ಮಂಗಳೂರು : ಭೀಕರ ವಾಹನ ಅಪಘಾತ ಸಂಭವಿಸಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಉಪ್ಪಳದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪಳ ಸಮೀಪದ ನಯಬಝಾರ್ ನಲ್ಲಿ ಬೆಳಿಗ್ಗೆ 6 ಘಂಟೆ ಸುಮಾರಿಗೆ ಲಾರಿ ಹಾಗೂ ಜೀಪ್ ಡಿಕ್ಕಿ ಹೊಡೆದು 5 ಮಂದಿ ಸಾವನ್ನಪ್ಪಿದ್ದಾರೆ. 8 ಮಂದಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ಮಹಿಳೆಯರು ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರು ತಲಪಾಡಿ ಸಮೀಪದ ಕೆ.ಸಿ ರೋಡು ನಿವಾಸಿಗಳು.

ಮೃತರನ್ನು ಕೆ.ಸಿ ರೋಡು ಸಮೀಪದ ಅಜ್ಜಿನಡ್ಕ ಸಾಮನಿಗೆ ನಿವಾಸಿಗಳಾದ ಬೀಫಾತಿಮಾ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್(35)  ಎಂದು ಗುರುತಿಸಲಾಗಿದೆ. ಕೇರಳದ ಪಾಲಕ್ಕಾಡ್ ಗೆ ತೆರಳಿ ಉಳ್ಳಾಲಕ್ಕೆ ಮರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಒಟ್ಟು ಜೀಪ್ ನಲ್ಲಿ 13 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ 5 ಮಂದಿ ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿಯ ಟೈಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್ಚ್.ಸಿ ಶವಾಗಾರದಲ್ಲಿಡಲಾಗಿದೆ.

 

 

Please follow and like us:
0
http://bp9news.com/wp-content/uploads/2018/07/WhatsApp-Image-2018-07-09-at-8.42.23-AM-1024x576.jpeghttp://bp9news.com/wp-content/uploads/2018/07/WhatsApp-Image-2018-07-09-at-8.42.23-AM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಭೀಕರ ವಾಹನ ಅಪಘಾತ ಸಂಭವಿಸಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಉಪ್ಪಳದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪಳ ಸಮೀಪದ ನಯಬಝಾರ್ ನಲ್ಲಿ ಬೆಳಿಗ್ಗೆ 6 ಘಂಟೆ ಸುಮಾರಿಗೆ ಲಾರಿ ಹಾಗೂ ಜೀಪ್ ಡಿಕ್ಕಿ ಹೊಡೆದು 5 ಮಂದಿ ಸಾವನ್ನಪ್ಪಿದ್ದಾರೆ. 8 ಮಂದಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ಮಹಿಳೆಯರು ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರು ತಲಪಾಡಿ...Kannada News Portal