ಉಡುಪಿ : ಕರಾವಳಿಯ ಕಾರಣಿಕದ ದೈವ ಕೊರಗಜ್ಜನ ಪವಾಡದ ಸುದ್ದಿಯೊಂದು ಭಾರೀ ಚರ್ಚೆಯಾಗ್ತಿದೆ.ಉಡುಪಿ ಜಿಲ್ಲೆಯ ಕಟಪಾಡಿಯ  ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತೆ. ಈ ಕ್ಷೇತ್ರದ ಕಾಣಿಕೆ ಹುಂಡಿಯ ಹಣವನ್ನು  ಕದ್ದ ಅನ್ಯಕೋಮಿನ ಯುವಕರ ಗುಂಪು ದೈವದ ಲೀಲೆ ಅರಿಯದೆ ಅಸಂಬದ್ದ ವರ್ತನೆ ತೋರಿತ್ತು.

ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿದ್ದರು. ದೈವ ಏನು ಮಾಡುತ್ತೆ ಅಂತಾ ನೋಡೊಣ ಅನ್ನುತ್ತಲೆ ಈ ವರ್ತನೆಗಳನ್ನ ಯುವಕರ ತಂಡ ಮಾಡಿತ್ತು.

ಆದರೆ ದೈವದ ಲೀಲೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಅನಾಗರಿಕ ವರ್ತನೆ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನೊಬ್ಬನ ದೇಹ ಸ್ಥಿತಿಯಲ್ಲಿ ಗಂಭೀರ ಪರಿಣಾಮ ಗಳು ಕಂಡು ಬಂದಿತ್ತು.

ಆತನ ಸೊಂಟದ ಕೆಳಗೆ ಅಂದರೆ ಕಾಲಿನ ಭಾಗ ಬಲ ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಯಾವುದೇ  ಪ್ರಯೋಜನವಾಗಿಲ್ಲವಂತೆ .

ಅನ್ಯ ಕೋಮಿನವರಾದರೂ ಹಿಂದೂಗಳೊಂದಿಗೆ ಉತ್ತಮ ಒಡನಾಟವಿದ್ದ ಸಂತ್ರಸ್ಥ ಕುಟುಂಬ ಜ್ಯೋತಿಷಿಯ ಮೊರೆ ಹೋಗುತ್ತಾರೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಪ್ರಸ್ತಾಪವಾಗುತ್ತೆ.

ಅದರಂತೆ   ಕೊರಗಜ್ಜ ಸ್ಥಾನಕ್ಕೆ ಬಂದು ನೊಂದ ಕುಟುಂಬ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿರುತ್ತೆ.ಕೊನೆಗೆ‌ ಕುಟುಂಬದ  ಕೋರಿಕೆಯಂತೆ ಕೊರಗಜ್ಜ ದರ್ಶನ ಏರ್ಪಾಟು‌ ಮಾಡಲಾಗುತ್ತೆ.

ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೊರಿದ್ದಾನೆ.  ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ.ಇದೀಗ ದೈವದ ನೆಮೋತ್ಸವದ ಈ ವಿಡಿಯೋ  ಕರಾವಳಿಯಾದ್ಯಂತ ಕುತೂಹಲ ಕೆರಳಿಸಿದ್ದು.,ದರ್ಶನ ನಡೆದ ದಿನದ ವಿಡಿಯೋ ಭಾರೀ ವೈರಲ್ ಆಗಿದೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-27-at-1.53.58-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-27-at-1.53.58-PM-150x150.jpegBP9 Bureauಉಡುಪಿಪ್ರಮುಖಮಂಗಳೂರುಉಡುಪಿ : ಕರಾವಳಿಯ ಕಾರಣಿಕದ ದೈವ ಕೊರಗಜ್ಜನ ಪವಾಡದ ಸುದ್ದಿಯೊಂದು ಭಾರೀ ಚರ್ಚೆಯಾಗ್ತಿದೆ.ಉಡುಪಿ ಜಿಲ್ಲೆಯ ಕಟಪಾಡಿಯ  ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತೆ. ಈ ಕ್ಷೇತ್ರದ ಕಾಣಿಕೆ ಹುಂಡಿಯ ಹಣವನ್ನು  ಕದ್ದ ಅನ್ಯಕೋಮಿನ ಯುವಕರ ಗುಂಪು ದೈವದ ಲೀಲೆ ಅರಿಯದೆ ಅಸಂಬದ್ದ ವರ್ತನೆ ತೋರಿತ್ತು. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿದ್ದರು. ದೈವ ಏನು...Kannada News Portal