ಮಂಗಳೂರು : ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ವಧು ನಗದು ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ ಹಾರಾಡಿಯಲ್ಲಿ ನಡೆದಿದೆ. ಹಾರಾಡಿ ಜಾಫರ್ ಕಾಂಪೌಂಡ್ ಮಹಮ್ಮದ್ ಫಯಾಝ್‌ರವರ ಪತ್ನಿ ಅಫ್ರೀನಾ ನಾಪತ್ತೆಯಾದವರು. ಸುಳ್ಯ ತಾಲೂಕಿನ ಕಸಬಾ ಬೀರಮಂಗಲದ ಅಫ್ರೀನಾರವರೊಂದಿಗೆ ಆರು ತಿಂಗಳ ಹಿಂದಷ್ಟೇ ಮಹಮ್ಮದ್ ಫಯಾಝ್‌ರ ವಿವಾಹವಾಗಿತ್ತು.

ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಮನೆಯಲ್ಲಿ ನಡೆದ ಕ್ಷುಲ್ಲಕ ಕಾರಣಗಳಿಗೆ ಮುನಿಸಿಕೊಂಡು ಆಕೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಒಂಟಿಯಾಗಿಯೇ ಇರುತ್ತಿದ್ದರು. ಸೆಪ್ಟೆಂಬರ್ 18ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು ರಾತ್ರಿ ಸುಮಾರು 11.45ರ ವೇಳೆಗೆ ಮಹಮ್ಮದ್ ಫಯಾಝ್ ಅವರಿಗೆ ಎಚ್ಚರವಾಗಿ ನೋಡಿದಾಗ ಅಫ್ರೀನಾ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯ ಕೊಠಡಿಗಳು, ಸುತ್ತಲೂ ಹುಡುಕಾಡಿದರೂ ಪತ್ತೆಯಾಗಲಿಲ್ಲ.

ತವರು ಮನೆಗೂ ವಿಚಾರಿಸಲಾಗಿದ್ದು ಅಫ್ರೀನಾ ಸುಳಿವು ದೊರೆಯದಿರುವ ಹಿನ್ನೆಲೆಯಲ್ಲಿ ಪತಿ ಮಹಮ್ಮದ್ ಫಯಾಝ್‌ರವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ ಮನೆಯಲ್ಲಿದ್ದ 13 ಸಾವಿರ ನಗದು ಹಾಗೂ 12 ಪವನ್ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-20-at-12.37.35-PM.jpeghttp://bp9news.com/wp-content/uploads/2018/09/WhatsApp-Image-2018-09-20-at-12.37.35-PM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ವಧು ನಗದು ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ ಹಾರಾಡಿಯಲ್ಲಿ ನಡೆದಿದೆ. ಹಾರಾಡಿ ಜಾಫರ್ ಕಾಂಪೌಂಡ್ ಮಹಮ್ಮದ್ ಫಯಾಝ್‌ರವರ ಪತ್ನಿ ಅಫ್ರೀನಾ ನಾಪತ್ತೆಯಾದವರು. ಸುಳ್ಯ ತಾಲೂಕಿನ ಕಸಬಾ ಬೀರಮಂಗಲದ ಅಫ್ರೀನಾರವರೊಂದಿಗೆ ಆರು ತಿಂಗಳ ಹಿಂದಷ್ಟೇ ಮಹಮ್ಮದ್ ಫಯಾಝ್‌ರ ವಿವಾಹವಾಗಿತ್ತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal