ಮಂಗಳೂರು :  65 ಲೋಡ್ ಮರಳು ಸಹಿತ ಜೆಸಿಬಿ ವಶಪಡಿಸಿಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ತಣ್ಣೀರುಬಾವಿ ಸಮೀಪದ ನಾಯರ್‌ಕುದ್ರು ಎಂಬಲ್ಲಿ ಪ್ರತ್ಯೇಕ 2 ಕಡೆಗಳಲ್ಲಿ ದಾಸ್ತಾನಿರಿಸಿದ 65 ಲೋಡ್ ಮರಳು ಸಹಿತ 2 ಜೆಸಿಬಿಯನ್ನು ಪಣಂಬೂರು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. 4.5 ಲಕ್ಷ ರೂ. ಮೌಲ್ಯದ ಮರಳು ಮತ್ತು ಜೆಸಿಬಿಯ ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮರಳುಗಾರಿಕೆ, ಮರಳು ಸಾಗಾಟ ನಿಷೇಧವಿದ್ದರೂ ಕೂಡಾ ತಣ್ಣೀರುಬಾವಿ ಸುತ್ತಮುತ್ತಲಿನ ಖಾಸಗಿ ಸ್ಥಳದಲ್ಲಿ ಮರಳು ದಾಸ್ತಾನಿರಿಸಿ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಸ್ಥಳೀಯರಾದ ಎಲಿಯಾಸ್ ಡಿಲಿಮಾ, ಶ್ರೀಕಾಂತ್ ಮತ್ತು ಜುನೈದ್ ಹಾಗೂ ವಿಲ್ಫಿ ಕುವೆಲ್ಲೋ, ಡಾರ್ವಿನ್ ಕುವೆಲ್ಲೋ ಮತ್ತು ನವೀನ್ ಎಂಬವರು ಪ್ರತ್ಯೇಕವಾಗಿ ಎರಡು ಕಡೆ ಅಕ್ರಮ ಮರಳು ದಾಸ್ತಾನಿಟ್ಟಿದ್ದರು. ಮುಂದಿನ ಸೂಕ್ತ ಕ್ರಮಕ್ಕಾಗಿ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ-ನಿರ್ದೇಶಕರ ಸುಪರ್ದಿಗೆ ಒಪ್ಪಿಸಲಾಗಿದೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-23-at-12.47.59-PM.jpeghttp://bp9news.com/wp-content/uploads/2018/09/WhatsApp-Image-2018-09-23-at-12.47.59-PM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು :  65 ಲೋಡ್ ಮರಳು ಸಹಿತ ಜೆಸಿಬಿ ವಶಪಡಿಸಿಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ತಣ್ಣೀರುಬಾವಿ ಸಮೀಪದ ನಾಯರ್‌ಕುದ್ರು ಎಂಬಲ್ಲಿ ಪ್ರತ್ಯೇಕ 2 ಕಡೆಗಳಲ್ಲಿ ದಾಸ್ತಾನಿರಿಸಿದ 65 ಲೋಡ್ ಮರಳು ಸಹಿತ 2 ಜೆಸಿಬಿಯನ್ನು ಪಣಂಬೂರು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. 4.5 ಲಕ್ಷ ರೂ. ಮೌಲ್ಯದ ಮರಳು ಮತ್ತು ಜೆಸಿಬಿಯ ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. var domain = (window.location != window.parent.location)? document.referrer...Kannada News Portal