ಮಂಡ್ಯ : ಖಾತೆ ಹಂಚಿಕೆಯಾದ ಬೆನ್ನಲ್ಲೇ  ಜೆಡಿಎಸ್​​ಗೆ ಜಿಲ್ಲಾ ಉಸ್ತುವಾರಿ ಖಾತೆಯ ಕ್ಯಾತೆ ತಲೆನೋವಾಗಿದೆ. ಅದರಲ್ಲೂ ಮಂಡ್ಯದಲ್ಲಿ ಎರಡು ಜನ ಸಚಿವರಿದ್ದು, ಪುಟ್ಟರಾಜು, ಡಿ.ಸಿ. ತಮ್ಮಣ್ಣ ಇಬ್ಬರು ತಮಗೆ ಮಂಡ್ಯ ಉಸ್ತುವಾರಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಸಚಿವ ಡಿ.ಸಿ. ತಮ್ಮಣ್ಣ ಪರ ದೇವೇಗೌಡರು ಮತ್ತು ಅಂಬರೀಶ್​​ ಒಲವುತೋರುತ್ತಿದ್ದಾರಂತೆ.

ಶಾಸಕ ಡಿ.ಸಿ. ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ಕೊಡಿಸುವಲ್ಲಿ ಯಶಸ್ವಿಯಾದ ಅಂಬರೀಶ್​, ಮುಂದುವರೆದು ಮಂಡ್ಯ ಉಸ್ತುವಾರಿ ಕೊಡಿಸಲು ಲಾಭಿ ನಡೆಸಿದ್ದಾರೆ. ಈ ಸಂಬಂಧ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜೊತೆ ಅಂಬಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಡಿ.ಸಿ.ತಮ್ಮಣ್ಣ ಕುಟುಂಬ ಸದಸ್ಯರು ಅಂಬರೀಶ್ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇನ್ನು ತಮ್ಮಣ್ಣರ ಸೋದರ ಸಂಬಂಧಿಯಾಗಿರುವ ಅಂಬರೀಶ್​​​, ಮಂಡ್ಯದಲ್ಲಿ ಜೆಡಿಎಸ್ ಗೆಲುವಿಗೆ ಪರೋಕ್ಷ ಬೆಂಬಲ ನೀಡಿದ್ದರು.

Please follow and like us:
0
http://bp9news.com/wp-content/uploads/2018/06/collage-2-11.jpghttp://bp9news.com/wp-content/uploads/2018/06/collage-2-11-150x150.jpgBP9 Bureauಪ್ರಮುಖಮಂಡ್ಯರಾಜಕೀಯಮಂಡ್ಯ : ಖಾತೆ ಹಂಚಿಕೆಯಾದ ಬೆನ್ನಲ್ಲೇ  ಜೆಡಿಎಸ್​​ಗೆ ಜಿಲ್ಲಾ ಉಸ್ತುವಾರಿ ಖಾತೆಯ ಕ್ಯಾತೆ ತಲೆನೋವಾಗಿದೆ. ಅದರಲ್ಲೂ ಮಂಡ್ಯದಲ್ಲಿ ಎರಡು ಜನ ಸಚಿವರಿದ್ದು, ಪುಟ್ಟರಾಜು, ಡಿ.ಸಿ. ತಮ್ಮಣ್ಣ ಇಬ್ಬರು ತಮಗೆ ಮಂಡ್ಯ ಉಸ್ತುವಾರಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಸಚಿವ ಡಿ.ಸಿ. ತಮ್ಮಣ್ಣ ಪರ ದೇವೇಗೌಡರು ಮತ್ತು ಅಂಬರೀಶ್​​ ಒಲವುತೋರುತ್ತಿದ್ದಾರಂತೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal