ಬೆಂಗಳೂರು : ರೈತರ ಸಾಲಮನ್ನಾಮಾಡುವಂತೆ  ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್ ಕರೆ ಕೊಟ್ಟಿದ್ದು, ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಬಂದ್​​ ಯಶಸ್ವಿಯಾದರೆ, ಕಲವೆಡೆ ವಿಫಲವಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಬಂದ್​​ಗೆ  ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಗದಗ :

ರೈತರ ಸಾಲಮನ್ನಾಗಾಗಿ ಆಗ್ರಹಿಸಿ ಬಿಜೆಪಿ ಬಂದ್ ಕರೆ ಹಿನ್ನೆಲೆ ಗದಗ ನಗರದ ಮುಳಗುಂದ ನಾಕಾದಲ್ಲಿ ಬಿಜೆಪಿ ರೈತ ಘಟಕ ಹಾಗೂ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ‌ ಮಾಡಲಾಯಿತು. ಮುಳಗುಂದ ನಾಕಾದಲ್ಲಿ ಗದಗ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿ.ಎಮ್ ಕುಮಾರಸ್ವಾಮಿ ವಚನ ಭ್ರಷ್ಟ ಎಂದು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಮಾಡಿ‌‌ದ್ದರಿಂದ  ಕೆಲಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ‌ ಮೂರು ಕ್ಷೇತ್ರ ಬಿಜೆಪಿ ಶಾಸಕರಿರುವುದರಿಂದ ಗದಗ ಜಿಲ್ಲೆ ನಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕೊಡಗು :

ಕರ್ನಾಟಕ ಬಂದ್ ಹಿನ್ನೆಲೆ, ಮಡಿಕೇರಿಯಲ್ಲಿ ಶಾಸಕರಿಂದ ವಾಹನ ಸಂಚಾರಕ್ಕೆ ತಡೆ  ನಡೆಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಿಂತು ವಾಹನಗಳನ್ನು ತಡೆದ ಶಾಸಕ ಬೋಪಯ್ಯ ಅವರಿಗೆ  ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ವಾಹನ ತಡೆಯದಂತೆ ಪೊಲೀಸರು ಹೇಳಿದರು   ಪೊಲೀಸರ ಎದುರಲ್ಲೇ ವಾಹನಗಳನ್ನು  ತಡೆದು  ಶಾಸಕರು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವಿರಾಜಪೇಟೆಯಲ್ಲಿ ಬಂದ್ ಯಶಸ್ವಿ

ವಿರಾಜಪೇಟೆಯಲ್ಲಿ ಕರ್ನಾಟಕ ಬಂದ್​​​ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಖಾಸಗಿ ಬಸ್ ಗಳು ರಸ್ತೆಗಿಳಿಯದೆ ಬಂದ್​​​ಗೆ ಬೆಂಬಲ ನೀಡಿದ್ದಾರೆ. ಆದರೆ  ಕೆ.ಎಸ್ .ಆರ್ .ಟಿ .ಸಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿವೆ.

ಗೋಣಿಕೊಪ್ಪಲು:

ರೈತರ ಸಾಲಮನ್ನಕ್ಕೆ ಅಗ್ರಹಿಸಿ ಬಿಜೆಪಿ ನೀಡಿರುವ ಬಂದ್ ಕರೆಗೆ ಗೋಣಿಕೊಪ್ಪಲಿನಲ್ಲಿ ಅಂಗಡಿಮುಂಗಟ್ಟನ್ನು ಮುಚ್ಚಿ, ಖಾಸಗಿ ಬಸ್ಸುಗಳು ಬಂದ್ ಮಾಡುವುದರ ಮೂಲಕ ಬಂದ್‌ಗೆ ಬೆಂಬಲ ನೀಡಿದ್ದಾರೆ.

ಚಾಮರಾಜನಗರ :

ಬಂದ್ ಗೆ ಗಡಿ ಜಿಲ್ಲೆ ಚಾಮರಾಜನಗರ ದಲ್ಲಿ ನೀರಸ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ಸಾಲ ಮನ್ನಾ ಆಗ್ರಹಿಸಿ ರಾಜ್ಯ ಬಂದ್ ಗೆ ಬಿಜೆಪಿ ಕರೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.ಖಾಸಗಿ ಮತ್ತು ಕೆಎಸ್ ಆರ್ ಟಿಸಿ ಬಸ್  ಎಂದಿನಂತೆ ಸಂಚಾರ ಆರಂಭಿಸಿದ್ದು, ಒಟ್ಟಿನಲ್ಲಿ ಸಹಜ ಸ್ಥಿತಿಯಲ್ಲಿ ಚಾಮರಾಜನಗರ ಇದೆ.

