ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮುದ್ವೇಷದ ವಿಚಾರದಲ್ಲಿ ಕುಖ್ಯಾತಿ ಪಡೆದಿದೆ ಏನೋ ಹೌದು. ಕೆಲ ಕಿಡಿಗೇಡಿಗಳಿಂದ ಕೋಮು ಗಲಾಟೆ ಆಗಿರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ, ಸೌಹಾರ್ದತೆಯನ್ನ ಬಯಸುತ್ತಾರೆ. ಇದಕ್ಕೆ ಸಾಕ್ಷಿ ಈ ಘಟನೆ. ಅಂದರೆ ಕೋಮು ಸಾಮರಸ್ಯಕ್ಕೆ ಜ್ವಲಂತ ನಿದರ್ಶನ ಎನ್ನುವಂತಹ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದ ವಿದ್ಯಾಪುರ ಜನವಸತಿ ಕಾಲನಿಯಲ್ಲಿ ನಡೆದಿದೆ.

ಈ ಕಾಲನಿಯಲ್ಲಿ ವಾಸವಿದ್ದ ಭವಾನಿ ಎಂಬುವವರು ನಿಧನರಾಗಿದ್ದರು. ಭವಾನಿ ಮತ್ತು ಸೋದರ ಕೃಷ್ಣ ಮಾತ್ರ ಈ ಮನೆಯಲ್ಲಿ ವಾಸವಿದ್ದರು. ಇವರಿಬ್ಬರು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ಭವಾನಿ ಮೃತಪಟ್ಟಾಗ ಶವದ ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ. ಈ ವೇಳೆ ಸ್ಥಳೀಯರು ಶವ ಸುಡುವುದಕ್ಕೂ ಹತ್ತಿರ ಬಾರದೇ ಇದ್ದಾಗ, ಇಲ್ಲಿನ ಮುಸ್ಲಿಂ ಬಂಧುಗಳು ಒಟ್ಟಾಗಿದ್ದಾರೆ. ಮುಸ್ಲಿಂ ಮಹಿಳೆಯರು ಮತ್ತು ಯುವಕರು ಒಟ್ಟು ಸೇರಿ ಹಣ ಸಂಗ್ರಹಿಸಿ ಅಂತಿಮ ಸಂಸ್ಕಾರ ನಡೆಸಿದ್ದಾರೆ. ರಂಜಾನ್ ಸಂಭ್ರಮದಂದು ಮುಸ್ಲಿಮರು ಹಿಂದು ಧರ್ಮದ ಮಹಿಳೆಯ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ದು ಶವ ಸಂಸ್ಕಾರ ಮಾಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-16-at-5.08.09-PM-576x1024.jpeghttp://bp9news.com/wp-content/uploads/2018/06/WhatsApp-Image-2018-06-16-at-5.08.09-PM-e1529152409679-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮುದ್ವೇಷದ ವಿಚಾರದಲ್ಲಿ ಕುಖ್ಯಾತಿ ಪಡೆದಿದೆ ಏನೋ ಹೌದು. ಕೆಲ ಕಿಡಿಗೇಡಿಗಳಿಂದ ಕೋಮು ಗಲಾಟೆ ಆಗಿರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ, ಸೌಹಾರ್ದತೆಯನ್ನ ಬಯಸುತ್ತಾರೆ. ಇದಕ್ಕೆ ಸಾಕ್ಷಿ ಈ ಘಟನೆ. ಅಂದರೆ ಕೋಮು ಸಾಮರಸ್ಯಕ್ಕೆ ಜ್ವಲಂತ ನಿದರ್ಶನ ಎನ್ನುವಂತಹ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದ ವಿದ್ಯಾಪುರ ಜನವಸತಿ ಕಾಲನಿಯಲ್ಲಿ ನಡೆದಿದೆ. var domain = (window.location != window.parent.location)? document.referrer...Kannada News Portal