ದಕ್ಷಿಣಕನ್ನಡ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧೀನದಲ್ಲಿ ಇತರೆಡೆ ಯಾವುದೇ ಶಾಖಾ ಮಠ,ದೇಗುಲ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಕ್ಷೆತ್ರದ ಹೊರಗೆ ಮಧ್ಯವರ್ತಿಗಳು ಸುಬ್ರಹ್ಮಣ್ಯ ದೇವಾಲಯದ ಹೆಸರನ್ನು ಹೇಳಿಕೊಂಡು ಹಣವನ್ನ ವಸೂಲಿ ಮಾಡುವುದರ ಜೊತೆಗೆ, ಕ್ಷೇತ್ರದಲ್ಲಿ ನಡೆಯುವ ಸೇವೆ ಹೆಸರಿನಲ್ಲಿ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸುದ್ದಿಯಾದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ಸ್ಪಷ್ಟನೆ ನೀಡಿದೆ.ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತರು ಸಲ್ಲಿಸುವ ಹರಕೆ, ಕಾಣಿಕೆ ದೇಗುಲದ ಕೌಂಟರ್​​​ಗಳಲ್ಲಿ ಸಂದಾಯ ಮಾಡಿದರೆ ಮಾತ್ರ ದೇವರಿಗೆ ಸಲ್ಲುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದೇಗುಲದಲ್ಲಿ ಹಲವಾರು ವರ್ಷಗಳಿಂದ ಸರ್ಪಸಂಸ್ಕಾರ ಸೇವೆ ನಡೆಯುತ್ತಿದ್ದು, ಭಕ್ತರಿಗೆ ಸುಲುಭವಾಗಲೆಂದು ದೇವಾಲಯದ ಅಧಿಕೃತ ವೆಬ್​​ಸೈಟ್​​​ www.kukke.org ನಲ್ಲಿ ಮುಂಗಡ ಬುಕ್ಕಿಂಗ್​​ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರ ಶುಲ್ಕ 3,200 ರೂ. ಮಾತ್ರ ಆಗಿರುತ್ತದೆ.ಇದು ದೇಗುಲದ ಆವರಣದಲ್ಲೇ ನಡೆಸಲಾಗುತ್ತದೆ ಎಂದು ತಿಳಿಸಿದೆ.

ಆದರೆ ಇತ್ತೀಚೆಗೆ ಹಲವು ವೆಬ್​​ಸೈಟ್​​ಗಳು ಭಕ್ತರ ಹಾದಿ ತಪ್ಪಿಸುತ್ತಿದೆ.ಇನ್ನೊಂದೆಡೆ ಮಧ್ಯವರ್ತಿಗಳು ಸೇವೆಗೆ ಹೆಚ್ಚು ಹಣವನ್ನ ವಸೂಲಿ ಮಾಡುತ್ತಿರುವ ಸುದ್ದಿ ಬರುತ್ತಿದೆ. ದಯವಿಟ್ಟು ಭಕ್ತರು ಗೊಂದಲಕ್ಕೊಳಗಾಗದೆ, ದೇವಾಲಯದ ಅಧಿಕೃತ ವೆಬ್​​ಸೈಟ್​​​ ಅಥವಾ ನೇರವಾಗಿ ದೇವಾಲಯಕ್ಕೆ ಬಂದು ಮಾಹಿತಿ ಪಡೆಯಬೇಕು ಎಂದು ಕುಕ್ಕೆ ದೇವಾಲಯ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್​​ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/maxresdefault-1-7-1024x576.jpghttp://bp9news.com/wp-content/uploads/2018/06/maxresdefault-1-7-150x150.jpgBP9 Bureauಪ್ರಮುಖಮಂಗಳೂರುದಕ್ಷಿಣಕನ್ನಡ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧೀನದಲ್ಲಿ ಇತರೆಡೆ ಯಾವುದೇ ಶಾಖಾ ಮಠ,ದೇಗುಲ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಕ್ಷೆತ್ರದ ಹೊರಗೆ ಮಧ್ಯವರ್ತಿಗಳು ಸುಬ್ರಹ್ಮಣ್ಯ ದೇವಾಲಯದ ಹೆಸರನ್ನು ಹೇಳಿಕೊಂಡು ಹಣವನ್ನ ವಸೂಲಿ ಮಾಡುವುದರ ಜೊತೆಗೆ, ಕ್ಷೇತ್ರದಲ್ಲಿ ನಡೆಯುವ ಸೇವೆ ಹೆಸರಿನಲ್ಲಿ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸುದ್ದಿಯಾದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ಸ್ಪಷ್ಟನೆ ನೀಡಿದೆ.ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತರು ಸಲ್ಲಿಸುವ ಹರಕೆ, ಕಾಣಿಕೆ...Kannada News Portal