ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೇತ್ರಾವತಿ ನದಿ ಅಪಾಯದ ಮಟ್ಟದತ್ತ ತುಂಬಿ ಹರಿಯುತ್ತಿದೆ. ತುಂಬಿ ಹರಿಯುವ ನದಿ ನೀರಿನಲ್ಲಿ ಯುವಕರು ಈಜಾಟ, ನೀರಾಟ ಆಡುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿದೆ. ನೇತ್ರಾವತಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು ಯಾವುದೇ ಹಂತದಲ್ಲಿ ಅಪಾಯ ಸಂಭವಿಸುವ ಲಕ್ಷಣಗಳು ಕಂಡು ಬರುತ್ತಿದೆ.


ಈ ನಡುವೆ ಸ್ಥಳೀಯ ಈಜುಪಟು ಯುವಕರು  ಹಳೆ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ನೇರವಾಗಿ ನೇತ್ರಾವತಿಯ ತುಂಬಿ ಹರಿಯುತ್ತಿರುವ ನೀರಿಗೆ ಧುಮುಕುತ್ತಿರುವ ಭಯಾನಕ ದೃಶ್ಯದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈಜುಪಟು ಯುವಕರ ಸಾಹಸ ಪ್ರದರ್ಶನದಿಂದ ಪ್ರೇರಿತಗೊಂಡ ಕೆಲ ಬಾಲಕರು ಕೂಡಾ ಇಂತಹದೇ ಸಾಹಸಕ್ಕೆ ಮುಂದಾಗುತ್ತಿರುವುದು ಕಂಡು ಬಂತು.

ಇನ್ನು ಕೆಲವೆಡೆ ನೆರೆ ನೀರಿನಲ್ಲಿ ಯುವಕರು ದೂಡಿ ಹಾಕಿ ಆಟವಾಡುತ್ತಿದ್ದ ದೃಶ್ಯಗಳೂ ಕಂಡು ಬಂದಿದೆ. ಇಂತಹ ಅಪಾಯಕಾರಿ ಸಾಹಸಕ್ಕೆ ಯುವಕರು ಮುಂದಾಗುತ್ತಿರುವ ಬಗ್ಗೆ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅನಾಹುತಗಳು ಸಂಭವಿಸುವುದಕ್ಕಿಂತ ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯ ಹಿರಿಯರು ಆಗ್ರಹಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/-ನದಿ-2-BP9-NEWS-e1531027858676.jpeghttp://bp9news.com/wp-content/uploads/2018/07/-ನದಿ-2-BP9-NEWS-e1531027858676-150x150.jpegBP9 Bureauಪ್ರಮುಖಮಂಗಳೂರುಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೇತ್ರಾವತಿ ನದಿ ಅಪಾಯದ ಮಟ್ಟದತ್ತ ತುಂಬಿ ಹರಿಯುತ್ತಿದೆ. ತುಂಬಿ ಹರಿಯುವ ನದಿ ನೀರಿನಲ್ಲಿ ಯುವಕರು ಈಜಾಟ, ನೀರಾಟ ಆಡುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿದೆ. ನೇತ್ರಾವತಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು ಯಾವುದೇ ಹಂತದಲ್ಲಿ ಅಪಾಯ ಸಂಭವಿಸುವ ಲಕ್ಷಣಗಳು ಕಂಡು ಬರುತ್ತಿದೆ. var...Kannada News Portal