ಮಂಗಳೂರು: ಕೇರಳದಲ್ಲಿ ಆತಂಕ ಮೂಡಿಸಿದ್ದ  ನಿಫಾ ವೈರಸ್​​  ಈಗ ಕರ್ನಾಟಕದ ಕರಾವಳಿಯಲ್ಲೂ ಸದ್ದು ಮಾಡುತ್ತಿದೆ.

ನಿಫಾ ವೈರಸ್ ಲಕ್ಷಣದ ಇಬ್ಬರು  ಶಂಕಿತ ರೋಗಿಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ದೃಢಪಟ್ಟಿಲ್ಲ. ಸದ್ಯಕ್ಕೆ ಆ ಇಬ್ಬರು ರೋಗಿಗಳ ರಕ್ತ ಮಾದರಿಯನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಅಲ್ಲಿಂದ ಸಂಪೂರ್ಣ ವರದಿ ಬಂದ ನಂತರ ಸತ್ಯಾ ಸತ್ಯತೆ  ಗೊತ್ತಾಗಲಿದೆ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಹೇಳಿದ್ದಾರೆ.

ಸದ್ಯಕ್ಕೆ  ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ದಿನಗಳ ನಂತರ ಸ್ಪಷ್ಟವಾಗಿ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ನಿಫಾ ವೈರಸ್​​​ ಆತಂಕದ ಹಿನ್ನೆಲೆಯಲ್ಲಿ ಜನರೆಲ್ಲರೂ ಜಾಗೃತರಾಗಿ, ಎಚ್ಚರಿಕೆ ಕ್ರಮಗಳನ್ನ ಅನುಸರಿಸಿ ಎಂದು ಮಾಹಿತಿ ನೀಡಿದರು.

 

 

 

 

 

 

 

Please follow and like us:
0
http://bp9news.com/wp-content/uploads/2018/05/nipha-e1526989014380.pnghttp://bp9news.com/wp-content/uploads/2018/05/nipha-e1526989014380-150x150.pngBP9 Bureauಪ್ರಮುಖಮಂಗಳೂರುಮಂಗಳೂರು: ಕೇರಳದಲ್ಲಿ ಆತಂಕ ಮೂಡಿಸಿದ್ದ  ನಿಫಾ ವೈರಸ್​​  ಈಗ ಕರ್ನಾಟಕದ ಕರಾವಳಿಯಲ್ಲೂ ಸದ್ದು ಮಾಡುತ್ತಿದೆ. ನಿಫಾ ವೈರಸ್ ಲಕ್ಷಣದ ಇಬ್ಬರು  ಶಂಕಿತ ರೋಗಿಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ದೃಢಪಟ್ಟಿಲ್ಲ. ಸದ್ಯಕ್ಕೆ ಆ ಇಬ್ಬರು ರೋಗಿಗಳ ರಕ್ತ ಮಾದರಿಯನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಅಲ್ಲಿಂದ ಸಂಪೂರ್ಣ ವರದಿ ಬಂದ ನಂತರ ಸತ್ಯಾ ಸತ್ಯತೆ  ಗೊತ್ತಾಗಲಿದೆ ಎಂದು...Kannada News Portal