ಮಂಡ್ಯ:  ಜಿಲ್ಲೆಯಲ್ಲಿ ನಡೆದ ಲೋಕಸಭಾ ಕ್ಷೇತ್ರದ ಪರಾಜಿತ ಡಾ.ಸಿದ್ದರಾಮಯ್ಯ ಸುದ್ದಿ ಗೊಷ್ಠಿಯನ್ನು ನಡೆಸಿದರು. ಉಪಚುನಾವಣೆಯಲ್ಲಿ ತಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು ಬಿಜೆಪಿ ಅಭ್ಯರ್ಥಿ.
ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತ “ ನಾನು ಎಲ್ಲೂ ಹೋಗಲ್ಲ,ಮಂಡ್ಯದಲ್ಲಿದ್ದು ಪಕ್ಷ ಕಟ್ತೀನಿ ಚುನಾವಣೇಲಿ ಅಭೂತಪೂರ್ವ ಬೆಂಬಲವನ್ನು ಜನ ನೀಡಿದ್ದು,ಇದೇ ಬೆಂಬಲವನ್ನು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಸಬೇಕು ಎಂದು ಮತದಾರರಲ್ಲಿ  ಮನವಿ ಮಾಡಿಕೊಂಡರು”. ನಾನು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡ್ತೀನಿ ನಾನು ಎಲ್ಲೂ ಹೋಗಲ್ಲ ಅಂತಾ ಹೇಳುವ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಜ್ಜುಗೊಳ್ಳುವ  ಮುನ್ಸೂಚನೆಯನ್ನು ಸಹ ನೀಡಿದರು ಡಾ  ಸಿದ್ದರಾಮಯ್ಯ.

ಇನ್ನು  ಇದೇ ಸಂದರ್ಭದಲ್ಲಿ  ಅವರು ವಿಶೇಷವಾಗಿ ರೈತ ಸಂಘದ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದವನ್ನು ಅರ್ಪಿಸಿದರು. ನನ್ನ ಸೋಲು ಆಕಸ್ಮಿಕ, ಅಧಿಕಾರ, ಸಂಪತ್ತನ್ನು  ಉಪಯೋಗಿಸಿ ಗೆದ್ದಿದ್ದಾರೆ, ಬೂತ್ ಮಟ್ಟದಲ್ಲಿ ಹಣ ಹಂಚಿದ್ದಾರೆ ಅದನ್ನು ವೈರಲ್ ಮಾಡಿ ಅಂತಾ ಹೇಳಿದ್ದೆ, ಅದ್ರೆ ನಮ್ಮಲ್ಲಿ ಕಾರ್ಯಕರ್ತರ ಕೊರತೆ ಇರೋದ್ರಿಂದ ಸಾಧ್ಯವಾಗಿಲ್ಲ.

ಕಾಂಗ್ರೆಸ್ ಪಕ್ಷದ ಅತೃಪ್ತರು ನಮಗೆ ಮತ ನೀಡಿಲ್ಲ, ಅವರು ನೋಟಾ ಹಾಗೂ ಪಕ್ಷೇತರ ಅಭ್ಯರ್ಥಿಗೆ ೭೭ ಸಾವಿರ ಮತ ನೀಡಿದ್ದಾರೆ ಇನ್ನುಳಿದವರು ತಟಸ್ಥವಾಗಿ ಉಳಿದರು. ಮಂಡ್ಯದಲ್ಲಿ ಹೆಚ್ಚು ಮತ ಪಡೆಯೋ ಮೂಲಕ ಬಿಜೆಪಿ ಬಲಿಷ್ಠವಾಗಿದೆ. ಅವರು  ಬೇಳೂರು ಗೋಪಾಲಕೃಷ್ಣ ನೀಡದ ಹೇಳಿಕೆಯ ಕುರಿತು ಮಾತನಾಡಿರು. ನನ್ನ ಚುನಾವಣೆ ಮೇಲೆ ಪ್ರಭಾವ ಬೀರಿದೆ ಬೇಳೂರು ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಕಳೆದ ವಿಧಾನ ಸಭಾ ಚುನಾವಣೆಗೆ ಕ್ಯಾಂಡಿಡೇಟ್ ಆಗ್ತಿಯಾ? ಮಾಜಿ ಸಿಎಂ ಕೇಳಿದ್ರು ಮಾಜಿ ಸಿಎಂ ಸಿದ್ದರಾಮಯ್ಯ ಅಭ್ಯರ್ಥಿ ಆಗುವ ಕುರಿತು ಚರ್ಚೆ ಮಾಡಿದ್ರು ನಾನು ಆ ಸಂಧರ್ಭ ಚುನಾವಣೆಗೆ ಸ್ಪರ್ಧಿಸಲ್ಲ ಅಂತಾ ಹೇಳಿದ್ದೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರಾಮಯ್ಯ ತಿಳಿಸಿದರು.

ಬಿಜೆಪಿ ಮುಖಂಡ ನಂಜುಂಡೇಗೌಡ ಚುಂಚನಗಿರಿ ಮಠವು ಜೆಡಿಎಸ್ ಪರವಾಗಿದೆ ಎಂಬ ಹೇಳಿಕೆಗೆ ಕುರಿತು  ಸ್ವಷ್ಟನೆಯನ್ನು ನೀಡಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಮಠಗಳನ್ನು ರಾಜಕೀಯಕ್ಕೆ ಎಳೆದು ತರಬಾರದು ಎಂಬ ವಿಷಾದವನ್ನು ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/11/BP9-NEWS-28.jpeghttp://bp9news.com/wp-content/uploads/2018/11/BP9-NEWS-28-150x150.jpegBP9 Bureauಪ್ರಮುಖಮಂಡ್ಯರಾಜಕೀಯಮಂಡ್ಯ:  ಜಿಲ್ಲೆಯಲ್ಲಿ ನಡೆದ ಲೋಕಸಭಾ ಕ್ಷೇತ್ರದ ಪರಾಜಿತ ಡಾ.ಸಿದ್ದರಾಮಯ್ಯ ಸುದ್ದಿ ಗೊಷ್ಠಿಯನ್ನು ನಡೆಸಿದರು. ಉಪಚುನಾವಣೆಯಲ್ಲಿ ತಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು ಬಿಜೆಪಿ ಅಭ್ಯರ್ಥಿ. ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತ “ ನಾನು ಎಲ್ಲೂ ಹೋಗಲ್ಲ,ಮಂಡ್ಯದಲ್ಲಿದ್ದು ಪಕ್ಷ ಕಟ್ತೀನಿ ಚುನಾವಣೇಲಿ ಅಭೂತಪೂರ್ವ ಬೆಂಬಲವನ್ನು ಜನ ನೀಡಿದ್ದು,ಇದೇ ಬೆಂಬಲವನ್ನು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಸಬೇಕು ಎಂದು ಮತದಾರರಲ್ಲಿ  ಮನವಿ ಮಾಡಿಕೊಂಡರು”. ನಾನು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡ್ತೀನಿ ನಾನು ಎಲ್ಲೂ...Kannada News Portal