ಮಂಗಳೂರು : ತುಳುನಾಡಿನಲ್ಲಿ ಆಟಿ(ಆಷಾಡ) ಮಾಸ ಬಂದರೆ ಸಾಕು ಅಲ್ಲಲ್ಲಿ ಆಟಿ ಕೂಟ ಆಯೋಜನೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ಹಾಗೂ ಕೊಟ್ಟಾರಿ ಯುವ ವೇದಿಕೆ ವತಿಯಿಂದ ಮಂಗಳೂರಿನ ಪಡೀಲ್ ನಲ್ಲಿರುವ ಕೊಟ್ಟಾರಿ ಸಭಾಭವನದಲ್ಲಿ
ಅಯೋಜಿಸಲಾದ ಅಟಿಡ್ ಒಂಜಿ ದಿನ , ಕಾರ್ಯಕ್ರಮ ವಿಶಿಷ್ಟ ವಾಗಿ ನಡೆಯಿತು.

ಅಟಿ ಕೂಟದ ಸಭಾಕಾರ್ಯಕ್ರಮ

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲು ನೇರವೆರಿಸಿದರು. ಸಂಸದ ನಳೀನ್ ಕುಮಾರ್ ಹಾಗೂ ಸ್ಥಳೀಯ ಕಾರ್ಪೊರೇಟರ್ ಪ್ರಕಾಶ್ ,ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ ಹಾಗೂ ಸಂಘದ ಗೌರವಾಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿಯವರನ್ನು ಅಭಿನಂದಿಸಲಾಯಿತು .ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷರಾದ ಜೆ.ಬಾಲಕೃಷ್ಣ ಕೊಟ್ಟಾರಿ,ತಾರನಾಥ್ ಕೊಟ್ಟಾರಿ, ಪುರುಷೋತ್ತಮ ಕೊಟ್ಟಾರಿ, ವಾಸುದೇವಕೊಟ್ಟಾರಿ,ವೀಣಾ ಎಸ್ ಕೊಟ್ಟಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಮಹಾಬಲ ಕೊಟ್ಟಾರಿ, ಶರಣ್ ಪಂಪುವೆಲ್, ರಾಜೇಶ್ ಕೊಟ್ಟಾರಿ ಮೂಡುಶೆಡ್ಯೆ ,ಜಿತೇಂದ್ರ ಕೊಟ್ಟಾರಿ, ಯುವ ವೇದಿಕೆ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಶುಕರಾಜ್ ಕೊಟ್ಟಾರಿ, ರಾಕೇಶ್ ಕೊಟ್ಟಾರಿ,
ಹಾಗೂ ಇನ್ನಿತರರು ಉಪಸ್ಥಿತರಿದ್ದರು ಮತ್ತು ‌ಕೊಟ್ಟಾರಿ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅಟಿದೊಂಜಿ ದಿನ ಕೂಟದಲ್ಲಿ ಭಾಗವಹಿಸಿದ್ದರು..


ಕೊಟ್ಟಾರಿ ಸಭಾಭವನದಲ್ಲಿ ಆಯೋಜಿಸಲಾದ ಆಟಿಕೂಟದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದದ್ದು ಆಟಿ ತಿಂಗಳಲ್ಲಿ ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ತಿಂಡಿ ತಿನಿಸುಗಳು. ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ತಿಂಡಿ ತಿನಿಸುಗಳು ಈಗಿನ ಕಾಲದಲ್ಲಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ನಡೆಯುವ ಆಟಿಕೂಟದಲ್ಲಿ ಇದನ್ನು ನೆನೆಯುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಅಲ್ಲದೆ ಈ ವಿಶೇಷ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಗೌರವ ಅಭಿವಂದನೆ
ಮತ್ತು ಸಾಂಸ್ಕೃತಿಕ ವೈಭವವನ್ನು ನಡೆಸಲಾಯಿತು.

ಕೊಟ್ಟಾರಿ ಸಮಾಜದ ಮಹಿಳೆಯರು ತಯಾರಿಸಿದ ಸುಮಾರು 50 ಕ್ಕೂ ಅಧಿಕ ವಿವಿಧ ಬಗೆಯ ತಿಂಡಿಗಳಾದ ಸಾರಣೆ ಅಡ್ಯ ಪಾಯಸ,ತಜಂಕ್ ಪೆಲತ್ತಹರಿ,ಕಡ್ಯೆಬಲ್ಯರ್ ಶುಕ್ಕ, ಉಪ್ಪಡ್ ಪಚ್ಚಿರ್ , ಕಡಲೆ ಪದಂಗಿ ಗುರಿಯಪ್ಪ, ಪೆಲಕಾಯಿದ ಗಟ್ಟಿ, ಗಾರಿಗೆ, ಪತ್ರೊಡೆ, ಗೆಂಡದ ಅಡ್ಯೆ, ತೆಕ್ಕರೆದ ಅಡ್ಯೆ, ಮಂಜಲ್ ಇರೆದ ಗಟ್ಟಿ, ಹಾಲುಬಾಯಿ, ಮೂಡೆಗಸಿ ಹೀಗೆ ವಿವಿಧ ರೀತಿಯ ತಿಂಡಿಗಳು ಮೆಚ್ಚುಗೆಗೆ ಪಾತ್ರವಾಯಿತು.

ಅನುಶ್ ಕೊಟ್ಟಾರಿ, ಬಿಪಿ9 ನ್ಯೂಸ್ ಬೆಂಗಳೂರು

Please follow and like us:
0
http://bp9news.com/wp-content/uploads/2018/08/-ಕೂಟ-BP9-NEWS1-e1534136560985.jpeghttp://bp9news.com/wp-content/uploads/2018/08/-ಕೂಟ-BP9-NEWS1-e1534136560985-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ತುಳುನಾಡಿನಲ್ಲಿ ಆಟಿ(ಆಷಾಡ) ಮಾಸ ಬಂದರೆ ಸಾಕು ಅಲ್ಲಲ್ಲಿ ಆಟಿ ಕೂಟ ಆಯೋಜನೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ಹಾಗೂ ಕೊಟ್ಟಾರಿ ಯುವ ವೇದಿಕೆ ವತಿಯಿಂದ ಮಂಗಳೂರಿನ ಪಡೀಲ್ ನಲ್ಲಿರುವ ಕೊಟ್ಟಾರಿ ಸಭಾಭವನದಲ್ಲಿ ಅಯೋಜಿಸಲಾದ ಅಟಿಡ್ ಒಂಜಿ ದಿನ , ಕಾರ್ಯಕ್ರಮ ವಿಶಿಷ್ಟ ವಾಗಿ ನಡೆಯಿತು. ಅಟಿ ಕೂಟದ ಸಭಾಕಾರ್ಯಕ್ರಮ var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal