ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿಯ ಎನ್.ಜಿ.ಓ ಕಾಲೋನಿಯ ಬಳಿ ಚಿರತೆ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿ ಅದನ್ನು ಕಚ್ಚಿಹಾಕಿ ದೇಹವನ್ನು ಸಂಪೂರ್ಣವಾಗಿ ತಿಂದು ತಲೆಯನ್ನು ಮಾತ್ರ ಉಳಿಸಿ ಹೋಗಿದೆ.

ಎಂ.ಡಿ.ನಸೀರ್ ಅವರು ಮನೆಯ ಬಾಗಿಲಿನಲ್ಲಿ ಕಟ್ಟಿದ್ದ ಸಾಕು ನಾಯಿ (ಮುನ್ನಾ) ಯನ್ನು ಚಿರತೆ ತಿಂದು ಹೋಗಿದ್ದು, ಇದರಿಂದ NGO  ಕಾಲೋನಿಯ ನಿವಾಸಿಗಳು ಭಯ ಭೀತರಾಗಿದ್ದಾರೆ. ನಾಯಿಯ ಚೀರಾಟ ಹಾಗೂ ಕಿರುಚಾಟದಿಂದ ಎದ್ದ ನಸೀರ್ ಮತ್ತು  ಕುಟುಂಬದ ಸದಸ್ಯರು ಹೊರಬಂದು ನೋಡಿದಾಗ ಚಿರತೆಯು ನಾಯಿಯ ದೇಹವನ್ನು ಹೊತ್ತೊಯ್ದು ತಿಳಿದು ಬಂದಿದೆ. ಘಟನೆ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆಯನ್ನು  ಸೆರೆಹಿಡಿಯಲು ಬೋನನ್ನು ಇಡುವುದಾಗಿ ತಿಳಿಸಿದ್ದಾರೆ.
Please follow and like us:
0
http://bp9news.com/wp-content/uploads/2018/09/cheeta-attack-1024x768.jpghttp://bp9news.com/wp-content/uploads/2018/09/cheeta-attack-e1537697970247-150x150.jpgBP9 Bureauಪ್ರಮುಖಮಂಡ್ಯಮಂಡ್ಯ : ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿಯ ಎನ್.ಜಿ.ಓ ಕಾಲೋನಿಯ ಬಳಿ ಚಿರತೆ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ಮಾಡಿ ಅದನ್ನು ಕಚ್ಚಿಹಾಕಿ ದೇಹವನ್ನು ಸಂಪೂರ್ಣವಾಗಿ ತಿಂದು ತಲೆಯನ್ನು ಮಾತ್ರ ಉಳಿಸಿ ಹೋಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal