ಮಂಗಳೂರು : ಜಮ್ಮು ಕಾಶ್ಮೀರದ ಆಸೀಫಾ ಎಂಬ 8ರ ಹರೆಯದ ಬಾಲಕಿ ಅತ್ಯಾಚಾರ ಪ್ರಕರಣವನ್ನ ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ನ ಮಹಿಳಾ ಘಟಕ ಪ್ರತಿಭಟನೆ ನಡೆಸಿತು. ಈ ವೇಳೆ ಕಾಂಗ್ರೆಸ್ ನ ಮಹಿಳಾ ಮುಖಂಡರೊಬ್ಬರು ಅತ್ಯಾಚಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಮಹಿಳಾ ಘಟಕದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ದೇಶಗಳಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲ. ಹೀಗಾಗಿ ಮಹಿಳೆಯರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ವೇಳೆ ಅತ್ಯಾಚಾರಿ ಕುಟುಂಬಕ್ಕೆ ಸಾಂತ್ವನ ಹೇಳಿ ಯಡವಟ್ಟು ಮಾಡಿಕೊಂಡ್ರು.

ಅಂದ್ರೆ “‌ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಇದಕ್ಕೆ ಎಲ್ಲಾ ಮಹಿಳೆಯರು ಧ್ವನಿಯಾಗಬೇಕೆಂದು” ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡ ಘಟನೆ  ಹಾಸ್ಯಸ್ಪದ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಈಗ ವೈರಲ್ ಕೂಡಾ ಆಗಿದೆ.

ಬಿಪಿ9 ನ್ಯೂಸ್ ಮಂಗಳೂರು

Please follow and like us:
0
http://bp9news.com/wp-content/uploads/2018/04/Justice-for-asipa-BP9-News-Web-Portal.jpeghttp://bp9news.com/wp-content/uploads/2018/04/Justice-for-asipa-BP9-News-Web-Portal-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ಜಮ್ಮು ಕಾಶ್ಮೀರದ ಆಸೀಫಾ ಎಂಬ 8ರ ಹರೆಯದ ಬಾಲಕಿ ಅತ್ಯಾಚಾರ ಪ್ರಕರಣವನ್ನ ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ನ ಮಹಿಳಾ ಘಟಕ ಪ್ರತಿಭಟನೆ ನಡೆಸಿತು. ಈ ವೇಳೆ ಕಾಂಗ್ರೆಸ್ ನ ಮಹಿಳಾ ಮುಖಂಡರೊಬ್ಬರು ಅತ್ಯಾಚಾರಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಮಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಮಹಿಳಾ ಘಟಕದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ದೇಶಗಳಲ್ಲಿ ಮಹಿಳೆಯರಿಗೆ...Kannada News Portal