ಮಂಗಳೂರು : ಮೈಸೂರಿನಲ್ಲಿ ನರ್ಸಿಂಗ್ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೆಲ್ಲಿಪಲಿಕೆ ಅಜಿಲಮೊಗರು ನಿವಾಸಿ ಮಹಮ್ಮದ್ ಅಲ್ತಾಫ್ ಎಂದು ಗುರುತಿಸಲಾಗಿದೆ. ಕಳೆದ ಜುಲೈ 20ರಂದು ಮೈಸೂರು ನಗರದ ಕೆ.ಆರ್. ಆಸ್ಪತ್ರೆಯ ಆವರಣದ ನರ್ಸಿಂಗ್ ಹಾಸ್ಟೆಲ್​ಗೆ ಆರೋಪಿ ರಾತ್ರಿ ಸುಮಾರು 2 ಗಂಟೆಗೆ ನುಗ್ಗಿದ್ದ.

ಸೆಕ್ಯೂರಿಟಿ ಗಾರ್ಡ್​ಗೆ ಚಾಕು ತೋರಿಸಿ ಬೆದರಿಸಿ ಒಳಗೆ ಮಲಗಿದ್ದ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಇತರ ವಿದ್ಯಾರ್ಥಿನಿಯರು ಎಚ್ಚರಗೊಂಡಾಗ ಓಡಿ ಹೋಗಿದ್ದ. ಈ ಬಗ್ಗೆ ಮೈಸೂರು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಈತ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬನ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯಂತೆ ಉಪ್ಪಿನಂಗಡಿ ಪೊಲೀಸರ ತಂಡ ಆರೋಪಿಯನ್ನ ಬಂಧಿಸಿದೆ.
Please follow and like us:
0
http://bp9news.com/wp-content/uploads/2018/08/WhatsApp-Image-2018-08-11-at-4.14.39-PM-576x1024.jpeghttp://bp9news.com/wp-content/uploads/2018/08/WhatsApp-Image-2018-08-11-at-4.14.39-PM-150x150.jpegBP9 Bureauಪ್ರಮುಖಮಂಗಳೂರುಮೈಸೂರುರಾಜಕೀಯಮಂಗಳೂರು : ಮೈಸೂರಿನಲ್ಲಿ ನರ್ಸಿಂಗ್ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೆಲ್ಲಿಪಲಿಕೆ ಅಜಿಲಮೊಗರು ನಿವಾಸಿ ಮಹಮ್ಮದ್ ಅಲ್ತಾಫ್ ಎಂದು ಗುರುತಿಸಲಾಗಿದೆ. ಕಳೆದ ಜುಲೈ 20ರಂದು ಮೈಸೂರು ನಗರದ ಕೆ.ಆರ್. ಆಸ್ಪತ್ರೆಯ ಆವರಣದ ನರ್ಸಿಂಗ್ ಹಾಸ್ಟೆಲ್​ಗೆ ಆರೋಪಿ ರಾತ್ರಿ ಸುಮಾರು 2 ಗಂಟೆಗೆ ನುಗ್ಗಿದ್ದ. var domain = (window.location != window.parent.location)?...Kannada News Portal