ಮಂಗಳೂರು : ರಿಕ್ಷಾ ಚಾಲಕನಿಗೆ ದುಷ್ಕರ್ಮಿಗಳ ತಂಡದಿಂದ ಚೂರಿ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿತ್ತಡ್ಕದಲ್ಲಿ ನಡೆದಿದೆ. ರಿಕ್ಷಾ ಚಾಲಕ, ಮರ್ಧಾಳ ನಿವಾಸಿ ಉಮೇಶ್ ಚೂರಿ ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು,ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡದಿಂದ ಕೃತ್ಯ ಎಸಗಲಾಗಿದೆ.

ರಿಕ್ಷಾವನ್ನ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವನ್ನ ನೋಡಿದ ಉಮೇಶ್ ರಿಕ್ಷಾದಿಂದ ಇಳಿದು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು 200 ಮೀ. ದೂರ‌ ಓಡಿದ್ದಾನೆ. ಆದರೆ ಬೆನ್ನಟ್ಟದ ದುಷ್ಕರ್ಮಿಗಳು ನೆಕ್ಕಿತ್ತಡ್ಕ ದರ್ಗಾ ಬಳಿ ಚೂರಿ ಇರಿದು ಪರಾರಿಯಾಗಿದ್ದಾರೆ.ಗಾಯಾಳುವಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಕಡಬ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/05/collage-30.jpghttp://bp9news.com/wp-content/uploads/2018/05/collage-30-150x150.jpgBP9 Bureauಪ್ರಮುಖಮಂಗಳೂರುಮಂಗಳೂರು : ರಿಕ್ಷಾ ಚಾಲಕನಿಗೆ ದುಷ್ಕರ್ಮಿಗಳ ತಂಡದಿಂದ ಚೂರಿ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೆಕ್ಕಿತ್ತಡ್ಕದಲ್ಲಿ ನಡೆದಿದೆ. ರಿಕ್ಷಾ ಚಾಲಕ, ಮರ್ಧಾಳ ನಿವಾಸಿ ಉಮೇಶ್ ಚೂರಿ ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು,ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕೆಂಪು ಕಾರಿನಲ್ಲಿ ಬಂದ ತಂಡದಿಂದ ಕೃತ್ಯ ಎಸಗಲಾಗಿದೆ. ರಿಕ್ಷಾವನ್ನ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವನ್ನ ನೋಡಿದ ಉಮೇಶ್ ರಿಕ್ಷಾದಿಂದ ಇಳಿದು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು 200...Kannada News Portal