ಮಂಗಳೂರು : ಪೊಲೀಸರು ಅಂದರೆ ಹೆಚ್ಚಿನವರಿಗೆ ನೆಗೆಟೀವ್ ಭಾವನೆ ಇರುತ್ತದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಇರುವವರು. ಹೀಗಾಗಿ ವೃತ್ತಿಯಲ್ಲಿ ಖಡಕ್ ಆಗಿರಬೇಕಾಗುತ್ತದೆ. ಅದೇನೇ ಇರಲಿ, ದಕ್ಷಿಣ ಕನ್ನಡದಸುಳ್ಯ ಪೊಲೀಸ್ ಠಾಣೆ ಎಸ್ ಐ ಮಂಜುನಾಥ್ ಎಂಬುವವರು ಹಾರೆ ಹಿಡಿದು ರಸ್ತೆ ಹೊಂಡವನ್ನ ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾಣಿ ಮೈಸೂರು ರಸ್ತೆಯ ಪೆರಾಜೆ ರಸ್ತೆ ಮಧ್ಯೆ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು.

ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸ್ ಐ ಮಂಜುನಾಥ್ ಅವರು ಹೊಂಡ ಮುಚ್ಚಲು ಬೇಕಾದ ಸಿಮೆಂಟ್, ಇತರ ಸಾಮಾಗ್ರಿ, ಹಾರೆ, ಪಿಕ್ಕಾಸು ಹಿಡಿದುಕೊಂಡು ಸ್ಥಳಕ್ಕೆ ತೆರಳಿ ರಸ್ತೆ ಹೊಂಡವನ್ನು ಮುಚ್ಚಿದ್ದಾರೆ. ಮುಚ್ಚುವ ಕೆಲಸಕ್ಕೆ ಸಾಮಾಗ್ರಿ ಕೊಂಡು ಹೋಗಿ ಸ್ವತಃ ಹಾರೆ ಹಿಡಿದು ಹೊಂಡ ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Please follow and like us:
0
http://bp9news.com/wp-content/uploads/2018/08/WhatsApp-Image-2018-08-09-at-11.40.02-AM-1024x869.jpeghttp://bp9news.com/wp-content/uploads/2018/08/WhatsApp-Image-2018-08-09-at-11.40.02-AM-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಪೊಲೀಸರು ಅಂದರೆ ಹೆಚ್ಚಿನವರಿಗೆ ನೆಗೆಟೀವ್ ಭಾವನೆ ಇರುತ್ತದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಇರುವವರು. ಹೀಗಾಗಿ ವೃತ್ತಿಯಲ್ಲಿ ಖಡಕ್ ಆಗಿರಬೇಕಾಗುತ್ತದೆ. ಅದೇನೇ ಇರಲಿ, ದಕ್ಷಿಣ ಕನ್ನಡದಸುಳ್ಯ ಪೊಲೀಸ್ ಠಾಣೆ ಎಸ್ ಐ ಮಂಜುನಾಥ್ ಎಂಬುವವರು ಹಾರೆ ಹಿಡಿದು ರಸ್ತೆ ಹೊಂಡವನ್ನ ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾಣಿ ಮೈಸೂರು ರಸ್ತೆಯ ಪೆರಾಜೆ ರಸ್ತೆ ಮಧ್ಯೆ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದರಿಂದ...Kannada News Portal