ಮಂಗಳೂರು : ಮಂಗಳೂರು ಏರ್ ಪೋರ್ಟ್ ಗೆ ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕಾರು ಚಾಲಕನ ಮೇಲೆ ಸ್ಥಳೀಯ ಕಾರು ಚಾಲಕರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ಓಲಾ ಕಾರು ಚಾಲಕ ತನ್ನ ಕಾರನ್ನು ಏರ್ ಪೋರ್ಟ್ ಬಳಿ ಪಾರ್ಕ್ ಮಾಡಿದ್ದಕ್ಕೆ  ಸ್ಥಳೀಯ ಕಾರು ಚಾಲಕರು ಆಕ್ಷೇಪ ವ್ಯಕ್ತಪಡಿಸಿ ಆತನ ಕಾರನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದರು.


ಓಲಾ ಕಾರು ಚಾಲಕ ಇದಕ್ಕೆ ಒಪ್ಪದಿದ್ದಾಗ ಆತನ ಮೇಲೆ ಸ್ಥಳೀಯ ಕಾರು ಚಾಲಕರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸುಮಾರು 20ಕ್ಕೂ ಅಧಿಕ ಓಲಾ ಕಾರು ಚಾಲಕರು ಮತ್ತು ಸ್ಥಳೀಯ ಕಾರು ಚಾಲಕರ ಮಧ್ಯೆ ಜಗಳ ನಡೆದಿದೆ. ಘಟನೆಯ ವೇಳೆ ಕಾರೊಂದು ಕಲ್ಲೆಸೆತದಿಂದ ಜಖಂಗೊಂಡಿದೆ. ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Please follow and like us:
0
http://bp9news.com/wp-content/uploads/2018/11/BP9-NEWS-29.jpeghttp://bp9news.com/wp-content/uploads/2018/11/BP9-NEWS-29-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಮಂಗಳೂರು ಏರ್ ಪೋರ್ಟ್ ಗೆ ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕಾರು ಚಾಲಕನ ಮೇಲೆ ಸ್ಥಳೀಯ ಕಾರು ಚಾಲಕರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ಓಲಾ ಕಾರು ಚಾಲಕ ತನ್ನ ಕಾರನ್ನು ಏರ್ ಪೋರ್ಟ್ ಬಳಿ ಪಾರ್ಕ್ ಮಾಡಿದ್ದಕ್ಕೆ  ಸ್ಥಳೀಯ ಕಾರು ಚಾಲಕರು ಆಕ್ಷೇಪ ವ್ಯಕ್ತಪಡಿಸಿ ಆತನ ಕಾರನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದರು.  var domain = (window.location != window.parent.location)? document.referrer...Kannada News Portal