂಗಳಲ್ಲಿ ಭರ್ತಿಯಾಗಿತ್ತು.

ಯಾವ್ಯಾವ ವರ್ಷ ಭರ್ತಿಯಾಗಿರಲಿಲ್ಲ..?

2000 ಇಸವಿಯಿಂದ ಈತನಕ 7 ವರ್ಷ ಅಣೆಕಟ್ಟೆ ಭರ್ತಿಯಾಗಿಯೇ ಇಲ್ಲ. 2015ರ ನ.17ರಂದು ಗರಿಷ್ಠ 111 ಅಡಿ ತುಂಬಿದ್ದರೆ, 2016ರ ಆಗಸ್ಟ್ 27ರಂದು 99.65 ಅಡಿ ಸಂಗ್ರಹವಾಗಿತ್ತು. 2017ರ ಅಕ್ಟೋಬರ್ 23ರಂದು 114.32, 2012ರ ಸೆ.15ರಂದು 110.63 ಅಡಿ ಸಂಗ್ರಹವಾಗಿತ್ತು. 2001ರ ನವೆಂಬರ್ 12ರಂದು 121.20 ಅಡಿ, 2002ರ ಅಕ್ಟೋಬರ್ 24ರಂದು 110.93, 2003ರ ಅಕ್ಟೋಬರ್ 27ರಂದು 99.16 ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

350ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

ಕನ್ನಂಬಾಡಿ ಕಟ್ಟೆ 2000 ಇಸವಿಯಿಂದೀಚೆಗೆ ಅಂದರೆ 18 ವರ್ಷಕ್ಕೆ 11 ವರ್ಷ ಮಾತ್ರ ಭರ್ತಿಯಾಗಿದೆ. ಉಳಿದ 7 ವರ್ಷಗಳ ಕಾಲ ಬರ ತಾಂಡವವಾಡಿತ್ತು. ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ 4 ವರ್ಷ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸತತ 3 ವರ್ಷ ಬರದಿಂದ ರೈತರು ನಲುಗಿ ಹೋಗಿದ್ದರು. ಮಾತ್ರವಲ್ಲ 350ಕ್ಕೂ ಹೆಚ್ಚು ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನ್ನಂಬಾಡಿ ಕಟ್ಟೆ ಮೂರು ವರ್ಷಗಳ ಬಳಿಕ ಪೂರ್ತಿ ತುಂಬಲಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜತೆಗೆ ಜುಲೈ 20ರಿಂದ ನಾಲೆಗಳಿಗೆ ನೀರು ಬಿಡುವುದಾಗಿ ನೀರಾವರಿ ಸಲಹಾ ಸಮಿತಿ ಹೇಳಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ.

ಜು.20ರಂದು ಸಿಎಂ ಬಾಗಿನ

ಜೀವನಾಡಿ ಕನ್ನಂಬಾಡಿ ಜು.19ರ ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆಗಳಿದ್ದು, ಜು.20 ಅಥವಾ 21ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಾಗಿನ ಅರ್ಪಿಸಲು ಸಿದ್ಧತೆಗಳು ನಡೆದಿವೆ. ಮುಖ್ಯಮಂತ್ರಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Please follow and like us:
0
http://bp9news.com/wp-content/uploads/2018/07/7e5923da45a6611e28ce1ae7e6ef7c77.jpghttp://bp9news.com/wp-content/uploads/2018/07/7e5923da45a6611e28ce1ae7e6ef7c77-150x150.jpgBP9 Bureauಪ್ರಮುಖಮಂಡ್ಯಮೈಸೂರುಮಂಡ್ಯ: ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವನಾಡಿ ಕನ್ನಂಬಾಡಿ ಕಟ್ಟೆ 10 ವರ್ಷಗಳ ಬಳಿಕ ಪೂರ್ತಿ ತುಂಬುವತ್ತ ಸಾಗಿದೆ. ಜಲಾಶಯಕ್ಕೆ ಬುಧವಾರ ಸಂಜೆ 35,435 ಕ್ಯುಸೆಕ್ಸ್​ ಒಳಹರಿವಿದ್ದ ನೀರಿನ ಪ್ರಮಾಣ ಗುರುವಾರ ಬೆಳಗ್ಗೆ 37,783 ಕ್ಯುಸೆಕ್ಸ್​​ಗೆ ಏರಿಕೆಯಾಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal