ಮಂಗಳೂರು : ಬಂಟ್ವಾಳ ಶಾಸಕರ ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಸುಖಾಸುಮ್ಮನೆ ಕಾಂಗ್ರೆಸ್ ಪಕ್ಷ ಮತ್ತು ತನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇದು ಖಂಡನೀಯ.



ಕೂಡಲೇ ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು ಎಂದರು. ಇನ್ನು ಬಂದ್ ವೇಳೆ ತಾನು ಬಲಾತ್ಕಾರವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾಗಿ ತನ್ನ ವಿರುದ್ದ ದೂರಲಾಗಿದೆ. ಅದರ ಸತ್ಯಾಸತ್ಯತೆ ಅರಿಯಬೇಕು. ಸುಳ್ಳು  ಹೇಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈ ಒ್ತತ್ತಾಯಿಸಿದರು. ಇನ್ನು ನಾನೆಂದೂ ಅಂಗಡಿ, ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

Please follow and like us:
0
http://bp9news.com/wp-content/uploads/2018/09/-ರೈ-ಆಗ್ರಹ-BP9NEWS3-e1536758824319.jpeghttp://bp9news.com/wp-content/uploads/2018/09/-ರೈ-ಆಗ್ರಹ-BP9NEWS3-e1536758824319-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಬಂಟ್ವಾಳ ಶಾಸಕರ ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಸುಖಾಸುಮ್ಮನೆ ಕಾಂಗ್ರೆಸ್ ಪಕ್ಷ ಮತ್ತು ತನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇದು ಖಂಡನೀಯ. var domain = (window.location != window.parent.location)? document.referrer : document.location.href; if(domain==''){domain =...Kannada News Portal