ಮಂಗಳೂರು:  ಮಂಗಳೂರು-ಬೆಂಗಳೂರು ನಡುವೆ ಪ್ರಮುಖ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಮಳೆಯಿಂದಾಗಿ ಮರ, ಮಣ್ಣು ರಸ್ತೆಗೆ ಬಿದ್ದು ಮಾರ್ಗ ಬಂದ್ ಆಗಿದೆ. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಹಲವಾರು ಬಸ್, ಕಾರು ಇತ್ಯಾದಿ ವಾಹನಗಳು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪ್ರಯಾಣಿಕರು ಸರಿಯಾಗಿ ನೀರು, ಆಹಾರವಿಲ್ಲದೇ ನಿನ್ನೆ ಸಂಜೆಯಿಂದ ಕಾಡಿನ ಮಧ್ಯೆ ಪರದಾಡುತ್ತಿದ್ದಾರೆ.   ಈ ಭಾಗದಲ್ಲಿ ಮೊಬೈಲ್ ನೆಟವರ್ಕ್​ ಕೂಡಾ ಸರಿಯಾಗಿ ಸಿಗುವುದಿಲ್ಲ. ಅಂಗಡಿಗಳು, ಮನೆಗಳೂ ಕಡಿಮೆ.ಹೀಗಾಗಿ ಪ್ರಯಾಣಿಕರ ಪರದಾಟ ಹೇಳತೀರದಂತಾಗಿದೆ. ರಸ್ತೆ ತೆರವುಗೊಳಿಸುವ ಕಾರ್ಯ ಪೂರ್ತಿಯಾಗದೇ ಇರುವುದರಿಂದ ಪ್ರಯಾಣಿಕರು ವಾಹನದಲ್ಲೇ ಸಮಯ ಕಳೆಯುವಂತಾಗಿದೆ.

ಹೀಗಾಗಿ ಪ್ರಯಾಣಿಕರ ನೆರವಿಗೆ ಸ್ಥಳೀಯರು ಧಾವಿಸಿದ್ದು, ಹಾಲು, ಬ್ರೆಡ್, ಇತ್ಯಾದಿ ಸರಬರಾಜು ಮಾಡುತ್ತಿದ್ದಾರೆ. ಶಿರಾಡಿ ಘಾಟ್ ನಲ್ಲಿ ರಸ್ತೆ ರಿಪೇರಿ ನಡೆಯುತ್ತಿರುವುದರಿಂದ ಮಂಗಳೂರು ಕಡೆಯಿಂದ ಬೆಂಗಳೂರಿಗೆ ಸಾಗುವ ಎಲ್ಲಾ ವಾಹನಗಳೂ ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾಗುತ್ತವೆ. ಇನ್ನು ಧರ್ಮಸ್ಥಳದಿಂದ ಬೆಂಗಳೂರು, ಹಾಸನ ಕಡೆಗೆ ಹೋಗುವವರು ಪುತ್ತೂರು, ಸುಳ್ಯ, ಮಡಿಕೇರಿ ದಾರಿ ಮೂಲಕ ಹೋಗಬೇಕಾಗಿದೆ. ಇನ್ನು ಕಾಮಗಾರಿ ಹಂತದಲ್ಲಿರುವ ಶಿರಾಡಿ ಘಾಟ್ ರಸ್ತೆ ಎರಡು ವಾರಗಳಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

 

 

 

Please follow and like us:
0
http://bp9news.com/wp-content/uploads/2018/06/collage-2-14.jpghttp://bp9news.com/wp-content/uploads/2018/06/collage-2-14-150x150.jpgBP9 Bureauಪ್ರಮುಖಮಂಗಳೂರುಮಂಗಳೂರು:  ಮಂಗಳೂರು-ಬೆಂಗಳೂರು ನಡುವೆ ಪ್ರಮುಖ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಮಳೆಯಿಂದಾಗಿ ಮರ, ಮಣ್ಣು ರಸ್ತೆಗೆ ಬಿದ್ದು ಮಾರ್ಗ ಬಂದ್ ಆಗಿದೆ. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಲವಾರು ಬಸ್, ಕಾರು ಇತ್ಯಾದಿ ವಾಹನಗಳು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪ್ರಯಾಣಿಕರು ಸರಿಯಾಗಿ ನೀರು, ಆಹಾರವಿಲ್ಲದೇ ನಿನ್ನೆ ಸಂಜೆಯಿಂದ ಕಾಡಿನ ಮಧ್ಯೆ ಪರದಾಡುತ್ತಿದ್ದಾರೆ.   ಈ ಭಾಗದಲ್ಲಿ ಮೊಬೈಲ್ ನೆಟವರ್ಕ್​ ಕೂಡಾ ಸರಿಯಾಗಿ ಸಿಗುವುದಿಲ್ಲ. ಅಂಗಡಿಗಳು,...Kannada News Portal