ಮಂಗಳೂರು : ಫಾಸ್ಟ್‌ಫುಡ್ ಅಂಗಡಿಯ ಮಾಲಕನಿಗೆ ರೌಡಿ ಶೀಟರ್‌ನೋರ್ವ  ಬಿಸಿಎಣ್ಣೆ ಎರಚಿ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದ ಹಳೆಕೋಟೆ ನಿವಾಸಿ ಅಬ್ದುಲ್ ಗಫೂರ್ ಎಂಬುವವರು ಹಲ್ಲೆಗೊಳಗಾದವರು. ಮೊಗವೀರ ಪಟ್ನದ ನಿವಾಸಿ ಹಾಗೂ ರೌಡಿ ಶೀಟರ್ ರಮಿತ್ ಮತ್ತಿತರ ಮೂವರು ಹಲ್ಲೆ ನಡೆಸಿದ ಆರೋಪಿಗಳು.

ಗಫೂರ್ 5 ವರ್ಷಗಳಿಂದ ಫಾಸ್ಟ್‌ಫುಡ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ರಮಿತ್ ಆಗಾಗ ಅಂಗಡಿಗೆ ಬಂದು ತಿನಿಸುಗಳನ್ನು ತಿಂದು ಹಣ ನೀಡದೆ ಹೋಗುತ್ತಿದ್ದ. ಅಲ್ದೇ ತೊಂದರೆ ನೀಡಿ ಬೆದರಿಕೆ ಒಡ್ಡುತ್ತಿದ್ದ. ನಿನ್ನೆ ರಾತ್ರಿ ಕೂಡ ಆತ ಇತರ ಮೂವರೊಂದಿಗೆ ಅಂಗಡಿಗೆ ಆಗಮಿಸಿ ತಿನಿಸುಗಳನ್ನು ಕೇಳಿದ್ದಾನೆ. ಹಿಂದಿನ ಹಣವನ್ನು ಕೊಡು ಇಲ್ಲದಿದ್ದರೆ, ಇವತ್ತಿನ ಹಣವಾದರೂ ಪಾವತಿಸುವ ಎಂದು ಮಾಲಕ ಹೇಳಿದ್ದಾನೆ. ಅದಕ್ಕೆ ಕೋಪಗೊಂಡು ಅಂಗಡಿ ಒಳಗೆ ನುಗ್ಗಿ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ತನ್ನ ಮೈಗೆ ಚೆಲ್ಲಿದ್ದಾನೆ. ಅಲ್ಲದೆ ಮಾರಣಾಂತಿಕ ಹಲ್ಲೆ ನಡೆಸಲು ಚೂರಿಗಾಗಿ ಹುಡುಕಾಡಿದ್ದಾನೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.

ಈತನ ಕಿರುಕುಳ ಹಾಗೂ ಬೆದರಿಕೆಗಳ ಬಗ್ಗೆ ಎರಡು ವಾರಗಳ ಹಿಂದೆಯೇ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇತರರಿಗೆ ತೊಂದರೆ ಮಾಡುತ್ತಾ ರಾಜಾರೋಷವಾಗಿ ತಿರುಗಾಡುವ ಈತನ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಫೂರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿ ಶೀಟರ್‌ನಿಂದ ಹಲ್ಲೆಗೊಳಗಾದ ಗಫೂರ್‌ನ ಯೋಗಕ್ಷೇಮ ವಿಚಾರಿಸಲೆಂದು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್‌ಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಬಿಪಿ9 ನ್ಯೂಸ್ ಮಂಗಳೂರು

Please follow and like us:
0
http://bp9news.com/wp-content/uploads/2018/04/collage-28.jpghttp://bp9news.com/wp-content/uploads/2018/04/collage-28-150x150.jpgBP9 Bureauಪ್ರಮುಖಮಂಗಳೂರುಮಂಗಳೂರು : ಫಾಸ್ಟ್‌ಫುಡ್ ಅಂಗಡಿಯ ಮಾಲಕನಿಗೆ ರೌಡಿ ಶೀಟರ್‌ನೋರ್ವ  ಬಿಸಿಎಣ್ಣೆ ಎರಚಿ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದ ಹಳೆಕೋಟೆ ನಿವಾಸಿ ಅಬ್ದುಲ್ ಗಫೂರ್ ಎಂಬುವವರು ಹಲ್ಲೆಗೊಳಗಾದವರು. ಮೊಗವೀರ ಪಟ್ನದ ನಿವಾಸಿ ಹಾಗೂ ರೌಡಿ ಶೀಟರ್ ರಮಿತ್ ಮತ್ತಿತರ ಮೂವರು ಹಲ್ಲೆ ನಡೆಸಿದ ಆರೋಪಿಗಳು. ಗಫೂರ್ 5 ವರ್ಷಗಳಿಂದ ಫಾಸ್ಟ್‌ಫುಡ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ರಮಿತ್ ಆಗಾಗ ಅಂಗಡಿಗೆ ಬಂದು ತಿನಿಸುಗಳನ್ನು ತಿಂದು ಹಣ...Kannada News Portal