ಮಂಗಳೂರು : ಹಳೆ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.ಮೆಲ್ಕಾರ್ ನಿವಾಸಿ ಚೇತನ್ ಹಲ್ಲೆಗೊಳಗಾದ ಯುವಕ. ಚೇತನ್ ಕಲ್ಲಡ್ಕ ಕೆಳಗಿನ ಪೇಟೆಯ ಫ್ಯಾನ್ಸಿಸ್ಟೋರ್​​​ ಒಳಗೆ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕಿರಣ್ , ಯೋಗೀಶ್, ಮೋಹನ್, ಕೀರ್ತನ್, ಲೋಕೇಶ್, ವಿದ್ಯಾಧರ ಎಂಬವರ ತಂಡ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ನಿಂದ ಚೇತನ್ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಲಾಗಿದೆ.

ಈ ಗುಂಪಿನ ಹಠಾತ್ ದಾಳಿಯಿಂದ ತಪ್ಪಿಸಿಕೊಳ್ಳಲು ಚೇತನ್ ಫ್ಯಾನ್ಸಿಯ ಒಳಗೆ ಹೊಕ್ಕ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೇತನ್ ಕೈ ಹಾಗೂ ಎದೆಯ ಭಾಗಕ್ಕೆ ಗಾಯವಾಗಿದ್ದು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಮೆಲ್ಕಾರ್ ಸಮೀಪ ನಡೆದಿದ್ದ ಗುಂಪುಗಳೆರಡರ ನಡುವಿನ ಗಲಾಟೆಯ ಮುಂದುವರಿದ ಭಾಗವಾಗಿ ಈ ದಾಳಿ, ಹಲ್ಲೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಲಡ್ಕ, ಪಾಣೆಮಂಗಳೂರು, ಮೆಲ್ಕಾರ್, ಬಿ.ಸಿ.ರೋಡು, ಬಂಟ್ವಾಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-12.19.30-AM-578x1024.jpeghttp://bp9news.com/wp-content/uploads/2018/06/WhatsApp-Image-2018-06-12-at-12.19.30-AM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಹಳೆ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.ಮೆಲ್ಕಾರ್ ನಿವಾಸಿ ಚೇತನ್ ಹಲ್ಲೆಗೊಳಗಾದ ಯುವಕ. ಚೇತನ್ ಕಲ್ಲಡ್ಕ ಕೆಳಗಿನ ಪೇಟೆಯ ಫ್ಯಾನ್ಸಿಸ್ಟೋರ್​​​ ಒಳಗೆ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕಿರಣ್ , ಯೋಗೀಶ್, ಮೋಹನ್, ಕೀರ್ತನ್, ಲೋಕೇಶ್, ವಿದ್ಯಾಧರ ಎಂಬವರ ತಂಡ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ನಿಂದ ಚೇತನ್ ಮೇಲೆ ದಾಳಿ ನಡೆಸಿದ್ದಾರೆ ಎಂದು...Kannada News Portal