ಇನ್ನು ಬಂದ್ ಗೆ ರೈತ ಸಂಘದ ಕೋಡಿ ಹಳ್ಳಿ ಚಂದ್ರಶೇಖರ್ ಬಣ ಬೆಂಬಲಿಸಿದ್ದು, ಬಿಜೆಪಿ ಪ್ರತಿಭಟನೆ ನಡೆಸಿಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಲವಂತ ಬಂದ್ ಮಾಡಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಬಸ್, ರಿಕ್ಷಾ ಸೇರಿದಂತೆ ವಿವಿಧ ವಾಹನಗಳು ಓಡಾಟ ಆರಂಭಿಸಿವೆ. ಅಂಗಡಿ ಮುಂಗಟ್ಟುಗಳು, ಕಚೇರಿಗಳು ಎಂದಿನಂತೆ ತೆರೆದಿವೆ. ಅದೇ ರೀತಿ ಇಂದು ರಾಜ್ಯಾದ್ಯಂತ ಶಾಲೆಗಳೂ ಸಹ ತೆರೆದಿವೆ. ಬಿಜೆಪಿ ಕರೆ ನೀಡಿದ್ದ ಬಂದ್ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಸಹ ಬೆಂಬಲ ಸೂಚಿಸಿರಲಿಲ್ಲ. ಇನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ರೆ ಕ್ರಮ ತೆಗೆದುಕೊಳ್ಳೋದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ಸಹ ನೀಡಿತ್ತು.

ಬೆಟಗೇರಿ

ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿ ಬಂದ್ ಕರೆ ಹಿನ್ನೆಲೆ ಗದಗನ ಬೆಟಗೇರಿಯಲ್ಲಿ ಎತ್ತಿನ ಚಕ್ಕಡಿ ಜಾಥ ನಡೆಸಿದರು. ಮೈಲಾರಲಿಂಗೇಶ್ವರ  ದೇವಸ್ಥಾನದಿಂದ ಬೆಟಗೇರಿ ಬಸ್ ನಿಲ್ದಾಣದವರೆಗೆ ಬೃಹತ್ ಜಾಥ ನಡೆಸಿದರು. ಎತ್ತಿನ ಬಂಡಿ ಮೆರವಣಿಗೆ ಉದ್ದಕ್ಕೂ ಎಚ್.ಡಿ.ಡಿ ಹಾಗೂ ಎಚ್.ಡಿ.ಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸದರು.ಅಪ್ಪ ಕಳ್ಳ ಮಗ ಸುಳ್ಳ ಅಂತ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿದರು.

ಮೆರವಣಿಗೆ ವೇಳೆ ಬೆಟಗೇರಿಯಲ್ಲಿ ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದಾಗಿದ್ದು,ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೆಂಬಲ ಸೂಚಿಸಿದ ವ್ಯಾಪಾರಸ್ಥರು. ಮೆರವಣಿಗೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ೨ ಸಿಪಿಐ, ೪ ಜನ ಪಿಎಸ್ಐ ‌ಎರಡು ತುಕುಡಿ ಡಿಆರ್ ಸೇರಿ ನೂರಾರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ತುಮಕೂರು :

ರೈತರ ಸಾಲಮನ್ನಾ ವಿಚಾರವಾಗಿ ಕರ್ನಾಟಕ ಬಂದ್ ಹಿನ್ನಲೆ ತುಮಕೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿತು.ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ನಗರದ ಟೌನ್ ಹಾಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಮಾನವ ಸರಪಳಿ‌ ನಿರ್ಮಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಜಿ ಬಿ ಜ್ಯೋತಿಗಣೇಶ್ , ಮಾಜಿ ಸಂಸದ ಜಿಎಸ್ ಬಸವರಾಜ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/05/collage-59.jpghttp://bp9news.com/wp-content/uploads/2018/05/collage-59-150x150.jpgBP9 Bureauಕೊಡಗುಗದಗಚಾಮರಾಜನಗರತುಮಕೂರುಪ್ರಮುಖಮಂಗಳೂರುರಾಜಕೀಯಬೆಂಗಳೂರು : ರೈತರ ಸಾಲಮನ್ನಾಮಾಡುವಂತೆ  ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್ ಕರೆ ಕೊಟ್ಟಿದ್ದು, ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಬಂದ್​​ ಯಶಸ್ವಿಯಾದರೆ, ಕಲವೆಡೆ ವಿಫಲವಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಬಂದ್​​ಗೆ  ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ . ಗದಗ : ರೈತರ ಸಾಲಮನ್ನಾಗಾಗಿ ಆಗ್ರಹಿಸಿ ಬಿಜೆಪಿ ಬಂದ್ ಕರೆ ಹಿನ್ನೆಲೆ ಗದಗ ನಗರದ ಮುಳಗುಂದ ನಾಕಾದಲ್ಲಿ ಬಿಜೆಪಿ ರೈತ ಘಟಕ ಹಾಗೂ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ‌ ಮಾಡಲಾಯಿತು. ಮುಳಗುಂದ ನಾಕಾದಲ್ಲಿ ಗದಗ,...Kannada News Portal