ಮಂಗಳೂರು: ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್​​​ ಟಿಕೆಟ್​​ ಕೈ ತಪ್ಪಿದ ವಿಚಾರವಾಗಿ ಮಾತನಾಡಿದ ಐವನ್ ಡಿಸೋಜಾ ಟಿಕೆಟ್ ಕೈ ತಪ್ಪಿರೋದ್ರಿಂದ ನನಗೆ ಬೇಸರ ಇಲ್ಲ, ಈ ಹಿಂದೆ ಅಭಯಚಂದ್ರ ಜೈನ್ ಚುನಾವಣೆಗೆ ನಿಲ್ಲಲ್ಲ ಅಂದಿದ್ರು, ಹೀಗಾಗಿ ನಾನು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೆ, ಬಳಿಕ ಅಭಯಚಂದ್ರ ಜೈನ್ ಮತ್ತೆ ಸೀಟು ಬೇಕೆಂದ್ರು, ಮುಖ್ಯಮಂತ್ರಿಗಳು ಅಭಯಚಂದ್ರ ಜೈನ್ ಗೆ ಟಿಕೆಟ್ ಬೇಡ ಆಂದ್ರೆ ನನಗೆ ಅಂದಿದ್ರು ಆದ್ದರಿಂದ ಅಭಯಚಂದ್ರ ಜೈನ್ ಗೆ ಟಿಕೆಟ್ ನೀಡಿರೋದ್ರಿಂದ ಬೇಸರ ಇಲ್ಲ ಎಂದಿದ್ದಾರೆ.

ಚುನಾವಣಾ ಆಯೋಗದಿಂದ ಖಡಕ್ ನಿಯಮ ‌ವಿಚಾರವಾಗಿ, ಚುನಾವಣಾ ಆಯೋಗದ ವಿರುದ್ದ ಐವಾನ್ ಡಿಸೋಜಾ ಆಕ್ರೋಶ ಹೊರಹಾಕಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಇಲ್ಲ,ರಾಜಕಾರಣಿಗಳು ಮದುವೆಗೆ ಹೋಗುವಂತಿಲ್ಲ.ಚುನಾವಣೆ ಪ್ರಜಾ ಪ್ರಭುತ್ವದ ಅಂಗ,ಎಲ್ಲರಿಗೂ ಸ್ವಾತಂತ್ರ್ಯ ಇದೆ.ಮದುವೆಗಳನ್ನು ಮಾಡಲು ಬಿಡೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮಗಳಲ್ಲಿ ಮದ್ಯ ಕೊಡೋಕೂ ಬಿಡ್ತಾ ಇಲ್ಲ, ಚುನಾವಣಾ ಆಯೋಗದ ನಿಯಮಗಳು ಅತಿಯಾಯಿತು.ಇದಕ್ಕೆ ನಿಯಂತ್ರಣ ಬೇಕಾಗಿದೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/04/collage-5-13.jpghttp://bp9news.com/wp-content/uploads/2018/04/collage-5-13-150x150.jpgBP9 Bureauಮಂಗಳೂರುರಾಜಕೀಯಮಂಗಳೂರು: ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್​​​ ಟಿಕೆಟ್​​ ಕೈ ತಪ್ಪಿದ ವಿಚಾರವಾಗಿ ಮಾತನಾಡಿದ ಐವನ್ ಡಿಸೋಜಾ ಟಿಕೆಟ್ ಕೈ ತಪ್ಪಿರೋದ್ರಿಂದ ನನಗೆ ಬೇಸರ ಇಲ್ಲ, ಈ ಹಿಂದೆ ಅಭಯಚಂದ್ರ ಜೈನ್ ಚುನಾವಣೆಗೆ ನಿಲ್ಲಲ್ಲ ಅಂದಿದ್ರು, ಹೀಗಾಗಿ ನಾನು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೆ, ಬಳಿಕ ಅಭಯಚಂದ್ರ ಜೈನ್ ಮತ್ತೆ ಸೀಟು ಬೇಕೆಂದ್ರು, ಮುಖ್ಯಮಂತ್ರಿಗಳು ಅಭಯಚಂದ್ರ ಜೈನ್ ಗೆ ಟಿಕೆಟ್ ಬೇಡ ಆಂದ್ರೆ ನನಗೆ ಅಂದಿದ್ರು ಆದ್ದರಿಂದ ಅಭಯಚಂದ್ರ ಜೈನ್ ಗೆ...Kannada News Portal