ಮಂಗಳೂರು
:ಬೆಳಕಿನ ಹಬ್ಬ ದೀಪಾವಳಿಯನ್ನು ಕರಾವಳಿಯಲ್ಲಿ ಸಂಭ್ರಮ- ಸಡಗರಗಳಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಜಿಲ್ಲೆಯ,  ಹೊರನಾಡಿನ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಸಂಭ್ರಮದ ವಾತಾವರಣ ವನ್ನು ಕಾಲೇಜುಗಳು ಕಲ್ಪಿಸಿವೆ.

ಕರಾವಳಿ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿ :

ಬೆಳಕಿನ ಹಬ್ಬ ದೀಪಾವಳಿ ಕರಾವಳಿಯಲ್ಲಿ ಸಂಭ್ರಮವೋ ಸಂಭ್ರಮ…. ಮನೆಗಳಲ್ಲಿ ಹಣತೆ ಬೆಳಗಿ ಹಬ್ಬವನ್ನು ಸಂಭ್ರಮಿಸಿದ್ದಾರೆ… ಆದರೆ, ಜಿಲ್ಲೆಯ, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ದೀಪಾವಳಿಯನ್ನು ಸಂಭ್ರಮಿಸುವ ಅವಕಾಶವನ್ನು ಕೆಲವು ಕಾಲೇಜುಗಳು ತೆರೆದಿಟ್ಟಿವೆ.

ಪ್ರತಿವರ್ಷದಂತೆ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಗಾಗಿ ದೀಪಾವಳಿಯ ವಿಶೇಷವಾದ ಸಂಭ್ರಮವನ್ನು ಸಂಭ್ರಮದ ಆಚರಣೆಯನ್ನು ಆಯೋಜಿಸಿದೆ.

ಸುಡುಮದ್ದು ಪಟಾಕಿಗಳ ಅಬ್ಬರ, ಸಿಹಿತಿಂಡಿಯ ವಿತರಣೆ…. ಇದರ ಜೊತೆಗೆ ಸಾಂಸ್ಕೃತಿಕ ಪ್ರತಿಭೆಯ ಅನಾವರಣ.

ವಿದ್ಯಾರ್ಥಿಗಳಂತೂ ದೀಪಾವಳಿಯ ಸಂಭ್ರಮದಲ್ಲಿ ಮಿಂದೆದ್ದರು.. ಸಡಗರವನ್ನು ಖುಷಿಪಟ್ಟರು.

ಪುಟ್ಟ ಹಣತೆಯ ಮೂಲಕ ಜಗವನ್ನು ಬೆಳಗುವುದು.. ಮನೆ ಮನಗಳನ್ನು ಬೆಳಗುವ ದೀಪಾವಳಿ ನೀಡಿದ ಸಂದೇಶ.  ಈ ಹಬ್ಬವನ್ನು ಎಲ್ಲರನ್ನೂ ಸೇರಿಸಿ ಸಂಭ್ರಮಿಸುವುದು ಖುಷಿ ಕೊಟ್ಟಿದೆ ಎಂದು ಕರಾವಳಿ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಮಾತು.

ದೂರದಲ್ಲಿ ಇರುವಂತಹ ಮನೆಮಂದಿಯ ಜೊತೆ ದೀಪಾವಳಿಯನ್ನು ಸಂಭ್ರಮಿಸದೆ ಬೇಸರ ದಲ್ಲಿರುವ ವಿದ್ಯಾರ್ಥಿಗಳಿಗೆ ಕರಾವಳಿ ಕಾಲೇಜಿನ ದೀಪಾವಳಿ ಸಂಭ್ರಮ ಅತೀವ ಆನಂದ ನೀಡಿದೆ… ಪಟಾಕಿಗಳ ಸುಡುಮದ್ದಿನ ಜೊತೆಗೆ ಸಿಹಿತಿಂಡಿ ಅದಕ್ಕೂ ಹೆಚ್ಚಾಗಿ ಸಾಂಸ್ಕೃತಿಕ ಸಂಭ್ರಮ ದಲ್ಲಿ ವಿದ್ಯಾರ್ಥಿಗಳು ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು.

Please follow and like us:
0
http://bp9news.com/wp-content/uploads/2018/11/BP9-NEWS-32.jpeghttp://bp9news.com/wp-content/uploads/2018/11/BP9-NEWS-32-150x150.jpegBP9 Bureauಪ್ರಮುಖಮಂಗಳೂರುಮಂಗಳೂರು :ಬೆಳಕಿನ ಹಬ್ಬ ದೀಪಾವಳಿಯನ್ನು ಕರಾವಳಿಯಲ್ಲಿ ಸಂಭ್ರಮ- ಸಡಗರಗಳಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಜಿಲ್ಲೆಯ,  ಹೊರನಾಡಿನ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಸಂಭ್ರಮದ ವಾತಾವರಣ ವನ್ನು ಕಾಲೇಜುಗಳು ಕಲ್ಪಿಸಿವೆ. ಕರಾವಳಿ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿ : ಬೆಳಕಿನ ಹಬ್ಬ ದೀಪಾವಳಿ ಕರಾವಳಿಯಲ್ಲಿ ಸಂಭ್ರಮವೋ ಸಂಭ್ರಮ.... ಮನೆಗಳಲ್ಲಿ ಹಣತೆ ಬೆಳಗಿ ಹಬ್ಬವನ್ನು ಸಂಭ್ರಮಿಸಿದ್ದಾರೆ... ಆದರೆ, ಜಿಲ್ಲೆಯ, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ದೀಪಾವಳಿಯನ್ನು ಸಂಭ್ರಮಿಸುವ ಅವಕಾಶವನ್ನು ಕೆಲವು ಕಾಲೇಜುಗಳು ತೆರೆದಿಟ್ಟಿವೆ. var domain = (window.location !=...Kannada News Portal