ಮಂಗಳೂರು : ಕಾಂಗ್ರೆಸ್ ನ ಹಿರಿಯ ನಾಯಕರ ಎದುರೇ ಯುವ ಕಾಂಗ್ರೆಸ್ ನ ಎರಡು ಬಣಗಳು ಹೊಡೆದಾಡಿಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡದ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಕ್ವಿಟ್ ಇಂಡಿಯಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮುಂದೆಯೇ ಯೂತ್ ಕಾಂಗ್ರೆಸ್ ನಾಯಕ ಮಿಥುನ್ ರೈ ಮತ್ತು ಪುನೀತ್ ಶೆಟ್ಟಿ ಬಣದ ಮಧ್ಯೆ ಜಟಾಪಟಿ ನಡೆದಿದೆ.


ಇಬ್ಬರು ಯುವ ನಾಯಕರ ಮಧ್ಯೆ ರಾಜಕೀಯ ವೈಮನಸ್ಸು ಇದ್ದ ಹಿನ್ನಲೆಯಲ್ಲಿ ಎರಡು ತಂಡದ ಬೆಂಬಲಿಗರು ಪರಸ್ಪರ ಮಾತಿನ ಚಕಮಕಿ ನಡೆಸಿ ಹೊಡೆದಾಡಿಕೊಂಡದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಮುಖಂಡರು ಇತ್ತಂಡಗಳನ್ನು ಸಮಾಧಾನಗೊಳಿಸಿ ಪುರಭವನದಿಂದ ತೆರಳುವಂತೆ ಸೂಚಿಸಿದ್ದಾರೆ. ಈ ವೇಳೆ ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್ ಲೋಬೋ, ಐವನ್ ಡಿಸೋಜಾ ಸೇರಿ ಹಲವರಿದ್ದು ಮುಜುಗರಕ್ಕೊಳಗಾದರು.

ಘಟನೆ ಕುರಿತು ಮಾತನಾಡಿದ ಇಂಟಕ್ ನಾಯಕ ಪುನೀತ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ದ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಿವೆ. ಒಬ್ಬ ಸಮರ್ಥ ನಾಯಕನಿಗೆ ಇರಬೇಕಾದ ಗುಣಗಳು ಮಿಥುನ್ ರೈ ಹೊಂದಿಲ್ಲ. ಇಂತಹ ಅಸಮರ್ಥರ ಕೈಗೆ ಯುವ ಕಾಂಗ್ರೆಸ್ ನ ಜವಬ್ದಾರಿಯನ್ನು ನೀಡಿರುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರು ಮತ್ತೊಮ್ಮೆ ಯೋಚಿಸಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Please follow and like us:
0
http://bp9news.com/wp-content/uploads/2018/08/-ಕಾರ್ಯಕರ್ತರ-ಹೊಡೆದಾಟ-BP9-NEWS-e1533812133859.jpeghttp://bp9news.com/wp-content/uploads/2018/08/-ಕಾರ್ಯಕರ್ತರ-ಹೊಡೆದಾಟ-BP9-NEWS-e1533812133859-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಕಾಂಗ್ರೆಸ್ ನ ಹಿರಿಯ ನಾಯಕರ ಎದುರೇ ಯುವ ಕಾಂಗ್ರೆಸ್ ನ ಎರಡು ಬಣಗಳು ಹೊಡೆದಾಡಿಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡದ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಕ್ವಿಟ್ ಇಂಡಿಯಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮುಂದೆಯೇ ಯೂತ್ ಕಾಂಗ್ರೆಸ್ ನಾಯಕ ಮಿಥುನ್ ರೈ ಮತ್ತು ಪುನೀತ್ ಶೆಟ್ಟಿ ಬಣದ ಮಧ್ಯೆ ಜಟಾಪಟಿ ನಡೆದಿದೆ. var...Kannada News Portal