ಮಂಡ್ಯ :  ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಅವಮಾನವೀಯ ಘಟನೆ ನಡೆದಿದೆ. ಮದ್ದೂರಿನ ಗೆಜ್ಜಲಗೆರೆ ಗ್ರಾಮದ ನಾಗೇಶ್ ಮತ್ತು‌ ಆತನ ಸಹಚರಾದ ಪಾಂಡು , ನಾಗೇಶ್, ಕರಿಯಪ್ಪರಿಂದ ಅವಮಾನವೀಯವಾಗಿ ಮಹಿಳೆಯನ್ನು ಕಾರಿನಲ್ಲಿ ಏಳದೋಯಿದ್ದಾರೆ. ಊರಿನವರ ಮುಂದೆಯೇ‌ ಸಾಲದ ಹಣಕ್ಕೆ ದಲಿತ ಮಹಿಳೆ ಚಿನ್ನತಂಬಿಯನ್ನು ಕಾರಿನಲ್ಲಿ ಹೊತ್ತೊಯ್ದ  ವ್ಯಕ್ತಿಗಳು ಎಂದು ತಿಳಿದು ಬಂದಿದೆ.

ಗೆಜ್ಜಲಗೆರೆ ಗ್ರಾಮದ ನಾಗೇಶ್  ಅವನ  ಬಳಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪತಿ 50 ಸಾವಿರ ರೂಗಳ ಸಾಲ‌ ಪಡೆದಿದ್ದರು. ತಾವು ಪಡೆದುಕೊಂಡ ಸಾಲವನ್ನು ತೀರಿಸಲಾಗದ ಹಿನ್ನಲೆಯಲ್ಲಿ ಗಂಡ ಹೆಂಡತಿಯನ್ನು  ತಮ್ಮೂರಲ್ಲಿ ೪ ವರ್ಷದಿಂದ ಜೀತದಾಳಾಗಿ ಇಟ್ಟು  ಅವಮಾನವೀಯವಾಗಿ ಅವರನ್ನು ನಡೆಸುಕೊಂಡಿರುತ್ತಿದ್ದ ಗೆಜ್ಜಲಗೆರೆಯ ನಾಗೇಶ್.

ಕೆಲಸದ ವೇಳೆ ಹಣ ಕೊಟ್ಟ ನಾಗೇಶ್ ಇಬ್ಬರಿಗು ಕಿರುಕುಳವನ್ನು ನೀಡುತ್ತಿದ್ದನು ಇದರಿಂದಾಗ ಮನನೊಂದು ಗಂಡ ಹೆಂಡತಿ ಯಾರಿಗೂ ತಿಳಿಯದಂತೆ  ಬೆಕ್ಕಳಲೆ ಗ್ರಾಮದಲ್ಲಿ  ವಾಸವಿದ್ದರು. ಇದಾದ ಕೆಲ ದಿನಗಳಲ್ಲಿ ಚಿನ್ನತಂಬಿಯ ಪತಿ ಮರಣಹೊಂದಿದನು. ಇದನ್ನು ತಿಳಿದ ನಾಗೇಶ್ ಬೆಕ್ಕಳಲೆ ಗ್ರಾಮದಲ್ಲಿ ಚಿನ್ನತಂಬಿ ವಾಸವಿರದನ್ನು ತಿಳಿದು ನಾಗೇಶ್ ತನ್ನ ಕಾರಿನಲ್ಲಿ ನಾಲ್ಕೈದು ಜನರೊಂದಿಗೆ ಗ್ರಾಮಕ್ಕೆ ಬಂದು ಮಹಿಳೆಯನ್ನು ಬಲವಂತವಾಗಿ ಹೊತ್ತೋಯ್ದ  ದೌರ್ಜನ್ಯವನ್ನು ಏಸಗಿದ್ದಾನೆ. ಗ್ರಾಮದಿಂದ ಚಿನ್ನತಂಬಿ ಎಂಬ ಮಹಿಳೆಯನ್ನು  ಬಲವಂತವಾಗಿ ಎಳೆದೊಯ್ಯುತ್ತಿದ್ರು‌  ಮುಖರಂತೆ ನೋಡುತ್ತಿದ್ದರು ಈ ಗ್ರಾಮದ ಗ್ರಾಮಸ್ಥರು. ಸದ್ಯ ಈ ಕಿಡ್ನ್ಯಾಪ್ ಪಕ್ರರಣ ಮದ್ದೂರಿನ ಕೊಪ್ಪ ಪೊಲೀಸ್ ಠಾಣಾಯಲ್ಲಿ ದೂರುದಾಖಲಾಗಿದೆ.
Please follow and like us:
0
http://bp9news.com/wp-content/uploads/2018/09/woman-kidnap-1.pnghttp://bp9news.com/wp-content/uploads/2018/09/woman-kidnap-1-150x150.pngBP9 Bureauಪ್ರಮುಖಮಂಡ್ಯಮಂಡ್ಯ :  ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಅವಮಾನವೀಯ ಘಟನೆ ನಡೆದಿದೆ. ಮದ್ದೂರಿನ ಗೆಜ್ಜಲಗೆರೆ ಗ್ರಾಮದ ನಾಗೇಶ್ ಮತ್ತು‌ ಆತನ ಸಹಚರಾದ ಪಾಂಡು , ನಾಗೇಶ್, ಕರಿಯಪ್ಪರಿಂದ ಅವಮಾನವೀಯವಾಗಿ ಮಹಿಳೆಯನ್ನು ಕಾರಿನಲ್ಲಿ ಏಳದೋಯಿದ್ದಾರೆ. ಊರಿನವರ ಮುಂದೆಯೇ‌ ಸಾಲದ ಹಣಕ್ಕೆ ದಲಿತ ಮಹಿಳೆ ಚಿನ್ನತಂಬಿಯನ್ನು ಕಾರಿನಲ್ಲಿ ಹೊತ್ತೊಯ್ದ  ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಗೆಜ್ಜಲಗೆರೆ ಗ್ರಾಮದ ನಾಗೇಶ್  ಅವನ  ಬಳಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪತಿ 50 ಸಾವಿರ ರೂಗಳ ಸಾಲ‌ ಪಡೆದಿದ್ದರು....Kannada News Portal