ಮಂಗಳೂರು: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರಿನಲ್ಲಿ  ನಡೆದಿದೆ. ಪಾಲ್ತಾಡಿಯ ಇರ್ಷಾದ್ ಎಂಬುವವರ ಫೋರ್ಡ್ ಐಕಾನ್ ಕಾರು ಇದಾಗಿದ್ದು ಕಾರು ಸಂಪೂರ್ಣ ಭಸ್ಮಗೊಂಡಿದೆ.

ಪಾಲ್ತಾಡಿಯಿಂದ ಪುತ್ತೂರಿಗೆ ಕಾರಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಂಡಿದೆ. ಆದರೆ ಇದು ಚಾಲಕ   ಇರ್ಷಾದ್​​ಗೆ ತಿಳಿಯದಾಗಿದ್ದು, ಬೆಂಕಿ ಕಂಡ ಆಂಬುಲೆನ್ಸ್ ಚಾಲಕ  ಇರ್ಷಾದ್ ಗೆ ಸೂಚನೆ ನೀಡಿದ್ದಾನೆ. ಆಗ  ತಕ್ಷಣ ಕಾರನ್ನ ಚಾಲಕ ನಿಲ್ಲಿಸಿದ್ದಾನೆ.

ನಂತರ ಇದ್ದಕ್ಕಿದ್ದಂತೆ ಕಾರನ್ನ ಬೆಂಕಿ ಆವರಿಸಿದ್ದು,ಕಾರು ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರೂ ಕಾರು ಸುಟ್ಟು ಹೋಗಿದೆ. ಈ ಸಂಬಂಧ ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-09-at-12.26.17-PM-1024x768.jpeghttp://bp9news.com/wp-content/uploads/2018/07/WhatsApp-Image-2018-07-09-at-12.26.17-PM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರಿನಲ್ಲಿ  ನಡೆದಿದೆ. ಪಾಲ್ತಾಡಿಯ ಇರ್ಷಾದ್ ಎಂಬುವವರ ಫೋರ್ಡ್ ಐಕಾನ್ ಕಾರು ಇದಾಗಿದ್ದು ಕಾರು ಸಂಪೂರ್ಣ ಭಸ್ಮಗೊಂಡಿದೆ. ಪಾಲ್ತಾಡಿಯಿಂದ ಪುತ್ತೂರಿಗೆ ಕಾರಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಂಡಿದೆ. ಆದರೆ ಇದು ಚಾಲಕ   ಇರ್ಷಾದ್​​ಗೆ ತಿಳಿಯದಾಗಿದ್ದು, ಬೆಂಕಿ ಕಂಡ ಆಂಬುಲೆನ್ಸ್ ಚಾಲಕ  ಇರ್ಷಾದ್ ಗೆ ಸೂಚನೆ ನೀಡಿದ್ದಾನೆ. ಆಗ  ತಕ್ಷಣ ಕಾರನ್ನ ಚಾಲಕ...Kannada News Portal