ಮಂಗಳೂರು: “ನಾ ನಿನಗೆ ಏನ್ ಮಾಡಿದ್ದೇ ಕಣೇ, ನನಗ್ಯಾಕೆ ಹೊಡಿತ್ತಿದ್ದೀಯಾ, ನಾ ನಿನಗೆ ಏನ್ ಅನ್ಯಾಯ ಮಾಡಿದೆ”

ಹೀಗೆ ಯುವತಿಯೊಬ್ಬಳ ಕೈಯಿಂದ ಏಟು ತಿನ್ನುತ್ತಾ ಗೋಗರೆಯುತ್ತಿರುವ ವ್ಯಕ್ತಿಯ ಹೆಸರು ಸೈಯದ್, ಈತ ಯುವತಿಯೊಬ್ಬಳಿಗೆ ತನ್ನ ಹೆಸರು ಅರುಣ್ ಪೂಜಾರಿ ಎಂದು ಹೇಳಿ ಪ್ರೀತಿಸಿ ಮದುವೆಯಾದ. ನಂತರ ಆಕೆಯನ್ನ ಕೈ ಬಿಟ್ಟು ಮತ್ತೊಂದು ಮದುವೆಯಾಗಲು ಯತ್ನಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಆತನನ್ನ ಪತ್ತೆ ಹಚ್ಚಿ ದೊಣ್ಣೆ ಸೇವೆ ಮಾಡಿದ್ದಾಳೆ. ಹೆಸರು ಬದಲಿಸಿ ಯುವತಿಯನ್ನ ವಂಚಿಸಿ ಮದುವೆಯಾಗಿ ಕೈಕೊಟ್ಟಿದ್ದ .  ಘಟನೆ ನಡೆದಿರೋದು ತಾಲೂಕಿನ ತೊಕ್ಕೊಟ್ಟು ಬಳಿಯ ಕುಂಪಲ ಎಂಬಲ್ಲಿ.

ಸುಳ್ಯ ಮೂಲದ ಮುಸ್ಲಿಂ ಯುವಕ ಸೈಯ್ಯದ್  ಎಂಬಾತನೇ ವಂಚನೆ ಮಾಡಿದ ಆರೋಪಿ. ಈತ ಕುಂಪಲದ ಹಿಂದು ಯುವತಿಯೊಬ್ಬಳನ್ನ ಪ್ರೀತಿಸಿ ಮದುವೆಯಾಗಿದ್ದ. ಅಲ್ಲದೆ, ಮದುವೆಯಾಗುವಾಗ ತನ್ನ ಹೆಸರು ಅರುಣ್ ಪೂಜಾರಿ ಎಂದು ಹೇಳಿದ್ದ. ಮದುವೆಯಾದ ಕೆಲ ದಿನಗಳ ನಂತ್ರ ಆರೋಪಿ ತನ್ನ ಪತ್ನಿಯನ್ನೇ ಬಿಟ್ಟುಬೇರೊಂದು ಮದುವೆಯಾಗಲು ಯತ್ನಿಸಿದ್ದ. ಈ ವಿಷಯ ತಿಳಿದ ಕೂಡಲೆ ಯುವತಿ ಮಹಿಳಾ ಸಂಘಟನೆಗಳ ಜೊತೆಗೂಡಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ನಂತ್ರ ಆತನನ್ನ ಕೇಳಿದಾಗ ಇಲ್ಲ, ನಾನೇನು ಮಾಡಿಲ್ಲ ಎಂದು ಸುಳ್ಳು ಹೇಳಲು ಆರಂಭಿಸಿದ. ಕೂಡಲೆ ಪತ್ನಿಯೂ ಸೇರಿದಂತೆ ಅಲ್ಲಿದ್ದ ಮಹಿಳೆಯರು ಆರೋಪಿಗೆ ದೊಣ್ಣೆ ಸೇವೆ ಮಾಡಿದ್ದಾರೆ. ತೊಕ್ಕೊಟ್ಟಿನ ಕುಂಪಲದ ಚಿತ್ರಾಂಜಲಿ ನಗರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/06/7140656f-4ece-436d-bda0-6d49b357ecfb-768x1024.jpghttp://bp9news.com/wp-content/uploads/2018/06/7140656f-4ece-436d-bda0-6d49b357ecfb-150x150.jpgBP9 Bureauಪ್ರಮುಖಮಂಗಳೂರುಮಂಗಳೂರು: 'ನಾ ನಿನಗೆ ಏನ್ ಮಾಡಿದ್ದೇ ಕಣೇ, ನನಗ್ಯಾಕೆ ಹೊಡಿತ್ತಿದ್ದೀಯಾ, ನಾ ನಿನಗೆ ಏನ್ ಅನ್ಯಾಯ ಮಾಡಿದೆ' ಹೀಗೆ ಯುವತಿಯೊಬ್ಬಳ ಕೈಯಿಂದ ಏಟು ತಿನ್ನುತ್ತಾ ಗೋಗರೆಯುತ್ತಿರುವ ವ್ಯಕ್ತಿಯ ಹೆಸರು ಸೈಯದ್, ಈತ ಯುವತಿಯೊಬ್ಬಳಿಗೆ ತನ್ನ ಹೆಸರು ಅರುಣ್ ಪೂಜಾರಿ ಎಂದು ಹೇಳಿ ಪ್ರೀತಿಸಿ ಮದುವೆಯಾದ. ನಂತರ ಆಕೆಯನ್ನ ಕೈ ಬಿಟ್ಟು ಮತ್ತೊಂದು ಮದುವೆಯಾಗಲು ಯತ್ನಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಆತನನ್ನ ಪತ್ತೆ ಹಚ್ಚಿ ದೊಣ್ಣೆ ಸೇವೆ ಮಾಡಿದ್ದಾಳೆ. ಹೆಸರು...Kannada News Portal